ಶಿವಮೊಗ್ಗ:ಚಾಮರಾಜನಗರದಲ್ಲಿ ಆಕ್ಸಿಜನ್‌ ಕೊರತೆಯಿಂದ ಉಂಟಾಗಿರುವ ಅಪಾರ ಸಾವು ನೋವು ಇಡೀ ದೇಶದ ಗಮನ ಸೆಳೆದು, ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಾಗದಂತೆ ಕ್ರಮವಹಿಸಲು ಮುಂದಾಗಿದೆ.
ಇದಾಗಲೇ ಹೈಕೋರ್ಟ್‌ ಕೂಡ ಈ ಘಟನೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಆಕ್ಸಿಜನ್‌ ಕೊರತೆಯಾಗದಂತೆ ಕೂಡಲೇ ಕ್ರಮ ಕೈಗೊಳ್ಳುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಆಕ್ಸಿಜನ್‌ ಕೊರತೆಯ ಮೇಲ್ವಿಚಾರಣೆ ನಡೆಸುವ ಸಂಬಂಧ ಆಕ್ಸಿಜನ್ ಉಸ್ತುವಾರಿಯಾಗಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಸರ್ಕಾರ ನೇಮಿಸಿದೆ.
ನೇಮಕವಾಗಿರುವ ತಕ್ಷಣ ಆಕ್ಸಿಜನ್ ಉತ್ಪಾದನೆ ಸಂಬಂಧ ಪರಿಶೀಲನೆಗೆ ಶಿವಮೊಗ್ಗಕ್ಕೆ ಶೆಟ್ಟರ್‌ ಆಗಮಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ವಿಐಎಸ್ಎಲ್ ಘಟಕದ ಪರಿಶೀಲನೆಗೆ ಭೇಟಿ ಕೊಡಲಿರುವ ಸಚಿವರು, ವಿಐಎಸ್ಎಲ್ ನ ಆಕ್ಸಿಜನ್ ಘಟಕದಲ್ಲಿ ಅದರ ಉತ್ಪಾದನೆ ಮಾಡಲು ಕ್ರಮ ತೆಗೆದುಕೊಳ್ಳುವ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ಈ ಘಟಕದಲ್ಲಿ ಪ್ರತಿನಿತ್ಯ 320 ಕೆ ಎಲ್ ಡಿ ಉತ್ಪಾದನಾ ಸಾಮರ್ಥ್ಯವಿದ್ದು, ಇಲ್ಲಿ ಮುಂದಿನ ಕ್ರಮದ ಕುರಿತು ಚಿಂತನೆ ನಡೆಸಲಾಗುವುದು.
ಕಳೆದ ಎರಡು ವರ್ಷದ ಹಿಂದೆ ಘಟಕದ ಅವಧಿ ಮುಗಿದ ಕಾರಣ ಅದು ಸ್ಥಗಿತಗೊಂಡಿದೆ. ಈ ಸಂಬಂಧ ಈ ಹಿಂದೆ ಗುತ್ತಿಗೆ ಪಡೆದಿದ್ದ ಎಂಎಸ್ಪಿಎಲ್ ಕಂಪೆನಿ ಜತೆ ಜಿಲ್ಲಾಡಳಿತದಿಂದ ಮಾತುಕತೆ ನಡೆಯಲಿದ್ದು, ಮತ್ತೆ ಆಕ್ಸಿಜನ್ ಉತ್ಪಾದನೆ ಮಾಡುವ ಸಂಬಂಧ ಒಪ್ಪಂದ ಸಾಧ್ಯತೆ ಇದೆ.
ಗಂಡನನ್ನು ಉಳಿಸಿಕೊಡಿ… ಸಿಎಂ ಮನೆ ಎದುರು ಮಹಿಳೆಯ ಆಕ್ರಂದನ- ಚಿಕಿತ್ಸೆ ಸಿಗುವ ಮೊದಲೇ ಸಾವು!

ಸಿನಿ ರಂಗಕ್ಕೆ ಕರೊನಾಘಾತ! ಒಂದೇ ದಿನ ಸೋಂಕಿಗೆ ಬಲಿಯಾದ ಇಬ್ಬರು ತಾರೆಯರು

ಕೋವಿಶೀಲ್ಡ್‌ ಲಸಿಕೆ ತಯಾರಕ ಪೂನಾವಾಲಾಗೆ ಸಿಎಂ, ಪ್ರಭಾವಿಗಳಿಂದ ಕೊಲೆ ಬೆದರಿಕೆ! ಭದ್ರತೆಗೆ ಮೊರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 12 =
Remember me
