ತುಮಕೂರು:ಪಾವಗಡ ಸಮೀಪ ಪಳವಳ್ಳಿಕಟ್ಟೆ ಬಳಿ ಕಳೆದ ಶನಿವಾರ ನಡೆದ ಬಸ್‌ ಅಪಘಾತದಲ್ಲಿ 6 ಮಂದಿ ಮೃತಪಟ್ಟಿದ್ದು, 40 ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಇದಾಗಲೇ ಹಲವಾರು ರೀತಿಯ ಹೇಳಿಕೆಗಳು ಬರತೊಡಗಿವೆ.
ಆದರೆ ದುರಂತಕ್ಕೂ ಮೊದಲು ಬಸ್‌ನ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಅದೀಗ ಲಭ್ಯವಾಗಿದೆ. ಘಟನೆ ನಡೆದ ಪಾವಗಡ ತಾಲೂಕಿನ ವೈಎನ್ ಹೊಸಕೋಟೆ ಮತ್ತು ಪಾವಗಡ ನಡುವಿನ ಬುಡ್ಡಾರೆಡ್ಡಿಹಳ್ಳಿ ಟೋಲ್ ಬರುವ ವೇಳೆಗೆ ಬಸ್ ಟಾಪ್ ಮೇಲೆ ನಲವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಕುಳಿತಿರುವ ದೃಶ್ಯವನ್ನು ಸಿಸಿಟಿವಿಯಲ್ಲಿ ನೋಡಬಹುದಾಗಿದೆ.
ಈ ಪರಿಯಲ್ಲಿ ಜನರು ಕುಳಿತಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಆದರೆ ಈ ದಾರಿಯಲ್ಲಿ ಬಸ್‌ಗಳ ಕೊರತೆ ಇರುವ ಕಾರಣ, ಇದು ಅನಿವಾರ್ಯ ಎನ್ನುತ್ತಾರೆ ಪ್ರಯಾಣಿಕರು. ಪ್ರತಿ ಶುಕ್ರವಾರ, ಶನಿವಾರ ತುಂಬಾ ರಷ್ ಇರುತ್ತೆ. ಶುಕ್ರವಾರ ಪಾವಗಡದ ಸಂತೆಗೆ ಜನ ಹೆಚ್ಚಾಗಿ ಖಾಸಗಿ ಬಸ್ ಬಳಕೆ ಮಾಡ್ತಾರೆ. ಪಾವಗಡದ ಶನಿಮಾಹತ್ಮ ದೇವಲಯಕ್ಕೂ ಜನ ಹೆಚ್ಚಾಗಿ ತೆರಳುತ್ತಾರೆ. ಬೆಳಗ್ಗೆ ಇರೋದು ಎರಡು ಖಾಸಗಿ ಬಸ್. ಒಂದು ಮಿಸ್ ಆಯಿತು ಅಂದ್ರೆ ಬಸ್ ರಷ್ ಇರುತ್ತದೆ. ಸರ್ಕಾರಿ ಬಸ್ ಹಳ್ಳಿಗಳಿಗೆ ಬರಲ್ಲ. ಹಳ್ಳಿಗಳ ಬಳಿ ಹಾದು ಹೋಗುವ ರಸ್ತೆಯಲ್ಲಿ ಬಸ್ ಸ್ಟಾಪ್ ಕೊಡಲ್ಲ. ತುರ್ತು ಕೆಲಸ ಇದ್ದಾಗ ನಾವು ಹೋಗಲೇಬೇಕು. ನಮ್ಮ ಕೆಲಸ ಕಾರ್ಯಗಳನ್ನು ಮಾಡಲೇ ಬೇಕು ಎನ್ನುತ್ತಾರೆ ಜನರು.
ಈ ಕುರಿತು ಹೇಳಿಕೆ ನೀಡಿರುವ ಬಸ್ ನಿರ್ವಾಹಕ ಮುರುಳಿ, ಬಸ್ ನಲ್ಲಿ 127 ಜನರಿದ್ದರು. ನಾನು ಬಸ್ ಟಾಪ್‌ನಲ್ಲಿದ್ದೆ.ಬಸ್ ಡ್ರೈವರ್ ನಿಧಾನವಾಗಿ ಹೋಗುತ್ತಿದ್ದರು. ಬಸ್ ಮೇಲೆ ಇದ್ದರಿಂದ ಯಾಕೆ ಪಲ್ಟಿ ಆಯ್ತು ಅಂತ ಗೊತ್ತಿಲ್ಲ. ಬೇಡ ಬೇಡ ಅಂದರೂ ಜನರು ಹತ್ತಿದ್ರು. ಜನರು ಹತ್ತಬೇಡ ಅಂತ ಹೇಳಲು ಆಗಲ್ಲ. ನನಗೂ ಗಾಯಗಳಾಗಿವೆ ಎಂದಿದ್ದಾರೆ.
ಪಾವಗಡದಲ್ಲಿ ಸಂಭವಿಸಿದ ಭೀಕರ ಬಸ್​ ಅಪಘಾತಕ್ಕೆ ಪ್ರಮುಖ ನಾಲ್ಕು ಕಾರಣಗಳು ಹೀಗಿವೆ….

ಕಣ್ಣೆದುರೇ ಹಿಂದೂಗಳ ಶವಗಳ ರಾಶಿ, ಇಸ್ಲಾಂ ಒಪ್ಪಿಕೊಳ್ಳಲು ಬೆದರಿಕೆ… ಆಗಲೇ ಸರ್ಕಾರ ಮನಸ್ಸು ಮಾಡಿದ್ದರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
