ಮೈಸೂರು:ವಿಶ್ವ ಯೋಗದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮೈಸೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಭಾರಿ ಭದ್ರತೆ ಏರ್ಪಡಿಸಲಾಗಿದೆ. ಮಹಾರಾಜ ಕಾಲೇಜು ಮೈದಾನದಲ್ಲಿ ಪ್ರಧಾನ ಮಂತ್ರಿಗಳ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಇದರಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೆ ಸುರಕ್ಷತೆಯ ದೃಷ್ಟಿಯಿಂದ ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿದೆ.
ಈ ಸಂಬಂಧ ಮೈಸೂರು ನಗರ ಪೊಲೀಸರು ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಅದು ಈ ರೀತಿ ಇದೆ…
* ಸಾರ್ವಜನಿಕರು ಆಸೀನರಾದ ಸ್ಥಳದಲ್ಲಿ ನಿಂತುಕೊಳ್ಳುವುದು, ಅನಾವಶ್ಯಕವಾಗಿ ತಿರುಗಾಡುವುದು, ಕೂರುವುದು ಇತ್ಯಾದಿ ಮಾಡದೆ ತಮ್ಮ ಅಕ್ಕ ಪಕ್ಕ ಆಸೀನರಾದ ಇತರರಿಗೆ ತೊಂದರೆಯಾಗದಂತೆ ವರ್ತಿಸಬೇಕು.
* ಮೊಬೈಲ್‌ಗೆ ಮಾತ್ರ ಅವಕಾಶವಿದ್ದು ಉಳಿದ ಯಾವುದೇ ರೀತಿಯ ಇಲೆಕ್ಟ್ರಾನಿಕ್ ವಸ್ತುಗಳನ್ನು ಹೊಂದಲು ಅವಕಾಶ ಇರುವುದಿಲ್ಲ.
* ಕ್ಯಾಮೆರಾ , ವಿಡಿಯೋ ಕ್ಯಾಮೆರಾ , ಪವರ್ ಬ್ಯಾಂಕ್‌, ಇಯರ್‌ ಫೋನ್, ಹ್ಯಾಂಡ್ಸ್ ಫ್ರೀ ಇತ್ಯಾದಿಗಳಿಗೆ ಅನುಮತಿ ಇಲ್ಲ
* ಮೊಬೈಲ್​ ಫೋನ್​ ತರಲು ಅನುಮತಿ ಇದೆ ಆದ್ರೆ ಒಳಗೆ ಬರುವ ಮುನ್ನ ಫೋನ್​ಗಳನ್ನು ಸ್ವಿಚ್ಛ್​ ಆಫ್​ ಮಾಡಬೇಕು
* ಜನರು ನೀರಿನ ಬಾಟಲ್​, ಗಾಜಿನ ಬಾಟಲ್ ಬ್ಯಾಗ್, ವ್ಯಾನಿಟಿಬ್ಯಾಗ್, ಹರಿತವಾದ ವಸ್ತುಗಳು, ಯಾವುದೇ ರೀತಿಯ ಆಯುಧಗಳು, ಲೋಹದ ವಸ್ತುಗಳು ಹಾಗೂ ಇತರೆ ಯಾವುದೇ ರೀತಿಯ ವಸ್ತುಗಳನ್ನು ಹೊಂದಿರಬಾರದು.
* ಯಾವುದೇ ರೀತಿಯ ಕರಪತ್ರ, ಬ್ಯಾನರ್, ಕಪ್ಪು ಬಟ್ಟೆ/ಪ್ಲಾಗ್ ಕಾರ್ಡ್‌ಗಳಿಗೆ ಅನುಮತಿ ಇರುವುದಿಲ್ಲ.
* ಬೆಂಕಿ ಉತ್ಪತ್ತಿ ಮಾಡುವ ಬೆಂಕಿ ಪೊಟ್ಟಣ, ಲೈಟರ್, ಪಟಾಕಿ ಹಾಗೂ ಇತ್ಯಾದಿ ವಸ್ತುಗಳನ್ನು ತೆಗೆದುಕೊಂಡು ಬರಬಾರದು.
* ಬೀಡಿ, ಸಿಗರೇಟ್, ಗುಟ್ಕಾ ಇತ್ಯಾದಿ ತಂಬಾಕು ಪದಾರ್ಥಗಳನ್ನು ಕಡ್ಡಾಯವಾಗಿ ನಿಷೇದಿಸಿದೆ.
* ಕರ್ಕಶ ಶಬ್ದವನ್ನು ಮಾಡುವ ಸೀಟಿ, ತಮಟೆ, ನಗಾರಿ ಇತ್ಯಾದಿ ವಸ್ತುಗಳನ್ನು ನಿಷೇಧಿಸಿದೆ.
* ಯಾವುದೇ ವಾರಸುದಾರರಿಲ್ಲದ ಬ್ಯಾಗುಗಳು, ಪೊಟ್ಟಣ, ಆಟಿಕೆ ಸಾಮಾನುಗಳು ಹಾಗೂ ಇತರೆ ವಸ್ತುಗಳು ಕಂಡು ಬಂದಲ್ಲಿ ಅದನ್ನು ಮುಟ್ಟದೇ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಕಾರ್ಯಕ್ರಮ ವೀಕ್ಷಣೆಗೆ ಬರುವವರು ತಮ್ಮ ವಾಹನಗಳನ್ನು ಸಂಚಾರಿ ಪೊಲೀಸರು ನಿಗದಿಪಡಿಸಿರುವ ಸ್ಥಳದಲ್ಲೇ ನಿಲ್ಲಿಸಬೇಕು
* ಸಾರ್ವಜನಿಕರು ಗಣ್ಯವ್ಯಕ್ತಿಗಳು ಸಾಗುವ ಮಾರ್ಗದಲ್ಲಿ ಗುಂಪು ಸೇರದೆ ಹಾಗು ಮಾರ್ಗಕ್ಕೆ ಬಂದು ಅಡ್ಡಿಯುಂಟು ಮಾಡದಂತೆ ಸಾಕಷ್ಟು ಅಂತರವನ್ನು ಕಾಯ್ದುಕೊಂಡು ದೂರದಿಂದಲೇ ವೀಕ್ಷಿಸತಕ್ಕದ್ದು.
ಬೆಂಗಳೂರು, ಮೈಸೂರಿಗೆ ಪ್ರಧಾನಿ ಮೋದಿ: ಕೆಲ ಕಾಲೇಜುಗಳಿಗೆ ರಜೆ ಘೋಷಣೆ- ಇಲ್ಲಿದೆ ವಿವರ…

‘ಒಂದೂವರೆ ಲಕ್ಷ ಯುವಕರ ನೇಮಕ, ಒಂದು ಕೋಟಿ ರೂ. ಪರಿಹಾರ: ಗಲಭೆಕೋರರಿಗಿಲ್ಲ ಅವಕಾಶ!

ಅಗ್ನಿಪಥ್​ v/s ಕಾಂಗ್ರೆಸ್​- ಎಲ್ಲಿದ್ದೆ ಇಲ್ಲೀ ತನಕ…ಈಗ್ಯಾಕೆ ಬಂದ್ಯಯ್ಯ: ವಿಂಗ್​ ಕಮಾಂಡರ್​ ಹೇಳಿದ್ದೇನು ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − eleven =
Remember me
