ಕಲಬುರಗಿ:ಪಿಎಸ್​ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳು ಒಂದೊಂದೇ ಬೆಳಕಿಗೆ ಬರುತ್ತಿದ್ದಂತೆಯೇ ಆಘಾತಕಾರಿ ಘಟನೆಗಳು ಹೊರಬರುತ್ತಿವೆ.
ಮಗ ಪಿಎಸ್ಐ ಆಗುತ್ತಾನೆಂದು ತಂದೆ ಮನೆ, ಸೈಟು ಮಾರಿ 50 ಲಕ್ಷ ರೂಪಾಯಿ ಲಂಚ ಕೊಟ್ಟು, ದುಡ್ಡೂ ಇಲ್ಲದೇ, ಕೆಲಸವೂ ಇಲ್ಲದೇ ಗೋಳಾಡುವ ಸ್ಥಿತಿ ಶರಣಪ್ಪ ಎನ್ನುವವರಿಗೆ ಬಂದಿದೆ. ಮಗ ಪ್ರಭು ಪಿಎಸ್​ಐ ಆಗಲಿ ಎನ್ನುವ ಕಾರಣಕ್ಕೆ ಎಲ್ಲವನ್ನೂ ಮಾರಿ ಇದೀಗ ಬೀದಿಗೆ ಬಂದದ್ದೂ ಅಲ್ಲದೇ, ಅಕ್ರಮದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ತಂದೆ-ಮಗನನ್ನು ವಶಕ್ಕೆ ಪಡೆಯಲಾಗಿದೆ.
ಆಡಿಟರ್ ಚಂದ್ರಕಾಂತ್ ಕುಲಕರ್ಣಿ ಮುಖಾಂತರ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪಿ ಆರ್​.ಡಿ. ಪಾಟೀಲ್ ಅವರಿಗೆ ಇವರು ಹಣ ನೀಡಿದ್ದರು. ಇರೋ ಮನೆ ಮಾರೊ ಬಾಡಿಗೆ 50 ಲಕ್ಷ ಹಣ ನೀಡಿ ಬಾಡಿಗೆ ಮನೆಯಲ್ಲಿದ್ದರು ಶರಣಪ್ಪ.
ಎಮ್.ಎಸ್.ಇರಾಣಿ ಪದವಿ ಕಾಲೇಜು ಪರೀಕ್ಷೆ ಕೇಂದ್ರದಲ್ಲಿ ಬ್ಲೂಟೂತ್ ಡಿವೈಸ್ ಬಳಸಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದ ಆರೋಪದಡಿ ಅಭ್ಯರ್ಥಿ ಪ್ರಭು ಹಾಗೂ ಈತನ ತಂದೆ ಶರಣಪ್ಪ ಅವರಿಂದ 50 ಲಕ್ಷ ರೂಪಾಯಿ ಹಣ ಪಡೆದು ಅಕ್ರಮಕ್ಕೆ ಸಹಕರಿಸಿದ ಆರೋಪದಲ್ಲಿ ಚಂದ್ರಕಾಂತ್ ಕುಲಕರ್ಣಿ ಅವರನ್ನು ಸಿಐಡಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆರ್.ಡಿ.ಪಾಟೀಲ್ ಸಹಕಾರದಿಂದ ಬ್ಲೂಟೂತ್ ಡಿವೈಸ್ ಬಳಸಿ ಅಕ್ರಮ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಪಿಎಸ್ಐ ನೇಮಕಾತಿ ಅಕ್ರಮ: ಒಳ ಉಡುಪಲ್ಲಿ ಬ್ಲೂಟೂಥ್​, ಕೆಮ್ಮಿದರೆ ಉತ್ತರ! ಕಿಂಗ್​ಪಿನ್​ ಇಂಜಿನಿಯರ್​ ಶರಣು

VIDEO: ಯುವತಿ ಜತೆ ನೇಪಾಳದ ನೈಟ್​ಕ್ಲಬ್​ನಲ್ಲಿ ರಾಹುಲ್​ ಎಣ್ಣೆ ಪಾರ್ಟಿ? ವಿಡಿಯೋ ನೋಡಿ ತಲ್ಲಣ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:4 × 3 =
Remember me
