ಬೆಂಗಳೂರು:ಕಾರುಗಳ್ಳರು, ಜೇಬುಗಳ್ಳರು, ನಾಯಿಮರಿ ಕಳ್ಳರು, ಕಡೆಗೆ ಶೂ,ಚಪ್ಪಲಿ ಕಳ್ಳರ ಬಗ್ಗೆಯೂ ಕೇಳಿರುತ್ತೀರಾ, ಆದರೆ ಸಸಿಗಳ್ಳರನ್ನು ನೋಡಿದ್ದೀರಾ..?
ಹೌದು! ಇತ್ತೀಚಿನ ದಿನಗಳಲ್ಲಿ ಉದ್ಯಾನನಗರಿ ಬೆಂಗಳೂರಿನಲ್ಲಿ ಸಸಿಗಳ್ಳರ ಹಾವಳಿ ಹೆಚ್ಚಾಗಿದೆ, ಮನೆಯ ಆವರಣ, ಕಾಂಪೌಂಡ್ ಸೇರಿ ಮನೆಯ ಆಸುಪಾಸು ಬೆಳೆಸಿರುವ ಸಸಿಗಳನ್ನು ಕ್ಷಣಾರ್ಧದಲ್ಲಿ ಕಳವು ಮಾಡುತ್ತಿರುವ ಕಳ್ಳರ ಗ್ಯಾಂಗ್‌ಗಳು ಸಕ್ರಿಯವಾಗಿವೆ. ಮಗುವಿನಂತೆ ಜೋಪಾನ ಮಾಡಿದ ಗಿಡಗಳು ಕಳ್ಳರ ಕೈಚಳಕದಿಂದ ಪಾಟ್‌ಸಹಿತ ಮಾಯವಾಗುತ್ತಿವೆ.
ಬೇಡಿಕೆ ಹೆಚ್ಚಿದ್ದೇ ಕಾರಣ:ಕಾಂಕ್ರಿಟ್ ಕಾಡಾಗುತ್ತಿರುವ ಸಿಲಿಕಾನ್‌ಸಿಟಿ ಬೆಂಗಳೂರಿನ ಜನರಲ್ಲಿ ಇತ್ತೀಚಿನ ದಿನಗಳಲ್ಲಿ ದೊಡ್ಡಮಟ್ಟದಲ್ಲೇ ಪರಿಸರ ಪ್ರಜ್ಞೆ ಜಾಗೃತವಾಗುತ್ತಿದೆ. ಕಾವೇರಿ ಕೂಗು ಸೇರಿ ಇನ್ನಿತರ ಪರಿಸರ ಪರ ಸಂಘಟನೆಗಳ ಜಾಗೃತಿಯಿಂದಾಗಿ ಸಾಧ್ಯವಾದ ಸ್ಥಳದಲ್ಲೆಲ್ಲಾ ಸಸಿಗಳನ್ನು ಬೆಳೆಸುವ ಬಗ್ಗೆ ಜನ ಉತ್ಸಾಹ ತೋರಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಬೆಂಗಳೂರಿನಲ್ಲಿ ಸಿಕ್ಕ ಸಿಕ್ಕ ಖಾಲಿ ನಿವೇಶನಗಳಲ್ಲಿ ನಾಯಿಕೊಡೆಗಳಂತೆ ಸಸಿಗಳ ನರ್ಸರಿಗಳು ಆರಂಭವಾಗುತ್ತಿವೆ, ತರಹೇವಾರಿ ಶೋಗಿಡಗಳು, ಹೂಗಿಡಗಳಿಗೆ ಎಲ್ಲಿಲ್ಲದ ಬೇಡಿಕೆ ಕುದುರಿದೆ, 50 ರೂ.ನಿಂದ 500 ರೂವರೆಗಿನ ಸಸಿಗಳು ಮಾರಾಟಕ್ಕಿವೆ. ಪಾಟ್, ಮಣ್ಣು, ಗೊಬ್ಬರ ಸೇರಿ ಪ್ಯಾಕೇಜ್ ರೀತಿ ಸಸಿ ಖರೀಸಿದರೆ ಸಾವಿರಗಟ್ಟಲೆಯಾಗುತ್ತದೆ. ಕೆಲವೊಂದು ನರ್ಸರಿಗಳಲ್ಲಿ ಲಕ್ಷಾಂತರ ರೂ.ವಹಿವಾಟು ನಡೆಯುತ್ತಿದೆ, ಇದು ಸಸಿಗಳ ಕಳ್ಳತನಕ್ಕೂ ದಾರಿ ಮಾಡಿಕೊಟ್ಟಿದೆ.
ಕದ್ದ ಸಸಿ ನರ್ಸರಿಗಳಲ್ಲಿ ಬಿಕರಿ:ಬೋನ್ಸಾಯ್‌ಗಿಡಗಳನ್ನು ಬೆಳೆಸುವುದು ಇತ್ತೀಚಿನ ದಿನಗಳಲ್ಲಿ ಪ್ರತಿಷ್ಠೆಯ ಸಂಕೇತವಾಗಿದೆ, ಸಾವಿರದಿಂದ ಲಕ್ಷಾಂತರ ರೂ.ಮುಖಬೆಲೆಯ ಬೋನ್ಸಾಯ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ, ಸಸಿಗಳ್ಳರಿಗೆ ಇಂಥ ಸಸಿಗಳೇ ಟಾರ್ಗೆಟ್ ಆಗಿವೆ, ಇದರ ಜತೆಗೆ ಕೆಲವೊಂದು ಔಷಧಿಯುಕ್ತ ಸಸಿಗಳನ್ನು ಬೆಳೆಸುವ ಕ್ರೇಜ್ ಸಹ ಹೆಚ್ಚಾಗಿದ್ದು, ಶುದ್ಧ ಆಮ್ಲಜನಕ ನೀಡುವ ಕೆಲ ಜಾತಿಯ ಗಿಡಗಳನ್ನು ಮನೆಯ ಸುತ್ತ ಬೆಳೆಸುವುದು ಕಂಡುಬರುತ್ತಿದೆ. ಇವುಗಳಿಗೆ ನರ್ಸರಿಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಖದೀಮರು ಮನೆಗಳ ಬಳಿ ಹೊಂಚು ಹಾಕಿ ಸಸಿಗಳನ್ನು ಕಳವು ಮಾಡುತ್ತಿದ್ದಾರೆ. ಕದ್ದ ಸಸಿಗಳನ್ನು ಕಡಿಮೆ ಬೆಲೆಯಲ್ಲಿ ಅಕ್ಕಪಕ್ಕದ ನರ್ಸರಿಗಳಿಗೆ ಮಾರುತ್ತಿದ್ದಾರೆ ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಗಿರಿನಗರದಲ್ಲಿ ಪ್ರಕರಣ:ಗಿರಿನಗರ ಬಡಾವಣೆಯಲ್ಲಿ ಮಾ.5 ಶನಿವಾರ ಬೆಳಗಿನ ಸಮಯದಲ್ಲೇ ಕಳ್ಳರಿಬ್ಬರು ಮನೆಯ ಕಾಂಪೌಂಡ್‌ನಲ್ಲಿದ್ದ ಸಸಿಯನ್ನು ಪಾಟ್ ಸಹಿತ ಕಳವು ಮಾಡಿದ ದೃಶ್ಯ ಎದುರು ಮನೆಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಮನೆಯ ಬಳಿ ಬರುವ ಅಪರಿಚಿತನೊಬ್ಬ ಏಕಾಏಕಿ ಪಾಟ್ ಸಹಿತ ಸಸಿಯನ್ನು ಎತ್ತಿಕೊಳ್ಳುತ್ತಾನೆ ಇದನ್ನು ಮತ್ತೊಬ್ಬ ವಾಚ್ ಮಾಡುತ್ತಿರುತ್ತಾನೆ, ಇನ್ನೊಬ್ಬ ಆಟೋ ತಂದು ಅದೇ ಜಾಗದಲ್ಲಿ ನಿಲ್ಲಿಸುತ್ತಾನೆ ಕದ್ದ ಮಾಲನ್ನು ಆಟೋದಲ್ಲಿ ಇಟ್ಟುಕೊಂಡು ಎಲ್ಲರೂ ಪರಾರಿಯಾಗುತ್ತಾರೆ.
ಗಿರಿನಗರ ಸೇರಿ ನಗರದ ಕೆಲವೊಂದು ಪ್ರತಿಷ್ಠಿತ ಬಡಾವಣೆಗಳಲ್ಲಿ ಸಸಿಗಳನ್ನು ಕಳವು ಮಾಡುವ ಪ್ರಕರಣ ದಿನೇ ದಿನೆ ಹೆಚ್ಚಾಗುತ್ತಿದೆ. ಈಗಾಗಲೇ ಈ ಸಂಬಂಧ ಕೆಲವರು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ. ಸಸಿಕಳ್ಳತನ ಬಂದವರು ಮನೆ ಆವರಣದಲ್ಲಿನ ಇನ್ನಿತರ ವಸ್ತುಗಳನ್ನು ಎಗರಿಸುವುದರಲ್ಲಿ ಅನುಮಾನವಿಲ್ಲ, ಮಕ್ಕಳಂತೆ ಜೋಪಾನ ಮಾಡುವ ಸಸಿಗಳನ್ನು ಕಳ್ಳತನ ಮಾಡುವ ಗ್ಯಾಂಗ್‌ನ್ನು ಪೊಲೀಸರು ಮಟ್ಟಹಾಕಬೇಕು ಎನ್ನುತ್ತಾರೆ ಗಿರಿನಗರ ನಿವಾಸಿ ಸೋಮಶೇಖರ್.
ಇಲ್ಲಿದೆ ನೋಡಿ ವಿಡಿಯೋ:
ಬೆಂಗಳೂರಿನಲ್ಲಿ ಸಸಿಗಳ್ಳರ ಹಾವಳಿ ಹೆಚ್ಚಾಗಿದೆ, ಮನೆಯ ಆವರಣ, ಕಾಂಪೌಂಡ್ ಸೇರಿ ಮನೆಯ ಆಸುಪಾಸು ಬೆಳೆಸಿರುವ ಸಸಿಗಳನ್ನು ಕ್ಷಣಾರ್ಧದಲ್ಲಿ ಕಳವು ಮಾಡುತ್ತಿರುವ ಕಳ್ಳರ ಗ್ಯಾಂಗ್‌ಗಳು ಸಕ್ರಿಯವಾಗಿವೆ.pic.twitter.com/8mAlgKNNhQ
— Vijayavani (@VVani4U)March 5, 2022

ಕಾಮತೃಷೆ ತೀರಿಸಿಕೊಳ್ಳಲು ಕಳ್ಳತನ ಮಾಡ್ತಿದ್ದ 70 ವರ್ಷದ ಅಜ್ಜ ಅಂದರ್​! ಈತನ ಮೊಬೈಲ್​ನಲ್ಲಿದೆ ರಹಸ್ಯ

ಮಗನನ್ನು ಕರೆತರಲು 1400 ಬೈಕ್​ ಓಡಿಸಿದ್ದ ಅಮ್ಮ ಮತ್ತೆ ಸುದ್ದಿಯಲ್ಲಿ! ಆಗ ಕರೊನಾ, ಈಗ ಯೂಕ್ರೇನ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + sixteen =
Remember me
