ಬೆಂಗಳೂರು:ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಒಎಂಆರ್ ಶೀಟ್ ತಿದ್ದುಪಡಿ ಮಾಡಿಸಿ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದು, ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾಗಿದ್ದ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯ ರಚನಾ ಹನುಮಂತ (25) ಅವರನ್ನು ಸಿಐಡಿ ಅಧಿಕಾರಿಗಳು ಇತ್ತೀಚೆಗೆ ಬಂಧಿಸಿದ್ದರು, ಇದೀಗ ಅವರು ಸಿಐಡಿ ಕಸ್ಟಡಿಯಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದಾರೆ.
ನಾಲ್ಕು ತಿಂಗಳ ಹಿಂದೆ ಪಿಎಸ್​ಐ ಅಕ್ರಮ ನೇಮಕಾತಿಯ ಕುರಿತು ಬಹಿರಂಗಗೊಳ್ಳುತ್ತಲೇ ಎಸ್ಕೇಪ್​ ಆಗಿದ್ದ ರಚನಾ ತಲೆಮರೆಸಿಕೊಂಡಿದ್ದರು. ಪಿಎಸ್​ಐ ನೇಮಕಾತಿಯನ್ನು ಸರ್ಕಾರ ರದ್ದು ಮಾಡಿದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಅಭ್ಯರ್ಥಿಗಳು ಕೈಗೊಂಡಿದ್ದ ಹೋರಾಟದಲ್ಲಿ ರಚನಾ ಮುಂಚೂಣಿಯಲ್ಲಿದ್ದರು. ಇವರ ವಿರುದ್ಧ ಬೆಂಗಳೂರಿನಲ್ಲಿ ಎಫ್​ಐಆರ್ ದಾಖಲಾಗಿತ್ತು. ಹಗರಣದಲ್ಲಿ ಅವರ ಪಾತ್ರವೂ ಇದೆ ಎಂಬುದು ಬೆಳಕಿಗೆ ಬಂದು ಕೇಸ್ ಆಗುತ್ತಲೇ ತಲೆಮರೆಸಿಕೊಂಡು ಕೊನೆಗೆ ಸಿಕ್ಕಿಬಿದ್ದಿದ್ದರು.
ವಿಚಾರಣೆ ನಡೆಸುತ್ತಿರುವ ಸಿಐಡಿ ಎದುರು ರಚನಾ ತಮ್ಮ ಜೀವನದ ಅತಿ ನೋವಿನ ಕಥೆಯನ್ನು ಈ ರೀತಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
‘ನನ್ನ ತಾಯಿ ಶಿಕ್ಷಕಿಯಾಗಿದ್ದರು. ಅವರಿಗೆ ನಾನು ಹುಟ್ಟಿದ್ದೇ ತಂದೆಯ ಕೋಪಕ್ಕೆ ಕಾರಣವಾಯಿತು. ಏಕೆಂದರೆ ನಾನು ಹೆಣ್ಣಾಗಿದ್ದೆ. ಇದೇ ಕಾರಣಕ್ಕೆ ನಾನು ಹುಟ್ಟುತ್ತಲೇ ಅಪ್ಪ ಬಿಟ್ಟು ಹೋದರು. ಅಮ್ಮನೇ ನನ್ನನ್ನು ಕಷ್ಟಪಟ್ಟು ಸಾಕಬೇಕಾಯಿತು. ಎಲ್ಲ ಕಷ್ಟಗಳನ್ನೂ ಸಹಿಸಿಕೊಂಡು ಅಮ್ಮ ಸಾಕಿದರು. ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆಯಿಂದ ಚೆನ್ನಾಗಿ ಓದಿದೆ.
ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಮಾಡಿದೆ. ಎನ್​ಟಿಪಿಎಸ್​ ಥರ್ಮಲ್ ಪ್ಲಾಂಟ್​​ನಲ್ಲಿ ಉದ್ಯೋಗ ಮಾಡಿದೆ. ಜೀವನದಲ್ಲಿ ಸಾಧನೆ ಮಾಡಬೇಕು ಎನ್ನುವ ಕಾರಣಕ್ಕೆ ಎರಡು ಬಾರಿ ಪಿಎಸ್ಐ ಪರೀಕ್ಷೆ ಬರೆದೆ. ಎಷ್ಟು ಚೆನ್ನಾಗಿ ಬರೆದರೂ ಪಾಸ್​ ಆಗಲೇ ಇಲ್ಲ.
ಆಗಲೇ ನನಗೆ ಗುರುಬಸವರಾಜ್ ಎಂಬಾತನ ಪರಿಚಯವಾಯ್ತು. ನನ್ನ ವಿಷ್ಯ ತಿಳಿಸಿದಾಗ, ಹೀಗೆಲ್ಲಾ ಎಷ್ಟೇ ಚೆನ್ನಾಗಿ ಬರೆದರೂ ಪಾಸ್​ ಆಗಲ್ಲ, ಅದಕ್ಕಿರುವುದು ಬೇರೆಯೇ ಮಾರ್ಗ ಅಂದ. 35 ಲಕ್ಷ ರೂಪಾಯಿ ಕೊಟ್ಟರೆ ಪಾಸ್​ ಆಗ್ತೀಯಾ ಅಂದ. ನನ್ನ ಬಳಿ ಅಷ್ಟೊಂದು ಹಣ ಇರಲಿಲ್ಲ. ಆದರೆ ನಾನು ಪರೀಕ್ಷೆ ಪಾಸ್​ ಆಗುವ ಪಣ ತೊಟ್ಟಿದ್ದೆ. ಕೊನೆಗೆ 30 ಲಕ್ಷ ರೂಪಾಯಿಗೆ ಒಪ್ಪಿಕೊಂಡ. 15 ಲಕ್ಷ ರೂಪಾಯಿ ಸಾಲ ಮಾಡಿ ನೀಡಿದೆ. ಪರೀಕ್ಷೆ ಬರೆದೆ.
ಬಳಿಕ ಪರೀಕ್ಷೆಯಲ್ಲಿ ಟಾಪರ್​ ಆದೆ. ಇಷ್ಟಾಗುತ್ತಿದ್ದಂತೆಯೇ ಕಲಬುರಗಿಯಲ್ಲಿ ಪಿಎಸ್ಐ ಹಗರಣ ಬೆಳಕಿಗೆ ಬಂದಿರೋದು ತಿಳಿಯಿತು. ಸರ್ಕಾರ ಸಂಪೂರ್ಣ ಪರೀಕ್ಷೆಯನ್ನೇ ರದ್ದು ಮಾಡಿದ್ದರಿಂದ ನಡೆದ ಪ್ರತಿಭಟನೆಯಲ್ಲಿ ನಾನು ಭಾಗವಹಿಸಿದ್ದೆ. ನಂತರ ಗುರುಬಸವರಾಜ್​ಗೆ ಈ ಬಗ್ಗೆ ಕೇಳಿದಾಗ ಆತ ಧೈರ್ಯ ತುಂಬಿದ. ಇದು ಕಲಬುರಗಿಯಲ್ಲಿ ಆಗಿರೋದು, ನಿನ್ನ ತನಕ ಬರಲ್ಲ ಅಂದ. ಇದನ್ನೇ ನಂಬಿ ನಾನೂ ಪ್ರತಿಭಟನೆ ಮುಂಚೂಣಿ ವಹಿಸಿದೆ. ಕೊನೆಗೆ ನನ್ನ ಮೇಲೂ ಕೇಸ್​ ಆಯ್ತು. ಏನು ಮಾಡಬೇಕು ಎಂದು ತಿಳಿಯಲಿಲ್ಲ. ಹೆದರಿ ಓಡಿ ಹೋದೆ…
ಎಂದು ಹೇಳಿಕೊಂಡಿರುವುದಾಗಿ ತಿಳಿದುಬಂದಿದೆ. ಮಗಳು ಓಡಿಹೋದ ದಿನ ಅವರ ತಾಯಿ ಕೂಡ ತಮ್ಮ ನೋವನ್ನು ತೋಡಿಕೊಂಡಿದ್ದರು. ಮಗಳು ಹುಟ್ಟಿದ್ದ ಕಾರಣಕ್ಕೆ ಪತಿ ಬಿಟ್ಟುಹೋಗಿದ್ದನ್ನೂ ಅವರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು.
ಪಿಎಸ್​ಐ ನೇಮಕಾತಿ ಹಗರಣ: ಪ್ರಥಮ ರ್ಯಾಂಕ್ ಪಡೆದಿದ್ದ ರಚನಾ ಸೆರೆ
ಅನೈತಿಕ ಸಂಬಂಧ ಹೊಂದಿದ ಪತ್ನಿಯನ್ನು ಪ್ರಶ್ನಿಸಿದ್ರೆ ವರದಕ್ಷಿಣೆ ಕೇಸ್​ ಬೆದರಿಕೆ ಹಾಕ್ತಾಳೆ: ಪತಿಗೆ ಕಾನೂನಡಿ ಇರುವ ರಕ್ಷಣೆಗಳೇನು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − six =
Remember me
