ಬೆಂಗಳೂರು:ಇಡೀ ಜಗತ್ತು ಮಹಾಮಾರಿ ಕರೊನಾಗೆ ಸಿಲುಕಿ ಅಕ್ಷರಶಃ ನಲುಗಿದೆ. ಇದು ತಂದೊಡ್ಡುತ್ತಿರುವ ಸಾವು-ನೋವಿನ ತೀವ್ರತೆ ಎಲ್ಲೆ ಮೀರಿದ್ದು, ಮಾನವೀಯತೆಯನ್ನೂ ದೂರವಾಗಿಸುತ್ತಿದೆ. ಇಂತಹ ಸೋಂಕಿನ ವಿರುದ್ಧ ಹೊರಾಟಕ್ಕೆ ಜನರನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಹಿರಿಯ ಸಾಹಿತಿ ಜಯಂತಕಾಯ್ಕಿಣಿ ಅವರು ಜಾಗೃತಿಗೀತೆ ರಚಿಸಿದ್ದರು. ಇದಕ್ಕೆ ಸ್ವರ ತುಂಬಿದ್ದು ಗಾನ ಗಾರುಡಿಗ ಎಸ್​.ಪಿ. ಬಾಲಸುಬ್ರಹ್ಮಣ್ಯಂ.
”ಕಾಣದಂತೆ ಆಕ್ರಮಿಸಿದೆ ವೈರಿ ಕರೊನಾ, ಅದಕೆ ಈಗ ನಾವೇ ದಾರಿ ಆಗದಿರೋಣ. ಕಾಲ ಬುಡಕೆ ಬರುವತನಕ ಕಾಯದಿರೋಣ.. ಕಾಲ ಬುಡಕೆ ಬರುವ ತನಕ ಕಾಯದಿರೋಣ… ನಾವೇ ಇಂದು ನಮಗೊಂದು ಅವಕಾಶ ಕೊಡೋಣ.. ” ಎಂದು ಎಸ್​ಪಿಬಿ ಹಾಡಿರುವ ಈ ಹಾಡನ್ನು ಒಮ್ಮೆ ಕೇಳಿದರೆ ನಮ್ಮ ಬದುಕು ಎತ್ತ ಸಾಗುತ್ತಿದೆ? ಏತಕ್ಕಾಗಿ ಈ ಜಂಜಾಟ, ಮಾನವೀಯ ನೆಲೆಗಟ್ಟು-ಮನುಷ್ಯತ್ವದ ಬಗ್ಗೆ ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳುವಂತೆ ಮಾಡಲಿದೆ. ಮತ್ತೆ ಮತ್ತೆ ಈ ಹಾಡನ್ನು ಕೇಳಬೇಕು ಅನ್ನಿಸದೆ ಇರದು. ಎಸ್​ಬಿಪಿ ಕನ್ನಡದಲ್ಲಿ ಹಾಡಿದ ಕೊನೆಯ ಹಾಡು ಕೂಡ ಇದೇ. ಇದು ಸಿನಿಮೇತರ ಹಾಡು. ಮಾಯಾಬಜಾರ್​ ಚಿತ್ರಕ್ಕಾಗಿ ಹಾಡಿದ ಹಾಡು ಕನ್ನಡ ಸಿನಿಮಾಕ್ಕಾಗಿ ಹಾಡಿದ್ದ ಕೊನೆಯ ಹಾಡು. ಎಸ್​ಪಿಬಿ ಅವರಿಗೂ ಕರೊನಾ ಸೋಂಕು ತಗುಲಿತ್ತು. ಬಳಿಕ ಗುಣಮುಖರಾಗಿದ್ದರು. ಮತ್ತೆ ಆರೋಗ್ಯ ಹದಗೆಟ್ಟಿತ್ತು. ಚಿಕಿತ್ಸೆ ಫಲಿಸದೆ ಶುಕ್ರವಾರ ನಿಧನರಾದರು.
https://www.facebook.com/VVani4U/videos/357568952099843
ಜಯಂತ ಕಾಯ್ಕಿಣಿ ರಚನೆಯ ಎಸ್​ಪಿಬಿ ಗಾಯನದ ಈ ಗೀತೆ ಇಲ್ಲಿದೆ.
ಕಾಣದಂತೆ ಆಕ್ರಮಿಸಿದೆ ವೈರಿ ಕರೊನಾಅದಕೆ ಈಗ ನಾವೇ ದಾರಿ ಆಗದಿರೋಣಕಾಲ ಬುಡಕೆ ಬರುವತನಕ ಕಾಯದಿರೋಣಕಾಲ ಬುಡಕೆ ಬರುವ ತನಕ ಕಾಯದಿರೋಣ…
ಹೆಸರು ಹುದ್ದೆ ಆಸ್ತಿ-ಗೀಸ್ತಿ ಬರದು ನೆರವಿಗೆವೈದ್ಯರಾದಿ ಬಳಗ ಸಿದ್ಧ ನಮ್ಮ ಉಳುವಿಗೆಅವರಿಗಾಗಿ ಸೌಕರ್ಯ ಸಿದ್ಧವಿಡೋಣಅವರಿಗಾಗಿ ಸೌಕರ್ಯ ಸಿದ್ಧವಿಡೋಣ..ನಾವೇ ಇಂದು ನಮಗೊಂದು ಅವಕಾಶ ಕೊಡೋಣ.
ಕೈ ತೊಳೆದೇ ಮುಟ್ಟಬೇಕು ಅಂತಿದ್ದೆವು ಅಂದುಮುಟ್ಟಿದರೆ ಏನನ್ನೂ ಕೈತೊಳೆಯೋಣ ಇಂದುಸಂತೆಯಲಿ ಸಂದಣಿಯಲಿ ಹೋಗದಿರೋಣಸಂತೆಯಲಿ ಸಂದಣಿಯಲಿ ಹೋಗದಿರೋಣನಾವೇ ಇಂದು ನಮಗೊಂದು ಅವಕಾಶ ಕೊಡೋಣ
ಬೀದಿಬದಿ ವ್ಯಾಪಾರಿ ಎಲ್ಲಿ ಹೋದರೋಮನೆಯೇ ಇರದ ಕೂಲಿ ಬಳಗ ಎಲ್ಲಿ ಇರುವರೋಅವರಿಗಾಗಿ ಬುತ್ತಿಯನ್ನು ಮೀಸಲಿಡೋಣಾಅವರಿಗಾಗಿ ಬುತ್ತಿಯನ್ನು ಮೀಸಲಿಡೋಣಾ..ನಾವೇ ಇಂದು ನಮಗೊಂದು ಅವಕಾಶ ಕೊಡೋಣಾ..
ಭೂಮಿ, ಬಾನು, ನೀರು, ಕಾಡು ಧ್ವಂಸ ಮಾಡುತಾನಾವೇ ತಂದುಕೊಂಡೆವೀಗ ಚಂಡಮಾರುತಈಗಲಾದ್ರು ಅಟ್ಟಹಾಸ ಬಿಟ್ಟು ಬಿಡೋಣಾನಾವೇ ಇಂದು ನಮಗೊಂದು ಅವಕಾಶ ಕೊಡೋಣಾ
ಕಾಣದಂತೆ ಆಕ್ರಮಿಸಿದೆ ವೈರಿ ಕರೊನಾಅದಕೆ ಈಗ ನಾವೇ ದಾರಿ ಆಗದಿರೋಣಾಕಾಲ ಬುಡಕೆ ಬರುವತನಕ ಕಾಯದಿರೋಣಾಕಾಲ ಬುಡಕೆ ಬರುವ ತನಕ ಕಾಯದಿರೋಣಾನಾವೇ ಇಂದು ನಮಗೊಂದು ಅವಕಾಶ ಕೊಡೋಣಾ
ಶೂಟಿಂಗ್​ ಸ್ಪಾಟ್​ನಲ್ಲೇ ಪ್ರಾಣಬಿಟ್ಟ ಪೋಷಕ ನಟನ ಕೊನೇ ಫೋಟೋ ಇದು!

PHOTO GALLERY| ಸ್ವರ ಮಾಂತ್ರಿಕ ಎಸ್​.ಪಿ. ಬಾಲಸುಬ್ರಹ್ಮಣ್ಯಂರ ಅಪರೂಪದ ಕ್ಷಣಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + twenty =
Remember me
