ಕಲಬುರಗಿ:ಪಿಎಸ್​ಐ ಪರೀಕ್ಷೆಯಲ್ಲಿ ಕೋಟ್ಯಂತರ ರೂಪಾಯಿಗಳ ಗೋಲ್​ಮಾಲ್​ ಮಾಡಿ ಜೈಲು ಪಾಲಾಗಿರುವ ಕಿಂಗ್​ಪಿನ್​ ಬಿಜೆಪಿ ಮುಖಂಡೆ ದಂಪತಿ ದಿವ್ಯಾ ಹಾಗರಗಿ ಹಾಗೂ ರಾಜೇಶ್​ ಇಬ್ಬರೂ ಪರಸ್ಪರ ಮುಖ ನೋಡಿಕೊಂಡು ಗಳಗಳನೆ ಕಣ್ಣೀರು ಹಾಕಿರುವ ಘಟನೆ ನಡೆದಿದೆ.
ಪ್ರಕರಣದ ಪ್ರಮುಖ ಆರೋಪಿಯಾಗಿರುವ ದಿವ್ಯಾ ಅವರ ಸಿಐಡಿ ಕಸ್ಟಡಿ ಅಂತ್ಯಗೊಂಡಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಕಲಬುರಗಿಯ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ. ಈ ನಡುವೆಯೇ ಗೋಲ್​ಮಾಲ್​ನಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಧಿತರಾಗಿರುವ ಅವರ ಪತಿ ರಾಜೇಶ್​ ಕೂಡ ಇದೇ ಜೈಲಿನಲ್ಲಿ ಇದ್ದಾರೆ. ಜೈಲಿನಲ್ಲಿ ದಂಪತಿ ಮುಖಾಮುಖಿಯಾಗಿದ್ದಾರೆ. ಇಬ್ಬರೂ ಪರಸ್ಪರ ನೋಡಿಕೊಂಡು ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ದಿವ್ಯಾ ಅವರನ್ನು ಮಹಿಳೆಯರ ಸೆಲ್​ನಲ್ಲಿ ಇರಿಸಲು ಮುಂದಾದಾಗ, ಅವರು ಅದಕ್ಕೆ ವಿರೋಧಿಸಿ ಪ್ರಕರಣದ ಆರೋಪಿಗಳಾಗಿರುವ ಜ್ಞಾನ ಜ್ಯೋತಿ ಶಾಲೆಯ ಶಿಕ್ಷಕರ ಮಹಿಳಾ ಬ್ಯಾರಕ್ ನಲ್ಲಿ ಹಾಕುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಈ ಮನವಿಗೆ ಪೊಲೀಸರು ಒಪ್ಪದೇ ಸಿಂಗಲ್ ಸೆಲ್​ನಲ್ಲಿ ಇರಿಸಿದ್ದಾರೆ, ಜತೆಗೆ ಇತರ ಕೈದಿಗಳಿಗೆ ಸಿಲುವ ಸೌಲಭ್ಯವನ್ನೇ ಇವರಿಗೂ ಕೊಡುವುದಾಗಿ ಪೊಲೀಸರು ಹೇಳಿದ್ದಾರೆ ಎನ್ನಲಾಗಿದೆ.
ಮನೆ ಮಾರಿ 50 ಲಕ್ಷ ರೂ. ಕೊಟ್ರು… ಕೆಲ್ಸನೂ ಹೋಯ್ತು- ದುಡ್ಡೂ ಹೋಯ್ತು.. ಅರೆಸ್ಟೂ ಆದ್ರು!

ಪರೀಕ್ಷೆ ಗೋಲ್‌ಮಾಲ್‌: ಜೈಲಲ್ಲಿದ್ದಾಗಲೂ ಮೆಡಿಕಲ್‌ ಲೀವ್‌: ಮೇಲಧಿಕಾರಿಗಳನ್ನೇ ಯಾಮಾರಿಸಿದ್ದ ಒಳ ಉಡುಪಿನ ಕಿಂಗ್‌ಪಿನ್‌!

ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದವರ ಬುಡಕ್ಕೆ ಬೆಂಕಿ ಇಟ್ಟ ಅನುಭವ: ರೀ ಓಪನ್‌ ಆಯ್ತು ಕೇಸು…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 + 20 =
Remember me
