ಬೆಂಗಳೂರು:ಭಾನುವಾರ ಮುಂಜಾನೆ 6 ಗಂಟೆಯಿಂದಲೇ ಕೋಳಿ ಮತ್ತು ಮಾಂಸದ ಅಂಗಡಿಯ ಕದ ತಟ್ಟಿದ ಗ್ರಾಹಕರು ಮಾಂಸ ಖರೀದಿಗೆ ಮುಗಿಬಿದ್ದಿದ್ದ ದೃಶ್ಯ ಸಿಲಿಕಾನ್ ಸಿಟಿಯ ಉದ್ದಗಲಕ್ಕೂ ಕಂಡುಬಂತು. ಬಿಟ್ಟರೆ ಸಿಗಲ್ಲವೇನೋ ಎಂಬ ದಾವಂತಕ್ಕೆ ಬಿದ್ದ ಗ್ರಾಹಕರು ಕೋಳಿ ಮತ್ತು ಮಾಂಸದ ಅಂಗಡಿಗೆ ಮುಗಿಬಿದ್ದಿದ್ದರು. ಭಾನುವಾರದ ಲಾಕ್ ಡೌನ್ ಅನ್ನು ಮಾಂಸದ ಅಡುಗೆಯಿಂದಲೇ ಪೂರೈಸಬೇಕೆಂಬ ಚಾಲೆಂಜ್ ಗೆ ಬಿದ್ದವರಂತೆ ಕೋಳಿ ಅಂಗಡಿಗಳ ಮುಂದೆ ಜನಜಾತ್ರೆಯೇ ಜಮಾಯಿಸಿತ್ತು.
ಕೋಳಿ ಖಾಲಿ:ಇಷ್ಟೊಂದು ಗ್ರಾಹಕರು ಜಮಾಯಿಸುವ ಸುಳಿವರಿಯದ ಕೋಳಿ ಮತ್ತು ಮಾಂಸದಂಗಡಿ ಮಾಲೀಕರು ಗ್ರಾಹಕರ ದಂಡು ಕಂಡು ಬೆಸ್ತು ಬಿದ್ದರು. ೮ ಗಂಟೆಗೆಲ್ಲಾ ಕೋಳಿ ಖಾಲಿ ಮಾಂಸ ಖಾಲಿ ಎಂಬ ಅಂಗಡಿ ಮಾಲೀಕರು, ಹತಾಶ ಗ್ರಾಹಕರ ಆಕ್ರೋಶ ಎದುರಿಸಿದ ಪ್ರಸಂಗವೂ ನಡೆಯಿತು.
ನಿಯಮ ಉಲ್ಲಂಘನೆ:ಕರೊನಾ ನಿಯಂತ್ರಣಕ್ಕೆ ಸರ್ಕಾರ ಘೋಷಿಸಿರುವ ಲಾಕ್ಡೌನ್ ನಿಯಮ ಭಾನುವಾರ ೧೦ ಗಂಟೆಯಷ್ಟರಲ್ಲೇ ವಿಫಲವಾದಂತಾಯಿತು. ಏಕಕಾಲಕ್ಕೆ ಮನೆಯಿಂದ ಹೊರಬಿದ್ದ ಗ್ರಾಹಕರು ಮಾಸ್ಕ್ ಧರಿಸದೆ ಪರಸ್ಪರ ಅಂತರ ಕಾಯ್ದುಕೊಳ್ಳದೆ ಮಾಂಸ ಖರೀದಿಗೆ ಒಬ್ಬರು ಮತ್ತೊಬ್ಬರ ಮೇಲೆ ಮುಗಿಬಿದ್ದಿದ್ದರು. ೧೦ ಗಂಟೆ ಕಳೆದರೂ ಜಾಗ ಖಾಲಿ ಮಾಡದ ಗ್ರಾಹಕರಿಗೆ ಖಾಕಿ ಪಡೆ ಲಾಠಿ ರುಚಿ ತೋರಿಸಿ ಚದುರಿಸುವಲ್ಲಿ ಸುತ್ತು ಹೊಡೆದರು.
ವೀಕೆಂಡ್‌ ಕರ್ಫ್ಯೂ ಜತೆ ಲಾಕ್‌ಡೌನೂ ವಿಸ್ತರಣೆ ಆಗುತ್ತಾ? ತಜ್ಞರು ಏನು ಹೇಳಿದ್ದಾರೆ ನೋಡಿ…

ಮುಟ್ಟಿನ ಐದು ದಿನ ಆಚೆ-ಈಚೆ ಕರೊನಾ ಲಸಿಕೆ ಪಡೆಯಬಾರದು ಎನ್ನುವ ಸುದ್ದಿ ನಿಜನಾ?

ಮದ್ವೆಗೆ ಒಂದಿಬ್ರು ಹೆಚ್ಚಿಗೆ ಹೋದ್ರೆ ಗೊತ್ತಾಗಲ್ಲಾ ಅಂದ್ಕೊಂಡ್ರಾ? ಬ್ಯಾಂಡ್‌ ಇದ್ರಷ್ಟೇ ಎಂಟ್ರಿ…. ನೋಡಿ ಹೊಸ ಪ್ಲ್ಯಾನ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − five =
Remember me
