ಮೈಸೂರು:ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಕಾಂಗ್ರೆಸ್ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ನೀಡಲೆಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತಂತೆ ಅವರಿಗೆ ಆಫರ್​ ಕೊಟ್ಟಿರುವ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ, ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ನಿವೃತ್ತಿಗೊಳಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ ಅವರು, ನಮ್ಮ ಬಳಿ 32 ಮತಗಳಿವೆ. ಕಾಂಗ್ರೆಸ್ ಬಳಿ ನಮಗಿಂತ ಕಡಿಮೆ ಮತಗಳಿವೆ. ಕಾಂಗ್ರೆಸ್​ಗಿಂತ ಜೆಡಿಎಸ್ ಅಭ್ಯರ್ಥಿಗೆ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಬೇಕಿದ್ದರೆ ನಮ್ಮ ಪಕ್ಷದ 2ನೇ ಪ್ರಾಶಸ್ತ್ಯದ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿಗೆ ನೀಡುತ್ತೇವೆ. ಕಾಂಗ್ರೆಸ್ ಪಕ್ಷದ ಎರಡನೇ ಪ್ರಾಶಸ್ತ್ಯದ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ನೀಡಲಿ ಎಂದು ಕಾಂಗ್ರೆಸ್ ಬಳಿ ಹೊಸ ಆಫರ್ ಮುಂದಿಟ್ಟರು.
ಈ ಬಗ್ಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೊದಲು ಚಿಂತಿಸಬೇಕಿತ್ತು. ಈ ಸಂಬಂಧ ನಮ್ಮೊಂದಿಗೆ ಕಾಂಗ್ರೆಸ್​ನ ಯಾವೊಬ್ಬ ನಾಯಕರು ಚರ್ಚೆ ‌ನಡೆಸಿಲ್ಲ. ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ ನಂತರ ಈ ರೀತಿ ಹೇಳೋದು ಸರಿಯಲ್ಲ. ನಮ್ಮ ಬಳಿ 32 ಮತಗಳಿವೆ. ಬಿಜೆಪಿ ಸೋಲಬೇಕಾದರೆ ಕಾಂಗ್ರೆಸ್ ನಮ್ಮ ಅಭ್ಯರ್ಥಿಗೆ ಬೆಂಬಲ ನೀಡಬೇಕು.ಈ ಹಂತದಲ್ಲಿ ಕಾಂಗ್ರೆಸ್​ಗೆ ಬೆಂಬಲ ನೀಡಬೇಕೆಂದು ಹೇಳುತ್ತಿರುವುದು ಸರಿಯಲ್ಲ‌ ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ ಚಡ್ಡಿ ಅಭಿಯಾನ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ ಅವರು, ಚಡ್ಡಿಯೊಳಗೆ ಏನೂ ಇಲ್ಲ. ಇಬ್ಬರ ಜಗಳದಲ್ಲಿ ಚಡ್ಡಿ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ ಅಷ್ಟೇ. ಇವರ ಜಗಳದಿಂದ ಚಡ್ಡಿಗೆ ಭಾರೀ ಬೇಡಿಕೆ ಬಂದಿದೆ ಎಂದು ವ್ಯಂಗ್ಯವಾಡಿದರು.
ಚಡ್ಡಿ ಹೊಲಿಯುವ ಟೈಲರ್​ಗೆ ಬೇಡಿಕೆ ಶುರು ಆಗಿದೆ. ಚಡ್ಡಿ ನಮ್ಮ ರೈತರ ಸಂಕೇತವಾಗಿದೆ. ನಮ್ಮ ರೈತರು ಹೊಲದಲ್ಲಿ ಚಡ್ಡಿ ಹಾಕೊಂಡು ಕೆಲಸ ಮಾಡುತ್ತಾರೆ. ಚಡ್ಡಿ ಚಡ್ಡಿ ಎಂದು ಯಾಕೆ ರೈತರಿಗೆ ಅಪಮಾನ ಮಾಡುತ್ತೀರಿ. ಈ ಚಡ್ಡಿಯ ಬಗ್ಗೆ ನನ್ಯಾಕೆ ಮಾತನಾಡಲಿ ಎಂದು ಹೇಳಿದರು.
ಬೆಂಗಳೂರಿನಲ್ಲಿ ಉಗ್ರನ ಸಂಸಾರ: ಹಿಂದೂಗಳ ಹತ್ಯೆಗೆ ಸಂಚು- ಯುವಕರೇ ಟಾರ್ಗೆಟ್​! ಸಿಎಂ ಹೇಳಿದ್ದೇನು?
ಕಾಂಗ್ರೆಸ್​ಗೆ ‘ಆತ್ಮಸಾಕ್ಷಿ ಮತ’: ಸಿದ್ದು ಹೇಳಿಕೆಗೆ ಸಿಎಂ ನಗುವೇ ಉತ್ತರ- ಎಚ್​ಡಿಕೆ ಟಾಂಗ್​!
ಹಿಜಾಬ್​ ವಿಷ್ಯದಲ್ಲಿ ಗಲಾಟೆ: ಕಾಣದ ಕೈಗಳಿಗೆ ಶಾಸಕ ಖಾದರ್​ ನೀಡಿದ್ರು ಶಾಕ್​! ಅವರು ಹೇಳಿದ್ದೇನು ಕೇಳಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
