ಕಲಬುರಗಿ:ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ನಂತರ ಅದು ಸಕ್ಸಸ್ ಆದ ಖುಷಿಗೆ ಗ್ರೂಪ್ ಪೋಟೊ ತೆಗಸಿಕೊಂಡ ಟೀಮ್ ಫೋಟೋ ಇದೀಗ ವೈರಲ್‌ ಆಗಿದೆ.
ಇಲ್ಲಿಯ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗ್ರೂಪ್ ಪೋಟೋ ತೆಗೆಸಿಕೊಳ್ಳಲಾಗಿತ್ತು. ಇದು ಒಂದು ಐತಿಹಾಸಿಕ ದಿನ ಎಂದು ಹೇಳಿ ಪೋಟೋ ತೆಗೆಸಿಕೊಂಡಿದ್ದರು ಅಕ್ರಮದ ಪ್ರಮುಖ ಆರೋಪಿಯಾಗಿರುವ ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ ಮತ್ತು ಅವರ ತಂಡ.
ಅಕ್ರಮದಲ್ಲಿ ಭಾಗಿಯಾಗಿದ್ದ ಜ್ಞಾನ ಜ್ಯೋತಿ ಶಾಲೆಯ ಮೇಲ್ವಿಚಾರಕರಿಗೆ ನಾಲ್ಕು ಸಾವಿರ ಹೆಚ್ಚಿಗೆ ಹಣ ನೀಡಿರುವ ಆರೋಪ ದಿವ್ಯಾ ಅವರ ಮೇಲಿದೆ. ಅಕ್ರಮದಲ್ಲಿ ಭಾಗಿಯಾಗಿದ್ದ ಉಳಿದವರಿಗೆ ಸೇರಬೇಕಾಗಿದ್ದ ಪಾಲು ಸಂದಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಪೋಟೊ ತೆಗೆಸಿಕೊಂಡು ಸಂತಸ ಪಟ್ಟಿದ್ದರು ಎನ್ನಲಾಗಿದೆ.
ಈ ಫೋಟೋದಲ್ಲಿ ಸಿಐಡಿಯಿಂದ ಬಂಧಿತರಾಗಿರುವ ಸಿಪಿಐ ಆನಂದ್ ಮೇತ್ರಿ, ಇದೇ ಪ್ರಕರಣದಲ್ಲಿ ಅಮಾನತಾಗಿರು ಡಿವೈಎಸ್ಪಿ ಆರ್ ಆರ್ ಹೋಸಮನಿ, ಇನ್ಸ್‌ಪೆಕ್ಟರ್‌ ದೀಲಿಪ್ ಸಾಗಾರ್ ಕೂಡ ದಿವ್ಯಾ ಜತೆಗೆ ಪೋಟೊಗೆ ಪೋಸ್ ಕೊಟ್ಟಿದ್ದಾರೆ. ಈ ಅಕ್ರಮ ಪ್ರಕರಣದಲ್ಲಿ ಆರೋಪಿಯಾಗಿರುವ ಜ್ಞಾನ ಜ್ಯೋತಿ ಶಾಲೆಯ ಹೆಡ್ ಮಾಸ್ಟರ್ ಕಾಶಿನಾಥ್ ಅವರನ್ನೂ ಪೋಟೋದಲ್ಲಿ ಕಾಣಬಹುದು. ಇದರ ಜತೆತೆ ಶಾಲೆಯ ಸಿಬ್ಬಂದಿ, ಹೋಮ್ ಗಾರ್ಡ್ ಗಳು ಫೋಟೋದಲ್ಲಿ ಇದ್ದಾರೆ.
ಪರೀಕ್ಷೆ ಗೋಲ್‌ಮಾಲ್‌: ಜೈಲಲ್ಲಿದ್ದಾಗಲೂ ಮೆಡಿಕಲ್‌ ಲೀವ್‌: ಮೇಲಧಿಕಾರಿಗಳನ್ನೇ ಯಾಮಾರಿಸಿದ್ದ ಒಳ ಉಡುಪಿನ ಕಿಂಗ್‌ಪಿನ್‌!

ಪಿಎಸ್‌ಐ ಗೋಲ್‌ಮಾಲ್‌: ಖದೀಮರಿಗೆ ನಂಬರ್‌ ಕೊಡ್ತಿದ್ದ ಡಿವೈಎಸ್ಪಿಯೇ ಇದೀಗ ‘ಕೈದಿ ನಂಬರ್‌ 18197’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + twenty =
Remember me
