ಬೆಂಗಳೂರು:ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು.
ವಿಧಾನಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಂಗಳವಾರ‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಪುರಸ್ಕೃತ ಫಲಾನುಭವಿಗಳೊಂದಿಗೆ ಪ್ರಧಾನಿ ಅವರ ಸಂವಾದ ನಡೆಸಿದರು.
ವರ್ಚುವಲ್ ವೇದಿಕೆಯಲ್ಲಿ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡ ಕರ್ನಾಟಕದ ಫಲಾನುಭವಿ ಸಂತೋಷಿ ಎನ್ನುವವರಿಗೆ ಪ್ರಧಾನಿಯವರು, ಕೇಂದ್ರ ಸರ್ಕಾರದ ಯಾವ ಯೋಜನೆಯಿಂದ ಅನುಕೂಲವಾಗಿದೆ ? ಎಂದು ಕೇಳಿದರು.
ಸಂತೋಷಿ ಕನ್ನಡದಲ್ಲೇ ಪ್ರತಿಕ್ರಿಯಿಸಿ, ಬಿಪಿ ಹಾಗೂ ಶುಗರ್ ಬಾಧೆಯಿಂದ ತಮ್ಮ ತಾಯಿ ನರಳುತ್ತಿದ್ದಳು. ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ, ಜನೌಷಧಿ ಕೇಂದ್ರದಲ್ಲಿ ಕಡಿಮೆ ದರದಲ್ಲಿ ಮಾತ್ರೆ, ಔಷಧಿ ದೊರೆತು ಹೊರೆ ತಗ್ಗಿದೆ. ನಮ್ಮ ತಾಯಿ ಈಗ ಗುಣಮುಖಳಾಗಿದ್ದು, ಬಹಳ ನೆಮ್ಮದಿ, ಸಂತೋಷ ತಂದಿದೆ ಎಂದು ಹೇಳಿದರು.
ನಂತರ ಫಲಾನುಭವಿ ಮಾತುಗಳನ್ನು ಹಿಂದಿಯಲ್ಲಿ ತರ್ಜುಮೆ ಮಾಡಿ ಮೋದಿಯವರಿಗೆ ವಿವರಿಸಲಾಯಿತು. ಮೋದಿ ಮಾತು ಮುಂದುವರಿಸಿ, ನೀವು ಕನ್ನಡದಲ್ಲಿ ಮಾತನಾಡಿದರೂ ನಿಮ್ಮ ಮೊಗದಲ್ಲಿ ಸಂತಸದ ಭಾವನೆ‌ ನನಗೆ ಅರ್ಥವಾಗುತ್ತದೆ. ಪಕ್ಷದ ಕಾರ್ಯಕರ್ತನಾಗಿ ಕರ್ನಾಟಕದಲ್ಲಿ ಇದ್ದಿದ್ದರೆ ನಿಮ್ಮ ಮನೆಗೆ ಬಂದು‌ ನಿಮ್ಮ, ಕುಟುಂಬದ ಸಂತೋಷದಲ್ಲಿ ಭಾಗಿಯಾಗುತ್ತಿದ್ದೆ ಎಂದಾಗ ಬ್ಯಾಂಕ್ವೆಟ್ ಹಾಲ್ ಕುಳಿತು ಕಾರ್ಯಕ್ರಮ ವೀಕ್ಷಿಸುತ್ತಿದ್ದ ಸಿಎಂ ಬೊಮ್ಮಾಯಿ‌, ಸಚಿವರು, ಗಣ್ಯರು, ಫಲಾನುಭವಿಗಳು ಚಪ್ಪಾಳೆ ತಟ್ಟಿದರು.
ಈ ಚಪ್ಪಾಳೆಯನ್ನು ಗಮನಿಸಿದ ಮೋದಿಯವರು, ಸಂತೋಷಿ ಅವರಿಗೆ ನೀವು ಮುಂದೆ ಊರಿನ ದೊಡ್ಡ ನಾಯಕಿಯಾಗುವಿರಿ ಎಂದು ಹಾಸ್ಯ ಚಟಾಕಿ ಹಾರಿಸಿದಾಗ ಬ್ಯಾಂಕ್ವೆಟ್ ಹಾಲ್​ನಲ್ಲಿ ಚಪ್ಪಾಳೆಯ ಸುರಿಮಳೆಯಾಯಿತು.
15 ಮಂದಿ ಅಕೌಂಟ್‌ಗೆ ಎಸ್‌ಬಿಐನಿಂದ 1.5 ಕೋಟಿ ರೂ: ಮೋದಿ ಕೊಟ್ಟರೆಂದು ಕುಣಿದಾಡಿದ ಗ್ರಾಹಕರು- ಆಗಿದ್ದೇನು?

ಹೆಂಡ್ತಿ ಮಾತು ಕೇಳಿ ಮಗ ನಮ್​ ಜತೆ ಇರಲು ಒಪ್ತಿಲ್ಲ: ಅಪ್ಪ-ಅಮ್ಮನಾದ ನಮಗೆ ಕಾನೂನು ಹೇಗೆ ನೆರವಾಗಬಲ್ಲುದು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 1 =
Remember me
