ಬೆಂಗಳೂರು:ಈಗಾಗಲೇ ನಿಗದಿಯಾಗಿರುವ ಇದೇ 23ರಿಂದ ಅಂದರೆ ಸೋಮವಾರದಿಂದ 9-12ನೇ ತರಗತಿಗಳು ಆರಂಭವಾಗಲಿದೆ. ಇದಾಗಲೇ ಹೈಸ್ಕೂಲ್‌ಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈಗ ಪಿಯುಸಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ಕೆಲವೊಂದು ಮಾರ್ಗಸೂಚಿಗಳನ್ನು ನೀಡಲಾಗಿದೆ.ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ತರಗತಿಗಳನ್ನು ನಡೆಸುವ ವಿಧಾನ:* ರಾಜ್ಯದಲ್ಲಿ ಪಿಯುಸಿ ತರಗತಿಗಳನ್ನು ಶೇ.2ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ದಿನಾಂಕ 23-08-2021ರಿಂದ ಪ್ರಾರಂಭಿಸುವುದು.
* ಪಾಸಿಟಿವಿಟಿ ದರ 2ಕ್ಕಿಂತ ಹೆಚ್ಚು ಇರುವ ಜಿಲ್ಲೆಗಳಲ್ಲಿ ಸರ್ಕಾರದ ಮುಂದಿನ ಆದೇಶದಂತೆ ಕ್ರಮವಹಿಸಲು ತಿಳಿಸಲಾಗುವುದು.
* ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳನ್ನು ಏಕಕಾಲದಲ್ಲಿ ನಡೆಸುವುದು. ಆದರೆ ಶೇ.50ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. ಇದರ ಅರ್ಥ ವಾರದ ಮೊದಲ ಮೂರು ದಿನಗಳು ( ಸೋಮವಾರ, ಮಂಗಳವಾರ ಹಾಗೂ ಬುಧವಾರ ) ಭೌತಿಕ ತರಗತಿಗಳಿಗೆ ಹಾಜರಾದರೆ, ಇನ್ನುಳಿದ 50ರಷ್ಟು ವಿದ್ಯಾರ್ಥಿಗಳು ಮನೆಯಲ್ಲೇ ಆನ್ ಲೈನ್ ತರಗತಿಗೆ ಹಾಜರಾಗುವುದು. ಮುಂದಿನ ಮೂರು ದಿನಗಳು ( ಗುರುವಾರ, ಶುಕ್ರವಾರ ಹಾಗೂ ಶನಿವಾರ ) ಆನ್‌ಲೈನ್‌ ತರತಿಗೆ ಹಾಜರಾದ ವಿದ್ಯಾರ್ಥಿಗಳು ಭೌತಿಕ ತರಗತಿಗೆ, ಭೌತಿಕ ತರಗತಿಗೆ ಹಾಜರಾದ ವಿದ್ಯಾರ್ಥಿಗಳು ಆನ್‌ಲೈನ್‌ ತರಗತಿಗೆ ಹಾಜರಾಗಬೇಕು.
* ಯಾವುದೇ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 100ಕ್ಕಿಂತ ಕಡಿಮೆಯಿದ್ದು, ವಿಶಾಲವಾದ ಕೊಠಡಿಗಳು ಲಭ್ಯವಿದ್ದಲ್ಲಿ, ಎಲ್ಲಾ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ಎಲ್ಲಾ ಸರಕ್ಷತಾ ಕ್ರಮಗಳೊಂದಿಗೆ ಪೂರ್ಣ ಪ್ರಮಾಣದಲ್ಲಿ ನಡೆಸಬಹುದು. ಅಂದರೆ ವಾರ ಪೂರ್ಣ ಭೌತಿಕ ತರಗತಿಗಳು ನಡೆಯುತ್ತವೆ.
* ವಿದ್ಯಾರ್ಥಿಗಳ ಹಾಜರಾತಿಯನ್ನು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಕಡ್ಡಾಯಗೊಳಿಸುವುದು.
* ಪ್ರತಿ ತರಗತಿ, ಕೊಠಡಿಯಲ್ಲಿ ನಿಯಮಾನುಸಾರ ಅಂತರ ಕಾಪಾಡಿಕೊಂಡು ಕೊಠಡಿಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳ ಸಂಖ್ಯೆಯನ್ನು ನಿಗದಿ ಪಡಿಸಿಕೊಳ್ಳುವುದು.
ಸಾಮಾನ್ಯ ನಿಯಂತ್ರಣ ಕ್ರಮಗಳು:* ತಮ್ಮ ಮಕ್ಕಳಿಗೆ ಯಾವುದೇ ರೀತಿಯ ಸೋಂಕಿನ ಲಕ್ಷಣಗಳು ಇಲ್ಲ ಎಂಬ ಬಗ್ಗೆ ಪಾಲಕರು ದೃಢೀಕರಣ ಪತ್ರ ನೀಡಬೇಕು.
* ವಿದ್ಯಾರ್ಥಿಗಳು ತರಗತಿ ಮತ್ತು ಕಾಲೇಜು ಆವರಣದಲ್ಲಿ ಗುಂಪುಗೂಡಬಾರದು
* ಕನಿಷ್ಠ 6 ಅಡಿಗಳ ಭೌತಿಕ ಅಂತರದ ನಿಯಮವನ್ನು ಪಾಲಿಸುವುದು.
* ಮುಖ ಕವಚ, ಮಾಸ್ಕ್ ಗಳನ್ನು ಕಡ್ಡಾಯವಾಗಿ ಬಳಕೆ ಮಾಡುವುದು.
* ಪದೇ ಪದೇ ಕೈಗಳನ್ನು ಸೋಪಿನಿಂದ ತೊಳೆಯುವುದು.* ಕೆಮ್ಮುವಾಗ, ಸೀನುವಾಗ ಕಡ್ಡಾಯವಾಗಿ ಮುಖಕ್ಕೆ ಕರವಸ್ತ್ರ, ಟಿಶ್ಯು ಪೇಪರ್ ಬಳಸಬೇಕು.* ಎಲ್ಲೆಂದರಲ್ಲಿ ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಉಪನ್ಯಾಸಕರು ಮತ್ತು ಕಾಲೇಜಿನ ಸಿಬ್ಬಂದಿಗೆ ಸೂಚನೆಪ್ರಥಮ ಆದ್ಯತೆಯಾಗಿ ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗಳು ವ್ಯಾಕ್ಸಿನೇಷನ್ ಪಡೆದುಕೊಳ್ಳುದು ಕಡ್ಡಾಯವಾಗಿರುತ್ತದೆ. ಈ ಸಂಬಂಧ ರಾಜ್ಯದ ಎಲ್ಲಾ ಉಪ ನಿರ್ದೇಶಕರು ತಮ್ಮ ವ್ಯಾಪ್ತಿಯ ಪದವಿ ಪೂರ್ವ ಕಾಲೇಜುಗಳಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿಗಳಿಗೆ ಲಸಿಕೆ ಹಾಕಿಸೋ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − one =
Remember me
