ಬೆಳಗಾವಿ:ಪ್ರತಿದಿನದ ಲೆಕ್ಕವನ್ನು ಪಕ್ಕಾ ಕೊಟ್ಟರೂ, ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ನೌಕರನೊಬ್ಬ ತನ್ನ ಬಂಕ್ ಮಾಲೀಕನಿಗೆ 44 ಲಕ್ಷ ರೂ. ವಂಚನೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಒಂದೂವರೆ ವರ್ಷದ ನಂತರ ಮಾಲೀಕನಿಗೆ ತಾನು ಮೋಸ ಹೋಗಿರುವ ಬಗ್ಗೆ ತಿಳಿದಿದ್ದು, ಪೊಲೀಸರಿಗೆ ದೂರು ದಾಖಲು ಮಾಡಿದಾಗ ಮಹಾ ವಂಚನೆ ಬೆಳಕಿಗೆ ಬಂದಿದೆ.‌ಆಗಿದ್ದೇನೆಂದರೆ, ಬೆಳಗಾವಿಯ ರೋಹಿತ್ ರಾಜು ಎಂಬಾತ ಮೂರು ವರ್ಷದಿಂದ ಬೆಳಗಾವಿಯ ಮಚ್ಚೆಯಲ್ಲಿರುವ ಸೋಮನಾಥ್ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ. ಸುನೀಲ್ ಶಿಂಧೆ ಇದರ ಮಾಲೀಕರು. ದಿನವೂ ಕೆಲಸವಾದ ಮೇಲೆ ಪಕ್ಕಾ ಲೆಕ್ಕ ಕೊಡುತ್ತಿದ್ದ ರೋಹಿತ್‌. ಆದರೆ ತಮಗೆ ಲಾಸ್‌ ಆಗುತ್ತಿರುವುದು ವರ್ಷದ ಬಳಿಕ ಶಿಂಧೆ ಅವರ ಗಮನಕ್ಕೆ ಬಂದಿದೆ.
ಆಮೇಲೆ ದೂರು ದಾಖಲಾದಾಗ ಪೊಲೀಸರು ಭಯಾನಕ ಸತ್ಯ ಬಿಚ್ಚಿಟ್ಟಿದ್ದಾರೆ. ಅದೇನೆಂದರೆ, ಪೆಟ್ರೋಲ್ ಬಂಕ್‌ಗಳಲ್ಲಿ ಫೋನ್ ಪೇ, ಗೂಗಲ್ ಪೇ ಮೂಲಕ ಜನ ಪೇಮೆಂಟ್ ಮಾಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಗೂಗಲ್‌ ಮತ್ತು ಫೋನ್‌ ಪೇನವರು ವ್ಯಾಪಾರಸ್ಥರಿಗಾಗಿ ಒಂದು ಅನುಕೂಲ ಮಾಡಿಕೊಟ್ಟಿದ್ದಾರೆ, ಅದೇನೆಂದರೆ ಕೆಲವೊಮ್ಮೆ ಪೆಟ್ರೋಲ್‌ ದುಡ್ಡು ಹಾಕುವಾಗ ಜನರು ಒಂದು ಜೀರೋ ಹೆಚ್ಚು ಹಾಕಿಬಿಡುತ್ತಾರೆ. ಅಂದರೆ 100 ರೂಪಾಯಿ ಪೆಟ್ರೋಲ್‌ ಹಾಕಿಸಿಕೊಂಡರೆ 1000 ರೂಪಾಯಿ ಕೊಟ್ಟುಬಿಡುತ್ತಾರೆ. ಅಂಥ ಸಂದರ್ಭದಲ್ಲಿ 900 ರೂಪಾಯಿ ವಾಪಸ್‌ ಕೊಡಬೇಕಲ್ಲ? ಈ ವೇಳೆ, ಕ್ಯಾಶ್ ಕೊಡಲು ಬರುವುದಿಲ್ಲ. ಆಗ ಫೋನ್ ಪೇದಲ್ಲೇ ಈ ರಿಫಂಡ್ ಆಪ್ಷನ್ ಬಳಸಿಕೊಂಡು ಉಳಿದ ಹಣ ಮರಳಿಸಬಹುದು.
ದುರ್ಬಳಕೆ ಮಾಡಿಕೊಂಡ ರೋಹಿತ್ ರಿಫಂಡ್ ಆಪ್ಷನ್ ಬಳಸಿಕೊಂಡು ನಿತ್ಯವೂ ತನ್ನ ನಂಬರ್‌ನಿಂದ ಪಂಪ್‍ನ ನಂಬರ್‌ಗೆ ಎಂಟು, ಹತ್ತು ಸಾವಿರ ಫೋನ್ ಪೇ ಮಾಡಿ ಮಾಲೀಕನಿಗೆ ಲೆಕ್ಕವನ್ನೂ ಕೊಡುತ್ತಿದ್ದ. ಇದಾದ ಬಳಿಕ ರಾತ್ರಿ ಮನೆಗೆ ವಾಪಾಸ್ ಆಗುವಾಗ ಪಂಪ್‍ನ ನಂಬರ್‌ನಿಂದ ಮತ್ತೆ ತನ್ನ ಅಕೌಂಟ್‍ಗೆ ತಾನು ಹಾಕಿದ ಹಣವನ್ನು ರಿಫಂಡ್ ಮಾಡಿಕೊಂಡು ಕಳೆದ ಒಂದೂವರೆ ವರ್ಷದಲ್ಲಿ 44 ಲಕ್ಷ ರೂ.ಟೋಪಿ ಹಾಕಿದ್ದಾನೆ.
ಹೀಗೆ ರಿಫಂಡ್ ಆದ ಹಣದ ಮೇಸೆಜ್​ ಅನ್ನು ಕೂಡಲೇ ಡಿಲಿಟ್ ಮಾಡಿ ತೆರಳುತ್ತಿದ್ದ. ದಿನಕ್ಕೆ 200 ರಿಂದ 300 ಜನ ಫೋನ್ ಪೇಯಿಂದ ಹಣ ವರ್ಗಾವಣೆ ಮಾಡುತ್ತಿದ್ದು, ಯಾರಿಗೆ ರಿಫಂಡ್ ಆಗಿದೆ ಅನ್ನೋದನ್ನು ಮಾಲೀಕ ನೋಡಲು ಹೋಗುತ್ತಿರಲಿಲ್ಲ. ಇದನ್ನು ಬಳಸಿಕೊಂಡು ಸಿಬ್ಬಂದಿ ರೋಹಿತ್ ಒಂದೂವರೆ ವರ್ಷದಲ್ಲಿ 44 ಲಕ್ಷ ರೂ. ಎಗರಿಸಿದ್ದಾನೆ.
ಆರೋಪಿ ರೋಹಿತ್‍ನನ್ನು ಬಂಧಿಸಲಾಗಿದ್ದು, ಈಗಾಗಲೇ ಆತನಿಂದ ಸುಮಾರು 28 ಲಕ್ಷ ರೂ.ಹಣವನ್ನು ವಸೂಲಿ ಮಾಡಿಕೊಳ್ಳಲಾಗಿದೆ.
VIDEO: ನಾನು ಹೆಲ್ಮೆಟ್‌ ಹಾಕಬೇಕು ಅಂದ್ರೆ ನೀವೇ ಕೊಡ್ಸಿ ಸರ್‌…. ಬೈಕ್‌ ಸವಾರ-ಪೊಲೀಸ್ ಜಟಾಪಟಿ

ಕೊನೆಯ ಬಾರಿ ತಬ್ಬಿಕೊಳ್ಳುವೆ, ಮತ್ತೆ ತೊಂದ್ರೆ ಕೊಡಲ್ಲ ಎಂದ ಪತಿ: ಇಬ್ಬರ ದೇಹವೂ ಛಿದ್ರ ಛಿದ್ರ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
