ತುಮಕೂರು:ತುಮಕೂರಿನ ಅರ್ಚಕರೊಬ್ಬರು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳಲು ಪ್ರಯತ್ನಿಸಿ ಕೊನೆಗೆ ವಾಪಸಾಗಿರುವ ಘಟನೆ ನಡೆದಿದೆ. ತಾವು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವುದಾಗಿ ಪತ್ರಿಕೆಗಳಲ್ಲಿ ಪ್ರಕಟಣೆಯನ್ನೂ ಕೊಟ್ಟು ಸಕಲ ಸಿದ್ಧಗೊಂಡಿದ್ದರು. ‘ಸ್ವ-ಇಚ್ಛೆಯಿಂದ ಇಸ್ಲಾಂ ಧರ್ಮಕ್ಕೆ ಮತಾಂತರವಾಗುತ್ತಿದ್ದೇನೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದರು. ಗ್ರಾಮದ ಓಂಕಾರೇಶ್ವರ ದೇವಸ್ಥಾನದ ಅರ್ಚಕರಾಗಿದ್ದ ಎಚ್.ಆರ್.ಚಂದ್ರಶೇಖರಯ್ಯ ಅವರು ಮುಬಾರಕ್ ಪಾಷಾ ಎಂದು ಹೆಸರು ಬದಲಿಸಿಕೊಂಡು ಈ ಪ್ರಕರಣೆಯನ್ನೂ ನೀಡಲಾಗಿತ್ತು.
ಅದರೆ ಕೊನೆಗೆ ಆಗಿದ್ದೇ ಬೇರೆ. ಮುಸ್ಲಿಂ ಧರ್ಮದಲ್ಲಿನ ಮುಂಜಿಗೆ ಹೆದರಿ ತಾವು ವಾಪಸ್​ ಆಗಿರುವುದಾಗಿ ಚಂದ್ರಶೇಖರಯ್ಯನವರು ಹೇಳಿದ್ದಾರೆ. ಮತಾಂತರಗೊಂಡ ತಕ್ಷಣ ಅಲ್ಲಿಯ ಪದ್ಧತಿಯಂತೆ ಮುಂಜಿ ಮಾಡಲಾಗುತ್ತದೆ. ನನಗೆ ಮಧುಮೇಹ ಇರುವ ಹಿನ್ನೆಲೆಯಲ್ಲಿ ಅದನ್ನು ಮಾಡಿಸಿಕೊಳ್ಳಲು ನನಗೆ ಭಯವಾಯಿತು. ವಾಪಸಾಗಲು ನಿರ್ಧರಿಸಿದ್ದೆ. ಅಷ್ಟೊತ್ತಿಗಾಗಲೇ ಸುದ್ದಿ ತಿಳಿದ ತಕ್ಷಣ ಬೆಜೆಪಿಯ ಮಾಜಿ ಸಚಿವ ಸೊಗಡು ಶಿವಣ್ಣ ಭೇಟಿ ನೀಡಿ, ಮರಳಿ ಹಿಂದೂ ಧರ್ಮಕ್ಕೆ ಬರುವಂತೆ ಮನವೊಲಿಸಿದರು ಎಂದು ಹೇಳಿದ್ದಾರೆ.
ಮುಂಜಿ ಮಾಡಿದರೆ ಮಾತ್ರ ಮುಸ್ಲಿಮರಲ್ಲಿ ಸರಿಯಾಗಿ ಶವ ಸಂಸ್ಕಾರ ಮಾಡುವುದು ಎಂದು ಚಂದ್ರಶೇಖರಯ್ಯ ತಿಳಿಸಿದರು. ಇಸ್ಲಾಂನ ಸುನ್ನತಿ ಪ್ರಕ್ರಿಯೆಯನ್ನು ಮುಂಜಿ ಎಂದು ಕರೆಯಲಾಗುತ್ತದೆ. ಮುಸ್ಲಿಂ ಧರ್ಮದಲ್ಲಿ ಇದು ಕಡ್ಡಾಯವಾಗಿದೆ. ಮತಾಂತರಗೊಂಡವರನ್ನು ಈ ವಿಧಿಗೆ ಒಳಪಡಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಪುರುಷರ ಶಿಶ್ನದ ಮುಂದೊಗಲನ್ನು ತೆಗೆಯಲಾಗುತ್ತದೆ. ನೈರ್ಮಲ್ಯ ಮತ್ತು ಶುಚಿತ್ವದ (ತಾಹರ) ಭಾಗವಾಗಿ ಈ ಪ್ರಕ್ರಿಯೆ ನಡೆಯುತ್ತದೆ. ಇದಕ್ಕೆ ಹೆದರಿ ವಾಪಸಾಗಲು ತಾವು ನಿರ್ಧರಿಸಿರುವುದಾಗಿ ಚಂದ್ರಶೇಖರಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಈಗಾಗಲೇ ತುಮಕೂರು ತಾಲ್ಲೂಕು ಊರ್ಡಿಗೆರೆ ಹೋಬಳಿ ಹಿರೇಹಳ್ಳಿ ಗ್ರಾಮದ ಓಂಕಾರೇಶ್ವರ ದೇವಾಲಯದ ಅರ್ಚಕ ದಿ.ರೇಣುಕಾರಾದ್ಯ ಎಂಬುವರ ಪುತ್ರ ಎಚ್.ಆರ್ ಚಂದ್ರಶೇಖರಯ್ಯ ಉರುಫ್ ಮಂಜಣ್ಣ ಎಂಬುವವರು ಹಿಂದೂ ಧರ್ಮವನ್ನು ತ್ಯಜಿಸಿ, ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಈಗ ಈ ಘಟನೆ ಭಾರಿ ಸುದ್ದಿಯಾಗುತ್ತಲೇ ಜೆಡಿಎಸ್​ನತ್ತ ಹಿಂದೂ ಸಂಘಟನೆಗಳು ಕೆಂಗಣ್ಣು ಬೀರಿವೆ. ಇದಕ್ಕೆ ಕಾರಣ, ಚಂದ್ರಶೇಖರಯ್ಯನವರನ್ನು ಮತಾಂತರಗೊಳಿಸಲು ಯತ್ನಿಸಿರುವುದು ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಮುಖಂಡ ತನ್ವೀರ್ ಎನ್ನುವ ಆರೋಪ ಕೇಳಿಬಂದಿದೆ. ಮಾಧ್ಯಮಗಳಿಗೆ ಸಂದರ್ಶನ ನೀಡುವಾಗ ಚಂದ್ರಶೇಖರಯ್ಯನವರು, ತನ್ವೀರ್​ ಅವರ ಹೆಸರನ್ನು ಹೇಳಿದ್ದಾರೆ. ತನ್ವೀರ್ ನಮ್ಮ ಊರಿನವರೇ, ಅವರು ಜೆಡಿಎಸ್​ ಪಕ್ಷದವರು. ನಮ್ಮನ್ನು ಅಣ್ಣ-ಅತ್ತಿಗೆ ರೀತಿ ನೋಡುತ್ತಾರೆ ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ಚಂದ್ರಶೇಖರಯ್ಯನವರ ತಲೆಯನ್ನು ತನ್ವೀರ್​ ಅವರೇ ತಿರುಗಿಸಿದ್ದಾರೆ ಎನ್ನುವುದು ಸ್ಥಳೀಯರ ಆರೋಪ. ಮುಸ್ಲಿಂ ಸಮುದಾಯದವರೇ ಹೆಚ್ಚಾಗಿರುವ ಪ್ರದೇಶದಲ್ಲಿ ಮನೆ ಕಟ್ಟಿಕೊಂಡಿರುವ ತಮಗೆ ತನ್ವೀರ್ ಜೊತೆ ಹೆಚ್ಚಿನ ಒಡನಾಟ ಇರುವುದಾಗಿ ಅವರು ಹೇಳಿದ್ದಾರೆ.
ಮತಾಂತರಗೊಳಿಸಲು ತನ್ವೀರ್​ ಅವರು ಮನವೊಲಿಸಿದ್ದಾರೆ. ಕೊನೆಗೆ ತಮಗೇ ಸೇರಿರುವ ಮಸೀದಿಗೇ ಹೋಗಿ ಅವರು ಮತಾಂತರಗೊಳಿಸಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಇದೇ ಕಾರಣಕ್ಕೆ ಹಿಂದೂ ಸಂಘಟನೆಗಳು ಜೆಡಿಎಸ್​ ತನ್ವೀರ್​ ವಿರುದ್ಧ ದೂರು ದಾಖಲು ಮಾಡಲು ಮುಂದಾಗಿವೆ.(ಏಜೆನ್ಸೀಸ್​)

ಚಂದ್ರಶೇಖರಯ್ಯನವರು ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ:(ಕೃಪೆ: ತುಮಕೂರು ನ್ಯೂಸ್​)

ನಾಟಿಕೋಳಿ ವಿವಾದ: ನಮ್​ ಮನೇಲಿ ಚಿಕನ್​ ತಿಂದೇ ಇಲ್ಲ ಎಂದ ಮಾಜಿ ಶಾಸಕಿ: ಆದ್ರೆ ಸಿದ್ದು ಹೇಳಿದ್ದೇ ಬೇರೆ…
LIVE: ಜೊತೆಜೊತೆಯಲಿ ಕಿರಿಕ್- ನನ್ನ ಮಕ್ಕಳ ಮೇಲೆ ಕೈಯಿಟ್ಟು ಹೇಳುತ್ತೇನೆ- ಅನಿರುದ್ಧ್​ ಚಾಲೆಂಜ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
