ಬೆಂಗಳೂರು:ತೆಲುಗಿನ ಪುಷ್ಪಾ ಸಿನಿಮಾದಿಂದ ಪ್ರೇರಣೆಗೊಂಡ ತಂಡ ಬುಲೆರೊ ಗೂಡ್ಸ್ ವಾಹನದ ಕೆಳಭಾಗದಲ್ಲಿ ಪ್ರತ್ಯೇಕ ಬಾಕ್ಸ್ ಮಾಡಿಕೊಂಡು ಬೀದರ್‌ನಿಂದ ಗಾಂಜಾ ತಂದು ನಗರದಲ್ಲಿ ಪೆಡ್ಲರ್‌ಗಳಿಗೆ ಮಾರಾಟ ಮಾಡುತ್ತಿದ್ದರು. ಈ ಜಾಲವನ್ನು ಬೇಧಿಸಿರುವ ಬೇಗೂರು ಪೊಲೀಸರ ಒಂದು ಕೋಟಿ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ.
ಕುಣಿಗಲ್ ತಾಲೂಕಿನ ಕೆ.ಆರ್.ಅರವಿಂದ್(26), ತಾವರೆಕೆರೆ ನಿವಾಸಿ ಪವನ್ ಕುಮಾರ್ (27), ಮಂಗಳೂರು ಜಿಲ್ಲೆಯ ಅಮ್ಜದ್ ಇತಿಯಾರ್ ಅಲಿಯಾಸ್ ಇಮ್ರಾನ್ ಅಲಿಯಾಸ್ ಇರ್ಷಾದ್ (27) ಈ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಬೀದರ್‌ನ ಭಾಲ್ಕಿ ಪ್ರಭು(27), ದಕ್ಷಿಣ ಕನ್ನ ಜಿಲ್ಲೆಯ ನಜೀಮ್ (26) ಮತ್ತು ಆಂಧ್ರಪ್ರದೇಶದ ಭೂಪಾಲ ಪಟ್ಟಣಂನ ಪತ್ತಿ ಸಾಯಿ ಚಂದ್ರ ಪ್ರಕಾಶ್ (19) ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಏಳು ಮಂದಿ ಆರೋಪಿಗಳ ವಿರುದ್ಧ ಆಂಧ್ರಪ್ರದೇಶ, ಬೆಂಗಳೂರು ನಗರ, ಗ್ರಾಮಾಂತರದ ವಿವಿಧ ಠಾಣೆಯಲ್ಲಿ ಕೊಲೆ, ಕೊಲೆ ಯತ್ನ, ಎನ್‌ಡಿಪಿಎಸ್ ಹಾಗೂ ದರೋಡೆ ಸೇರಿ ಹಲವು ಅಪರಾಧ ಪ್ರಕರಣಗಳ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳು ಜೈಲಿಗೆ ಹೋದಾಗ ಪರಸ್ಪರ ಪರಿಚಯವಾಗಿ, ದೊಡ್ಡ ಮಟ್ಟದಲ್ಲಿ ಮಾದಕ ವಸ್ತು ಮಾರಾಟ ಜಾಲ ವಿಸ್ತರಿಸಿಕೊಂಡಿದ್ದರು.
ಆರೋಪಿಗಳ ಪೈಕಿ ಅರವಿಂದ್, ಪವನ್, ಅಮ್ಜದ್ ಜುಲೈ ೧೫ರಂದು ಠಾಣೆ ವ್ಯಾಪ್ತಿಯ ದೇವರಚಿಕ್ಕನಹಳ್ಳಿಯ ಆರ್‌ಟಿಒ ಕಚೇರಿಯ ಹುಣಸೇಮರದ ಸಮೀಪದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದರು. ಈ ಮಾಹಿತಿ ತಿಳಿದ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ 6 ಕೆ.ಜಿ. 380 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿತ್ತು. ಉಳಿದ ಆರೋಪಿಗಳ ಬಗ್ಗೆ ಬಂಧಿತರು ಬಾಯ್ಬಿಟ್ಟಿದರು.
ಕೃತ್ಯಕ್ಕೆ ಪುಷ್ಪಾ ಸಿನಿಮಾ ಪ್ರೇರಣೆಅಮ್ಜದ್ ವಿಚಾರಣೆ ವೇಳೆ ಬೀದರ್‌ನ ಪ್ರಭು ಗಾಂಜಾ ಪೂರೈಕೆ ಮಾಡುತ್ತಿರುವ ವಿಚಾರ ಬಾಯಿಬಿಟ್ಟಿದ್ದ. ಅಲ್ಲದೆ, ಪ್ರತಿ ಬುಧವಾರ ಎಲೆಕ್ಟ್ರಾನಿಕ್ ಸಿಟಿ, ಹುಳಿಮಾವು, ಬೇಗೂರು ವ್ಯಾಪ್ತಿಯ ನಿರ್ಜನಪ್ರದೇಶದಲ್ಲಿ ಗಾಂಜಾ ಪೂರೈಕೆ ಮಾಡಿ ಹೋಗುತ್ತಾನೆ ಎಂಬ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಎಸಿಪಿ ಎ.ಬಿ.ಸುಧಾಕರ್ ನೇತೃತ್ವದಲ್ಲಿ ಪಿಐ ಅನಿಲ್ ಕುಮಾರ್ ತಂಡ ಜುಲೈ 20ರಂದು ಅಮ್ಜದ್ ಜತೆ ಬೋಳಗುಟ್ಟ ರಸ್ತೆಯ ನೈಸ್ ರಸ್ತೆಯ ಸೇತುವೆ ಬಳಿಯ ಖಾಲಿ ಜಾಗದಲ್ಲಿ ಆರೋಪಿಗಳಿಗಾಗಿ ಕಾಯುತ್ತಿದ್ದರು. ಅದೇ ವೇಳೆ ಬುಲೆರೊ ಗೂಡ್ಸ್ ವಾಹನದಲ್ಲಿ ಪ್ರಭು ಹಾಗೂ ಇತರೆ ಮೂವರು ಆರೋಪಿಗಳು ಬಂದಿದ್ದರು.
ಆರೋಪಿಗಳನ್ನು ಮಾಲು ಸಮೇತ ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಆಗ ವಾಹನ ಪರಿಶೀಲಿಸಿದಾಗ ಗೂಡ್ಸ್ ವಾಹನದ ಲಗೇಜ್ ಇಡುವ ಪ್ಲಾಟ್‌ಫಾರಂ ಕೆಳಭಾಗದಲ್ಲಿ ದೊಡ್ಡ ಬಾಕ್ಸ್ ಮಾಡಿಕೊಂಡು ಅದರಲ್ಲಿ 168 ಕೆ.ಜಿ. 630 ಗ್ರಾಂ ಗಾಂಜಾ ಇಟ್ಟಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಪ್ರಭು ಮತ್ತು ಪತ್ತಿ ಸಾಯಿ ಚಂದ್ರಪ್ರಕಾಶ್ ವಿಚಾರಣೆಯಲ್ಲಿ ತೆಲುಗಿನ ಪುಷ್ಪಾ ಸಿನಿಮಾದ ಪ್ರೇರಣೆಯಿಂದ ಗೂಡ್ಸ್ ವಾಹನಕ್ಕೆ ಪ್ರತ್ಯೇಕ ಬಾಕ್ಸ್ ಮಾಡಿಕೊಂಡು ಗಾಂಜಾ ಸಾಗಾಟ ಮಾಡುತ್ತಿರುವುದು ಬಾಯಿಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ಲಾಕ್​ಬಸ್ಟರ್​ ಸಿನಿಮಾ ‘ಪುಷ್ಪಾ’ ನೋಡಿ ಪ್ರೇರೇಪಿತನಾದ ಅಭಿಮಾನಿ ಈಗ ಪೊಲೀಸರ ಅತಿಥಿ!

ಅಬುಧಾಬಿಯಲ್ಲಿ ನಟಿ ರಶ್ಮಿಕಾ: ಅಕ್ಟೋಬರ್​ನಲ್ಲಿ ‘ಗುಡ್​ಬೈ’- ಮಾಹಿತಿ ಹಂಚಿಕೊಂಡ ಕೊಡಗಿನ ಬೆಡಗಿ

ನಿಮ್ಮ ಎಕ್ಸ್​ಗಳ ಜತೆ ಮಂಚಕ್ಕೆ ಹೋಗುವಿರಾ ಎಂದು ನಟಿಯರನ್ನು ಪ್ರಶ್ನಿಸಿದ ಕರಣ್​: ಸಾರಾ-ಜಾಹ್ನವಿ ಉತ್ತರ ಹೀಗಿತ್ತು!

Sign in to your account
Please enter an answer in digits:2 × 1 =
Remember me
