ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್​ ಕಿ ಬಾತ್’ನ 92ನೇ ಆವೃತ್ತಿಯ ಮೂಲಕ ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದರು. ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸದ ಕುರಿತು ಅನಿಸಿಕೆ ಹಂಚಿಕೊಂಡರು.
ಸ್ವಾತಂತ್ರ್ಯ ದಿನಾಚರಣೆ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ಭಾರತದ ಸಮಗ್ರ ಪ್ರಗತಿಗೆ ಮತ್ತು ಭಾರತೀಯರ ಒಗ್ಗಟ್ಟಿನ ಸ್ಪಂದನೆಗೆ ನಾವೆಲ್ಲರೂ ಸಾಕ್ಷಿಯಾಗಿದೆವು ಎಂದ ಪ್ರಧಾನಿ, ಡಿಜಿಟಲ್ ಇಂಡಿಯಾ ಮತ್ತು ಕಿರುಧಾನ್ಯಗಳ ಉತ್ಪಾದನೆ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಕೋಲಾರದ ತ್ರಿವರ್ಣ ಧ್ವಜ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಕೋಲಾರದಲ್ಲಿ ಆ.15ರಂದು ದೇಶದ ಅತಿದೊಡ್ಡ ತ್ರಿವರ್ಣ ಧ್ವಜದ ಅನಾವರಣಗೊಂಡಿತ್ತು. 1.30 ಲಕ್ಷ ಚದರಡಿಯ ಬೃಹತ್ ತ್ರಿವರ್ಣ ಧ್ವಜದ ನಿರ್ಮಾಣ ಮಾಡಲಾಗಿತ್ತು, 204 ಅಡಿ ಉದ್ದ 630 ಅಡಿ ಅಗಲದ ಬೃಹತ್ ತ್ರಿವರ್ಣ ಧ್ವಜ ಇದಾಗಿತ್ತು. ಕೋಲಾರ ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ಮೂಡಿದ‌ ತ್ರಿವರ್ಣ ಧ್ವಜ ಲಿಮ್ಕಾ‌ ದಾಖಲೆ ಸಹ ಬರೆಯಿತು. ಇದರ ಬಗ್ಗೆ ಪ್ರಧಾನಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಿರುಧಾನ್ಯಗಳ ಕುರಿತು ಮಾತನಾಡಿದ ಪ್ರಧಾನಿ, ವಿಶ್ವಸಂಸ್ಥೆಯು 2023ನೇ ಇಸವಿಯನ್ನು ‘ಕಿರುಧಾನ್ಯಗಳ ವರ್ಷ’ ಎಂದು ಘೋಷಿಸಿದೆ. ಭಾರತವು ಕಿರುಧಾನ್ಯ ಉತ್ಪಾದನೆಯಲ್ಲಿ ವಿಶ್ವದ ಅತಿದೊಡ್ಡ ಕಿರುಧಾನ್ಯ ಉತ್ಪಾದಕ ದೇಶವಾಗಿದೆ. ವಿಶ್ವಸಂಸ್ಥೆಯ ಘೋಷಣೆಯನ್ನು ಯಶಸ್ವಿಗೊಳಿಸುವ ಜವಾಬ್ದಾರಿಯೂ ಭಾರತದ ಮೇಲೆಯೇ ಇದೆ. ನಾವೆಲ್ಲರೂ ಸೇರಿ ಇದನ್ನು ಸಾಮೂಹಿಕ ಚಳವಳಿಯನ್ನಾಗಿ ರೂಪಿಸಬೇಕಿದೆ. ಜನರಲ್ಲಿ ಕಿರುಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.
ಭಾರತವು ಮುಂದಿಟ್ಟ ಕಿರುಧಾನ್ಯದ ಪ್ರಸ್ತಾವಕ್ಕೆ ವಿಶ್ವದ ಇತರ 70 ದೇಶಗಳ ಬೆಂಬಲ ದೊರಕಿತು ಎನ್ನುವುದು ಹೆಮ್ಮೆಯ ವಿಷಯ. ಕಿರುಧಾನ್ಯಗಳನ್ನು ಜಗತ್ತು ಇಂದು ಸೂಪರ್​ಫುಡ್ ಎಂದು ಗುರುತಿಸಿದೆ. ಕಿರುಧಾನ್ಯಗಳಿಗೆ ಉತ್ತೇಜನ ನೀಡಲು ಹಲವು ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಸಂಶೋಧನೆ ಮತ್ತು ಆವಿಷ್ಕಾರದ ಪ್ರಯತ್ನಗಳೂ ಚುರುಕಾಗಿವೆ. ಆಹಾರ ಸಂಸ್ಕರಣೆ ಉದ್ಯಮಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಉತ್ಪಾದನೆಯೂ ಹೆಚ್ಚಾಗುತ್ತಿದೆ ಎಂದು ಮೋದಿ ಹೇಳಿದರು.
ಅಮೃತ ಸರೋವರ ನಿರ್ಮಾಣದ ಕುರಿತು ಮಾತನಾಡಿದ ಅವರು, ಭಾರತದಲ್ಲಿ ಅಮೃತ ಸರೋವರ ನಿರ್ಮಾಣವು ಒಂದು ಸಾಮಾಜಿಕ ಚಳವಳಿಯಾಗಿ ನಡೆಯುತ್ತಿದೆ. ಮಳೆಗಾಲದಲ್ಲಿ ಬೇಕಾಬಿಟ್ಟಿಯಾಗಿ ಓಡುತ್ತಿದ್ದ ಮಳೆನೀರನ್ನು ಒಂದೆಡೆ ಸಂಗ್ರಹಿಸಿ, ಇಂಗಿಸುವ ಪ್ರಯತ್ನವನ್ನು ಈ ಸರೋವರಗಳು ಮಾಡುತ್ತವೆ ಎಂದರು.
ಅದರಂತೆ, ದೇಶದ ಅಪೌಷ್ಟಿಕತೆ ಸಮಸ್ಯೆ ನಿವಾರಿಸಲು ಜಲ್​ಜೀವನ್ ಮಿಷನ್ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಅಪೌಷ್ಟಿಕತೆಯ ಶಾಪ ಪರಿಹರಿಸಲು ನೀವೆಲ್ಲರೂ ಕೈಜೋಡಿಸಬೇಕಿದೆ ಎಂದ ಪ್ರಧಾನಿ, ಭಾರತದಲ್ಲಿ ಈಗ ಡಿಜಿಟಲ್ ಉದ್ಯಮಿಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದಾರೆ. ಕೇಂದ್ರ ಸರ್ಕಾರ ಆರಂಭಿಸಿದ ಡಿಜಿಟಲ್ ಇಂಡಿಯಾ ಉಪಕ್ರಮದಿಂದ ಸಾಕಷ್ಟು ಜನರಿಗೆ ಅನುಕೂಲವಾಗಿದೆ ಎಂದು ನುಡಿದರು.(ಏಜೆನ್ಸೀಸ್​)
VIDEO: ಪಾಕ್​ನಲ್ಲಿ ಮಳೆಯ ರುದ್ರ ನರ್ತನ: ಸಾವಿನ ಸಂಖ್ಯೆ 1033ಕ್ಕೆ ಏರಿಕೆ- ಪ್ರವಾಹದ ಭೀಕರ ವಿಡಿಯೋಗಳು ಇಲ್ಲಿವೆ…
ರಾಹುಲ್​ನಂಥ ನಾಯಕನಿಂದ ಪಕ್ಷಕ್ಕೆ ಅವನತಿಯೇ ಗತಿ ಎಂದು ಬೇಸರಿಸುತ್ತಲೇ ಕಾಂಗ್ರೆಸ್​ಗೆ ಮಾಜಿ ಸಂಸದ ಗುಡ್​ಬೈ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + two =
Remember me
