ಬೆಂಗಳೂರು :ಸೆಕ್ಯೂರಿಟಿ ಏಜೆನ್ಸಿ ಕಚೇರಿ ತೆರೆಯುವ ನೆಪದಲ್ಲಿ ಕೊಠಡಿ ಬಾಡಿಗೆ ಪಡೆದು ಫೈನಾನ್ಸ್ ಕಂಪನಿಗೆ ಕನ್ನ ಹಾಕಿ 23.02 ಲಕ್ಷ ರೂ. ಮೌಲ್ಯದ ಆಭರಣ, ನಗದು ದೋಚಿದ್ದ ಅಂತಾರಾಜ್ಯ ಕಳ್ಳರ ಗ್ಯಾಂಗ್‌ನನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ.
ಜಾರ್ಖಂಡ್ ಮೂಲದ ಮುರ್ ಸಲೀಂ ಶೇಖ್ (26), ನಜ್‌ರುಲ್ ಶೇಖ್ (42), ಕಮಲ್ ಪೌಜ್‌ದಾರ್ (44), ರಬಿವುಲ್ ಶೇ (23), ಜಮಿರುಲ್ ಶೇಕ್ (21), ಅಯಾಸ್ ಶೇಖ್ (37) ಸೇರಿ 10 ಮಂದಿಯನ್ನು ಬಂಧಿಸಲಾಗಿದೆ. 2020ರ ನ.29ರಂದು ಮಾರತ್‌ಹಳ್ಳಿ ಮುನೇಕೊಳಲು ಬಳಿ ಯುನಿಮೋನಿ ಫೈನಾನ್ಷಿಯಲ್ ಸರ್ವಿಸಸ್ ಪ್ರೈ.ಲಿ. ಕಂಪನಿ ಕಚೇರಿಗೆ ಕನ್ನ ಹಾಕಿ ಚಿನ್ನಾಭರಣ, ನಗದು ದೋಚಿದ್ದರು. ಕಂಪನಿ ಅಧಿಕಾರಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ 22.50 ಲಕ್ಷ ರೂ. ಮೌಲ್ಯದ 450 ಗ್ರಾಂ ಆಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರತ್‌ಹಳ್ಳಿ ಬ್ರಿಡ್ಜ್ ಬಳಿಯ ಕಾಂಪ್ಲೆಕ್ಸ್‌ನಲ್ಲಿ ಯುನಿಮೋನಿ ಫೈನಾನ್ಷಿಯಲ್ ಕಂಪನಿ ಕಚೇರಿ ಇದೆ. ಆಭರಣ ಸಾಲ, ವಿದೇಶಿ ಹಣ ವಿನಿಮಯ ಮತ್ತು ವರ್ಗಾವಣೆ ವ್ಯವಹಾರ ನಡೆಸುತ್ತಿತ್ತು. 2020ರ ನವೆಂಬರ್‌ನಲ್ಲಿ ಸೆಕ್ಯೂರಿಟಿ ಏಜೆನ್ಸಿ ಕಚೇರಿ ತೆರೆಯಬೇಕೆಂದು ಕಾಂಪ್ಲೆಕ್ಸ್ ಮಾಲೀಕರಿಗೆ ಆರೋಪಿಯೊಬ್ಬ ತಿಳಿಸಿ ಫೈನಾನ್ಷಿಯಲ್ ಕಚೇರಿ ಪಕ್ಕದ ಕೊಠಡಿಯನ್ನೇ ಬಾಡಿಗೆಗೆ ಪಡೆದಿದ್ದ.
ಕೊಠಡಿ ಕೀ ಪಡೆದು ಪಿಠೋಪಕರಣ ಮಾಡಿಸುವ ನೆಪದಲ್ಲಿ ಒಳಗೆ ಹೋಗಿದ್ದ. ಆನಂತರ ಜಾರ್ಖಾಂಡ್‌ನಿಂದ ತನ್ನ ಸಹಚರರನ್ನು ನಗರಕ್ಕೆ ಕರೆಸಿಕೊಂಡು ಫೈನಾನ್ಷಿಯಲ್ ಕಂಪನಿ ಶನಿವಾರ ಮತ್ತು ಭಾನುವಾರ ರಜೆ ಇರುವುದನ್ನೇ ಹೊಂಚು ಹಾಕಿದ್ದ. ನ.28ರ ರಾತ್ರಿ ವೇಳೆ ಬಾಡಿಗೆ ಕೊಠಡಿಗೆ ಹೋಗಿ ತಮ್ಮ ಅಂಗಡಿಗೂ ಮತ್ತು ಫೈನಾನ್ಷಿಯಲ್ ಕಚೇರಿಗಿದ್ದ ಗೋಡೆಗೆ ಕನ್ನ ಹಾಕಿ ಒಳ ನುಗ್ಗಿ ಸಿಸಿ ಕ್ಯಾಮಾರ ಸ್ಥಗಿತಗೊಳಿಸಿದ್ದರು. ಗ್ಯಾಸ್ ಕಟರ್ ಬಳಸಿ ಬ್ಯಾಂಕಿನ ಲಾಕರ್ ಮುರಿದು ಚಿನ್ನಾಭರಣ ಮತ್ತು ನಗದು ದೋಚಿದ್ದರು. ಈ ಕುರಿತು ಕಂಪನಿ ಅಧಿಕಾರಿ ರವೀಂದ್ರ ಶೆಟ್ಟಿ ನೀಡಿದ ದೂರಿ ಮೇಲೆ ಎಚ್‌ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್‌ಐ ಬಿ. ಹನುಮಂತು ನೇತೃತ್ವದ ತಂಡ ಆರೋಪಿಗಳ ಬಂಧನಕ್ಕೆ ಬಲೆಬೀಸಿತ್ತು. ಕೃತ್ಯ ನಡೆದ ಸ್ಥಳದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದ ಡಿವಿಆರ್‌ನ್ನು ಕಳ್ಳರು ದೋಚಿದ್ದರು. ಕೊನೆಗೆ ಆರೋಪಿಗಳು ಬಳಸಿದ್ದ ಮೊಬೈಲ್ ನಂಬರ್ ಆಧರಿಸಿ ಮುಂಬೈ ಮತ್ತು ದೆಹಲಿಯಲ್ಲಿ ಕಳ್ಳರನ್ನು ಬಂಧಿಸಿ ಪಶ್ಚಿಮ ಬಂಗಾಳದಲ್ಲಿ ಮಾರಾಟ ಮಾಡಿದ್ದ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊಬೈಲ್ ಕರೆಗಳ ಜಾಡುಹಿಡಿದ ಪೊಲೀಸ್ :ಕನ್ನ ಪ್ರಕರಣದ ತನಿಖೆ ಕೈಗೊಂಡ ಪೊಲೀಸರಿಗೆ ಸಿಸಿ ಕ್ಯಾಮರಾ ಡಿವಿಆರ್ ಸಿಗಲಿಲ್ಲ. ಮುಖ ಚಹರೆ ಪತ್ತೆ ಆಗಲಿಲ್ಲ. ಕೊನೆಗೆ ಅಕ್ಕಪಕ್ಕದ ಮೊಬೈಲ್ ಟವರ್‌ನಲ್ಲಿ ದಾಖಲಾಗಿದ್ದ ಮೊಬೈಲ್ ನಂಬರ್ ಮತ್ತು ಕಟ್ಟಡ ಮಾಲೀಕನಿಗೆ ನೀಡಿದ್ದ ಮೊಬೈಲ್ ನಂಬರ್ ಪಡೆದು ಜಾಲಾಡುತ್ತಾರೆ. ಅಷ್ಟೊತ್ತಿಗೆ ಆರೋಪಿ ನಂಬರ್ ಬದಲಾಯಿಸಿದ್ದ. ಅದಕ್ಕೂ ಮೊದಲು ಆರೋಪಿ, ಜಾರ್ಖಂಡ್‌ನಲ್ಲಿ ನೆಲೆಸಿದ್ದ ಪತ್ನಿಗೆ ಕರೆ ಮಾಡಿದ್ದ. ಆಕೆಯ ಮೊಬೈಲ್ ನಂಬರ್ ಮತ್ತು ನೇಪಾಳಿ ಸ್ನೇಹಿತರ ಮೇಲೆ ಪಿಎಸ್‌ಐ ಹನುಮಂತು ನೇತೃತ್ವದ ತಂಡ ಕಳೆದ 3 ತಿಂಗಳಿಂದ ನಿಗಾವಹಿಸಿ ಬಂಧಿಸಿದ್ದಾರೆ.
ಮುಂಬೈನಲ್ಲಿ 15 ಕೆಜಿ ಚಿನ್ನ, 85 ಲಕ್ಷ ಕಳವು :ಬಂಧಿತ ಆರೋಪಿಗಳು ಬೆಂಗಳೂರು, ದೆಹಲಿ, ಮುಂಬೈ ಮತ್ತು ಚೆನ್ನೈನಲ್ಲಿ ಹಲವೆಡೆ ಕೃತ್ಯ ಎಸಗಿವೆ. ಮಹಾನಗರದಲ್ಲಿ ಸುತ್ತಾಡುತ್ತಿದ್ದ ಈ ಗ್ಯಾಂಗ್, ಬ್ಯಾಂಕ್, ಫೈನಾನ್ಸ್ ಕಂಪನಿ ಮತ್ತು ಚಿನ್ನಾಭರಣ ಮಳಿಗೆಗೆ ಕನ್ನ ಹಾಕಲು ಸ್ಕೆಚ್ ಹಾಕಿ ತನ್ನ ಸಹಚರರನ್ನು ಕರೆಸಿಕೊಂಡು ಕೃತ್ಯ ಎಸಗುತ್ತಿದ್ದರು. ಎಚ್‌ಎಎಲ್‌ನಲ್ಲಿ ಕನ್ನ ಹಾಕಿದ್ದ ಆರೋಪಿಗಳು, ಮುಂಬೈಗೆ ಹೋಗಿ ೈನಾನ್ಸ್ ಕಂಪನಿಯಲ್ಲಿ 15 ಕೆಜಿ ಚಿನ್ನ ಮತ್ತು 85 ಲಕ್ಷರೂ.ದೋಚಿದ್ದರು.ಮುಂಬೈ ಮತ್ತು ಎಚ್‌ಎಎಲ್ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾಗ ಎಚ್‌ಎಎಲ್ ಪೊಲೀಸರಿಗೆ 7 ಮಂದಿ ಮತ್ತು ಮುಂಬೈ ಪೊಲೀಸರಿಗೆ ಮೂವರು ಸೆರೆಸಿಕ್ಕಿದ್ದಾರೆ. ಹಲವೆಡೆ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಯಿಂದಲೇ ದೇಶದ ಭದ್ರತೆಗೆ ಧಕ್ಕೆ! ಸಿಗಲಿಲ್ಲ ಪಾಸ್​ಪೋರ್ಟ್​- ಅರ್ಜಿ ತಿರಸ್ಕೃತ

ಫೋನ್​ ಚಾರ್ಜ್​ ಆಗಿದ್ಯೋ ಎಂದು ನೋಡಲುಹೋಗಿ ಜೀವ ಕಳೆದುಕೊಂಡ ಬಾಲಕ- ಸ್ಫೋಟಕ್ಕೆ ಮುಖ ಛಿದ್ರ

ಅಪ್ಪನ ಆಸ್ತಿಯನ್ನು ಅಣ್ಣ ಗುಟ್ಟಾಗಿ ಮಾರಿದ್ದಾನೆ- ನಮ್ಮ ಮದುವೆಗೆ ಆತ ಖರ್ಚು ಮಾಡಿದ್ದರಿಂದ ಪಾಲು ಸಿಗುವುದಿಲ್ಲವೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 8 =
Remember me
