ನಮ್ಮ ದೊಡ್ಡಪ್ಪನಿಗೆ ಎರಡು ವಿವಾಹ ಆಗಿದ್ದರು. ಇಬ್ಬರಿಂದಲೂ ಅವರಿಗೆ ಮಕ್ಕಳಿಲ್ಲ. ಇಬ್ಬರೂ ಪತ್ನಿಯರೂ ಅವರನ್ನು ಬಿಟ್ಟಿದ್ದರು. ಈ ಕಾರಣದಿಂದ ನಮ್ಮ ದೊಡ್ಡಪ್ಪ 57 ವರ್ಷದಿಂದ ನನ್ನನ್ನು  ಸಾಕಿಕೊಂಡಿದ್ದರು. ಅವರ ಕಷ್ಟಗಳನ್ನು ನಾನೇ ಎಲ್ಲಾ ನೋಡಿಕೊಳ್ಳುತ್ತಿದ್ದೆ.
ಯಾರೋ ಹೇಳಿದ ಮಾತು ಕೇಳಿ ನಮ್ಮ ದೊಡ್ಡಪ್ಪ  2ನೇ ಹೆಂಡತಿ ಹತ್ತಿರ ಹೋಗಿ ಅವರ ಹೆಸರಿಗೆ ಆಸ್ತಿ ಮಾಡಿ, 6 ತಿಂಗಳ ನಂತರ ಮರಣ ಹೊಂದಿದ್ದಾರೆ. ಈಗ ಮೊದಲನೆಯ ಹೆಂಡತಿಯ ಆರೋಗ್ಯವನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ಈಗ ಮೊದಲನೇ ಹೆಂಡತಿಯು ಅವರ ಸಾಕು ಮಗನಿಗೆ ತಮ್ಮ ಎಲ್ಲಾ  ಆಸ್ತಿಯ ವಿಲ್  ಪತ್ರ ಬರೆದು ಕೊಟ್ಟಿದಾರೆ.  ಈಗ ಅವರ ಆಸ್ತಿ ಯಾರಿಗೆ ಸೇರುತ್ತದೆ? ನಾನು ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಬಹುದೇ?
ಉತ್ತರ:ಮೋಸ ಮಾಡಿ ತನ್ನ ಹೆಸರಿಗೆ ನಿಮ್ಮ ದೊಡ್ಡಪ್ಪನ ಎರಡನೇ ಹೆಂಡತಿ ಆಸ್ತಿ ವರ್ಗಾವಣೆ ಮಾಡಿಸಿಕೊಂಡಿದ್ದರೆ, ಅಂತಹ ವರ್ಗಾವಣೆ, ಸಿಂಧುವಲ್ಲ ಎಂದು ಘೋಷಣೆ ಮಾಡಲು ಪ್ರಕರಣವನ್ನು ನಿಮ್ಮ ದೊಡ್ಡಮ್ಮ (ಮೊದಲ ಪತ್ನಿ) ಕೇಸ್​ ಹಾಕಬಹುದು. ಮೊದಲ ಹೆಂಡತಿಗೆ ಜೀವನಾಂಶಕ್ಕೆ ಯಾವ ವ್ಯವಸ್ಥೆಯನ್ನೂ ಮಾಡದೇ, ನಿಮ್ಮ ದೊಡ್ಡಪ್ಪ ತನ್ನ ಎರಡನೇ ಹೆಂಡತಿಗೇ ಎಲ್ಲ ಆಸ್ತಿಯನ್ನು ಬರೆಯಿಸಿಕೊಟ್ಟಿದ್ದರೆ, ಅದನ್ನು ಪ್ರಶ್ನೆ ಮಾಡಬಹುದು.
ತನ್ನ ಎರಡನೆಯ ಹೆಂಡತಿಗೆ ಮಾಡಿರುವ ವರ್ಗಾವಣೆ ನ್ಯಾಯಾಲಯದಲ್ಲಿ ರದ್ದಾದರೆ, ಆಗ ಸಂಪೂರ್ಣ ಆಸ್ತಿ ನಿಮ್ಮ ದೊಡ್ಡಪ್ಪನ ಮೊದಲನೇ ಹೆಂಡತಿಯದೇ ಆಗುತ್ತದೆ. ಎರಡನೇ ಹೆಂಡತಿಗೆ ಭಾಗ ಸಿಗುವುದಿಲ್ಲ. ಆ ನಂತರ ನಿಮ್ಮ ದೊಡ್ಡಮ್ಮ ಅವರ ಆಸ್ತಿಯನ್ನು ನಿಮ್ಮ ಹೆಸರಿಗೆ ಮಾಡಬಹುದು. ಈಗ ನೀವು ದಾವೆ ಹಾಕಲು ನಿಮಗೆ ಹಕ್ಕು ಇರುವುದಿಲ್ಲ. ನಿಮ್ಮ ದೊಡ್ಡಮ್ಮ ಬೇಕಿದ್ದರೆ ಹಾಕಬಹುದು. ಸಾಕು ಮಗನಿಗೆ ಆಸ್ತಿಯಲ್ಲಿ ಹಕ್ಕು ಬರುವುದಿಲ್ಲ.
ಹಿಜಾಬ್​ ಮಧ್ಯೆ ಬಂದ ಪಗಡಿ, ತಿಲಕ! ಸುಪ್ರೀಂ​ನಲ್ಲಿ ಭರ್ಜರಿ ವಾದ- ಪ್ರತಿವಾದ; ಕೋರ್ಟ್​ ಹೇಳಿದ್ದೇನು?
ಇರುವೆ ತಂದಿಟ್ಟ ಸಂಕಷ್ಟ: ಬದುಕು ಹೈರಾಣ- ಊರನ್ನೇ ತೊರೆಯುತ್ತಿರುವ ಗ್ರಾಮಸ್ಥರು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − 18 =
Remember me
