ಹಾವೇರಿ:ವಿಐಪಿಗಳು ಬರುವ ಸಮಯದಲ್ಲಿ ರಸ್ತೆಗಳನ್ನು ತೆರವುಗೊಳಿಸಿ ಅವರಿಗೆ ದಾರಿ ಮಾಡಿಕೊಡುವುದು ಪೊಲೀಸರಿಗೆ ಅನಿವಾರ್ಯ. ಇಲ್ಲದಿದ್ದರೆ ಅವರ ಹುದ್ದೆಗೆ ಆಪತ್ತು. ಅದಕ್ಕಾಗಿಯೇ ದಾರಿ ನಡುವೆ ಬರುವ ಜನರನ್ನು ಥಳಿಸಲೂ ಅವರು ಹಿಂದೇಟು ಹಾಕುವುದಿಲ್ಲ! ಆದರೆ ಅದೇ ಇನ್ನೊಂದೆಡೆ, ಯಾವುದೇ ತುರ್ತು ಕೆಲಸವಿದ್ದರೂ, ಯಾರದ್ದೇ ಜೀವ ಹೋಗುತ್ತಿದ್ದರೂ ಆ ವಿಐಪಿಗಳು ಹೋಗುವವರೆಗೆ ಕಾಯುವ ಅನಿವಾರ್ಯತೆ ಸಾಮಾನ್ಯ ಜನರದ್ದು.
ಇಂಥದ್ದೇ ಒಂದು ಘಟನೆ ಹಾವೇರಿಯಲ್ಲಿ ನಡೆದಿದ್ದು, ಇದೀಗ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಗೃಹ ಸಚಿವರು ಬರುವಾಗ ರಸ್ತೆ ಮಧ್ಯೆ ಬಂದ ಎಮ್ಮೆಕಾಯುವವನಿಗೆ ಪೊಲೀಸರು ಥಳಿಸಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.pic.twitter.com/BZLDZ6v9Jt
— Vijayavani (@VVani4U)June 3, 2021

ಎಮ್ಮೆಗಳನ್ನು ಹೊಡೆದುಕೊಂಡು ಬರುತ್ತಿದ್ದ ಯುವಕನ ಮೇಲೆ ಲಾಠಿಪ್ರಹಾರ ಮಾಡಿರುವ ಪೊಲೀಸರು ಲಾಠಿ ಮುರಿಯುವವರೆಗೂ ಆತನ ಕೈಗೆ ಬಲವಾಗಿ ಏಟು ಕೊಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.ಗೃಹಸಚಿವ ಬಸವರಾಜ ಬೊಮ್ಮಾಯಿಯವರು ಬರುತ್ತಿದ್ದ ಕಾರಣ, ರಸ್ತೆಯನ್ನು ತೆರವುಗೊಳಿಸುವ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ. ಈ ಸಮಯದಲ್ಲಿ ಇದರ ಅರಿವು ಇಲ್ಲ ಯುವಕ ಶಿವು ಎಂಬಾತ ಎಮ್ಮೆಗಳನ್ನು ಹೊಡೆದುಕೊಂಡು ಹೊಸಮನಿ ಸಿದ್ದಪ್ಪ ವೃತ್ತದ ಬಳಿ ಹೋಗುತ್ತಿದ್ದಾರೆ. ರಸ್ತೆಯಿಂದ ಅತ್ತ ಹೋಗುವಂತೆ ಪೊಲೀಸರು ಹೇಳಿದ್ದಾರೆ. ಆದರೆ ಅದೇ ವೇಳೆಗೆ ಆತನ ಎಮ್ಮೆಗಳು ದೂರ ಓಡಿಹೋಗಿದ್ದರಿಂದ ಅದೆಲ್ಲಿ ಕಳೆದುಹೋಗುವುದೋ ಎಂಬ ಭಯದಲ್ಲಿ ಶಿವು ಓಡಿಹೋಗಿದ್ದಾನೆ.
ತಾವು ಹೇಳಿದರೂ ಈತ ಕೇಳುತ್ತಿಲ್ಲ ಎನ್ನುವ ಕಾರಣಕ್ಕೆ ಲಾಠಿ ಪ್ರಹಾರ ಮಾಡಿರುವುದಾಗಿ ಆರೋಪಿಸಲಾಗಿದೆ. ಕೈಗೆ ಆಗಿರುವ ಗಂಭೀರ ಏಟನ್ನು ತೋರಿಸುತ್ತಾ ಶಿವು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರಿಗಷ್ಟೇ ಬಾಳಿರೋದಾ? ನಮಗೂ ಇರೋದಾ? ಅದ್ಯಾವುದೋ ಮಿನಿಸ್ಟರು ಬಂದ್ರು ಎಂದು ಆಚೆಗೆ ಹೋಗಲು ಹೇಳಿದ್ರು. ನನ್ನ ಎಮ್ಮೆ ತಪ್ಪಿಸಿಕೊಂಡು ಹೋಗ್ತಿದ್ದಕ್ಕೆ ಬಂದೆ. ಕೆಟ್ಟ ಕೆಟ್ಟ ಶಬ್ದ ಮಾತನಾಡ್ತಾರೆ. ಅವರ್ಯಾರು ಹೀಗೆ ಮಾತನಾಡು ಎಂದು ಶಿವು ಕಿಡಿ ಕಾರಿದ್ದಾನೆ. ಸ್ಥಳಕ್ಕೆ ಬಂದ ಶಿವು ತಂದೆ ಪೊಲೀಸರ ಉಸಾಬರಿ ಬೇಡ ಎಂದು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
VIDEO: ತಪಾಸಣೆ ಮಾಡಲು ಬಂದ ಪೊಲೀಸರ ಮೇಲೆ ಆಂಧ್ರದ ಪುಂಡರ ಹಲ್ಲೆ!

ಪ್ರಧಾನಿಜೀ… ಪರೀಕ್ಷೆ ಕ್ಯಾನ್ಸಲ್‌ ಆದ್ರೂ ಅಡ್ಡಿಲ್ಲ, ನೇಹಾಳನ್ನು ಸೀರೆಯಲ್ಲಿ ನೋಡೋ ಆಸೆ ಈಡೇರಿಸಿ ಪ್ಲೀಸ್‌. ಪ್ಲೀಸ್‌…

ಪ್ರಪೋಸ್‌ ಮಾಡುವಾಗ ಲಂಡನ್‌ ನದಿಗೆ ಬಿದ್ದ ವಜ್ರದುಂಗರ- ಭಾರತದ ಈ ಜೋಡಿಗೆ ವಾಪಸ್‌ ಸಿಕ್ಕಿದ್ದೇ ರೋಚಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + nine =
Remember me
