ಮಂಗಳೂರು:ರಾಜ್ಯದ ನೆರೆ ಸಂತ್ರಸ್ತರ ಸಹಾಯಾರ್ಥವಾಗಿ ವಿಜಯವಾಣಿ ಮತ್ತು ದಿಗ್ವಿಜಯ 24×7 ನ್ಯೂಸ್​ ಮಾಧ್ಯಮ ಸಹಯೋಗದಲ್ಲಿ ದಿಗ್ಗಜ ಗಾಯಕ ಡಾ.ಎಸ್​.ಪಿ.ಬಾಲಸುಬ್ರಮಣ್ಯಂ ಅವರ ಕಂಠಸಿರಿಯಲ್ಲಿ ಪಂಚಭಾಷಾ ಗೀತೆಗಳ ಸಂಗೀತ ಸಂಜೆಯನ್ನು ಮಂಗಳೂರಿನಲ್ಲಿ ಇದೇ ಭಾನುವಾರ ಹಮ್ಮಿಕೊಳ್ಳಲಾಗಿದೆ.
ದಿನಾಂಕ 19-1-2020ರ ಭಾನುವಾರ ಸಂಜೆ 6.30ರಿಂದ ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್​ ಕಾಲೇಜು ಗ್ರೌಂಡ್ಸ್​ನಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ 24×7 ನ್ಯೂಸ್​ ಅರ್ಪಿಸುವ ಅಮೃತನೋನಿ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.
ಭಾರತೀಯ ಚಿತ್ರರಂಗದ ಎಲ್ಲ ಭಾಷೆಗಳಲ್ಲೂ ಹಾಡಿಗೆ ಧ್ವನಿಗೂಡಿಸಿ, ಮೋಡಿ ಮಾಡಿರುವ ಸಂಗೀತ ಲೋಕದ ಮಾಂತ್ರಿಕ ಡಾ.ಎಸ್​.ಪಿ. ಬಾಲಸುಬ್ರಮಣ್ಯಂ ಅವರು ತಮ್ಮ ಮಧುರ ಕಂಠದಿಂದ ಸಂಗೀತ ಪ್ರಿಯರನ್ನು ರಂಜಿಸಲಿದ್ದಾರೆ.
ನೆರೆ ಸಂತ್ರಸ್ತರ ಸಹಾಯಾರ್ಥವಾಗಿ ಈ ಕಾರ್ಯಕ್ರಮವನ್ನು ಕೋತಾಸ್​ ಕಾಫಿ ಹಾಗೂ ಎಂಟಿಆರ್​ ಗೊಜ್ಜು ಮ್ಯಾಜಿಕ್​ ಮಸಾಲಾ ಅವರಿಂದ ಆಯೋಜಿಸಲ್ಪಟ್ಟಿದೆ. ನಂದಿನಿ ಅಸೋಸಿಯೇಟ್​ ಸ್ಪಾನ್ಸರ್​ ಆಗಿದ್ದು, ಸ್ವಾಮಿ ಎಂಟರ್​ಪ್ರೈಸಸ್​ ಅವರಿಂದ ಈವೆಂಟ್​ ತಯಾರಿ ನಡೆದಿದೆ. ಕಾರ್ಯಕ್ರಮಕ್ಕೆ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್​ ಮಾಧ್ಯಮ ಸಹಯೋಗವಿದೆ.
ಪಾಸ್​ಗಳಿಗಾಗಿ ಸಂಪರ್ಕಿಸಿಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು 9900331622 ನಬರ್​ಗೆ ಕರೆ ಮಾಡಿ ಪಾಸ್​ಗಳನ್ನು ಪಡೆದುಕೊಳ್ಳಬಹುದಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 13 =
Remember me
