ಬೆಳಗಾವಿ:ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರ ಹೆಸರು ಕೇಳಿಬರುತ್ತಿದ್ದಂತೆಯೇ ಬೆಳಗಾವಿಯ ರಮೇಶ್​ ಜಾರಕಿಹೊಳಿ ಅವರ ಬೆಂಬಲಿಗರು ಕೊತಕೊತ ಕುದಿಯುತ್ತಿದ್ದಾರೆ.
ಉಪಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿಗೆ ಆಗಮಿಸಿದ್ದ ಶಿವಕುಮಾರ್​ ಅವರ ವಿರುದ್ಧ ಭಾರಿ ಪ್ರತಿಭಟನೆ ಶುರುವಾಗಿದ್ದು, ಕೆಲ ಕಾಲ ವಾತಾವರಣ ಉದ್ವಿಗ್ನತೆಗೆ ತೆರಳಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಗಿ ಬಂತು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಿ. ಕೆ. ಶಿವಕುಮಾರ್‌ಗೆ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರುತ್ತಿದ್ದಂತೆಯೇ, ಹೊರಗಡೆ ಕಾದು ಕುಳಿತಿದ್ದ ಜಾರಕಿಹೊಳಿ ಬೆಂಬಲಿಗರು ಶಿವಕುಮಾರ್​ ವಿರುದ್ಧ ಘೋಷಣೆ ಕೂಡಲು ಸುರು ಮಾಡಿದರು. ಮಾತ್ರವಲ್ಲದೇ, ಅವರ ರಾಜೀನಾಮೆಗೆ ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಅವರ ಬೆಂಗಾವಲು ವಾಹನದ ಮೇಲೆ ಚಪ್ಪಲಿ ತೂರಲಾಯಿತು. ಕಲ್ಲು ಎಸೆಯಲಾಯಿತು. ಕಪ್ಪು ಬಾವುಟವನ್ನೂ ತೂರಲಾಯಿತು.
ಈ ಗಲಾಟೆಯಲ್ಲಿ ಶಿವಕುಮಾರ್ ಅವರ ಬೆಂಬಲಿಗರ ವಾಹನದ ಗಾಜು ಪುಡಿಯಾಗಿದೆ. ಪೊಲೀಸರು ಮಧ್ಯೆ ಪ್ರವೇಶಿಸುತ್ತಿದ್ದಂತೆಯೇ, ಪ್ರತಿಭಟನಾಕಾರರು ಓರ್ವ ಪೊಲೀಸ್ ಕಾನ್ಸ್‌ಟೇಬಲ್‌ ಅವರನ್ನು ಎಳೆದಾಡಿದರು. ಸಿವಕುಮಾರ್​ ಅವರ ಎಸ್ಕಾರ್ಟ್​ ಸಿಬ್ಬಂದಿಯ ಮೇಲೂ ಹಲ್ಲೆ ಮಾಡಿದರು. ಬೆಂಗಾವಲು ಕಾರಿಗೆ ಗುದ್ದಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ನಡುವೆ ಜಾರಕಿಹೊಳೆ ಮತ್ತು ಪೊಲೀಸರ ನಡುವೆ ವಾಗ್ವಿವಾದ ನಡೆಯಿತು.
ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್​, ಈ ಗಲಾಟೆಗೆ ಜಾರಕಿಹೊಳಿ ಅವರೇ ನೇರ ಕಾರಣ ಎಂದು ಆರೋಪಿಸಿದೆ. ಸುರೇಶ್ ಅಂಗಡಿ ಅವರ ಅಕಾಲಿಕ ಮರಣದಿಂದ ತೆರವಾಗಿರುವ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ. ನಾಳೆ ಕಾಂಗ್ರೆಸ್​ನಿಂದ ಸತೀಶ್​ ಜಾರಕಿಹೊಳಿ ನಾಮಪತ್ರ ಸಲ್ಲಿಸಲಿದ್ದಾರೆ. ​
ಸಿಡಿ ನಕಲಿ ಆದ್ಮೇಲೆ ಹೆಸರ‍್ಯಾಕೆ ಹೊರಬಂತು? ಜಾರಕಿಹೊಳಿ ವಿರುದ್ಧ ಕೈ ಕಾರ್ಯಕರ್ತರ ಪ್ರತಿಭಟನೆ

VIDEO: ಇಂಟರ್​ಕೋರ್ಸ್​ ಮಾಡಿಲ್ಲ ಅಂತ ಯಾವ್ ಬಾಯಲ್ಲಿ ಹೇಳ್ತಾನ್ರಿ…? ಪರೀಕ್ಷೆ ಮಾಡ್ತಾರೆ, ತಪ್ಪಿಸಿಕೊಳ್ಳೋದು ಸಾಧ್ಯನೇ ಇಲ್ಲ…

ಅಕ್ರಮ ಸಂಬಂಧ ಇಟ್ಟುಕೊಂಡ ಪತ್ನಿ ವಿಚ್ಛೇದನವನ್ನೂ ಕೊಡ್ತಿಲ್ಲ- ಕಾನೂನಿನಡಿ ನಾನು ಏನು ಮಾಡಬಹುದು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × three =
Remember me
