ಬೆಂಗಳೂರು:ಹಿಜಾಬ್ ವಿಚಾರವಾಗಿ ಸರ್ಕಾರ ಸ್ಪಷ್ಟವಾಗಿ ಹೇಳಿದ್ದು, ಸಮವಸ್ತ್ರ ಸಂಹಿತೆ ಪಾಲನೆ ಕುರಿತು ಆದೇಶ ಹೊರಡಿಸಿದೆ . ಹಿಜಾಬ್ ಹಾಗೂ ಕೇಸರಿ ಶಾಲು ಎರಡು ಕೂಡಾ ಕ್ಯಾಂಪಸ್ ಗೆ ಬರಬಾರದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಬೆಂಗಳೂರಿನಲ್ಲಿ ಪತ್ರಕರ್ತರ ಜತೆಗೆ ಅವರು ಮಾತನಾಡಿದರು. ಹಿಜಾಬ್ ವಿವಾದದ ಬಗ್ಗೆ ನ್ಯಾಯಾಲಯದಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಬೇರೆ ಬೇರೆ ರಾಜ್ಯದ ಕೋರ್ಟ್ ನಿರ್ದೇಶನಗಳನ್ನು ಮುಂದಿಟ್ಟು ಅಡ್ವೊಕೇಟ್ ಜನರಲ್ ವಾದ ಮಾಡುತ್ತಾರೆ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಅಹಿತಕರ ಘಟನೆಗಳನ್ನು ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿಲ್ಲ. ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಶಾಲಾ ಕಾಲೇಜುಗಳಿಗೆ ರಜಾ ಘೋಷಣೆ ಮಾಡಲಾಗಿದೆ. ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಮುಖ್ಯಮಂತ್ರಿ ಕೂಡಾ ವಿನಂತಿ ಮಾಡಿದ್ದಾರೆ. ಕಾಂಗ್ರೆಸ್ ಷಡ್ಯಂತ್ರ ಇದರ ಹಿಂದೆ ಇದೆ. ಒಂದು ವರ್ಗ ಪ್ರೇರಣೆ ಮಾಡುತ್ತಿದೆ, ಮತ್ತೊಂದು ವರ್ಗ ಬ್ಯಾಲೆನ್ಸ್ ಮಾಡುತ್ತಿದೆ. ಅವರು ಹಿಜಾಬ್ ಹಾಕಿದ್ದಾರೆ ಎಂದು ಇವರು ಕೇಸರಿ ಶಾಲು ಹಾಕಿದ್ದಾರೆ‌ ಎಂದು ಸಚಿವರು ಹೇಳಿದರು.
ಧ್ವಜ ಸ್ಥಂಭದಲ್ಲಿ ಕೇಸರಿ ಧ್ವಜ ಹಾರಿಸಿದ ಘಟ‌ನೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದು ಅಧಿಕೃತವಲ್ಲ. ಕಾಂಗ್ರೆಸ್ ಗೆ ಏನು ಬೇಕೋ ಆ‌ ರೀತಿ ಹೇಳಿಕೆ ಕೊಟ್ಟಿದ್ದಾರೆ. ಡಿಸಿಎಸ್‌ಪಿ ಏ‌ನು ಹೇಳಿರುವುದು ಅಧಿಕೃತ. ಧ್ವಜ ಸ್ಥಂಭದಲ್ಲಿ ಕೇಸರಿ ಬಾವುಟ ಹಾರಿಸಿರುವುದು ತಪ್ಪು ಕಾನೂನು ಪ್ರಕಾರ ಕ್ರಮವಾಗುತ್ತದೆ. ಈ ರೀತಿಯ ಘಟನೆಗಳು ವಿದ್ಯಾರ್ಥಿಗಳ ದೃಷ್ಟಿಯಿಂದ ಒಳ್ಳೆಯದಲ್ಲ. ಕೋರ್ಟ್ ಆದೇಶವನ್ನು ಸರ್ಕಾರ ಪಾಲಿಸಲಿದೆ ಎಂದು ಆರ್.ಅಶೋಕ್ ಹೇಳಿದರು.
ಹಿಜಾಬ್‌ ಧರಿಸಿ ಪೋರ್ನ್‌ ವಿಡಿಯೋ ಶೂಟಿಂಗ್‌: ನೀಲಿಚಿತ್ರ ತಾರೆಗೆ ತಾಲಿಬಾನಿಗಳಿಂದ ಕೊಲೆ ಬೆದರಿಕೆ

‘ಹಿಜಾಬನ್ನೇ ಯೂನಿಫಾರ್ಮ್ ಮಾಡಿಬಿಡಿ, ಭಾರತದ ದುರ್ದೈವ… ಇಲ್ಲಿ ಮಾತ್ರ ಬಹುಸಂಖ್ಯಾತರದ್ದು ಈ ಸ್ಥಿತಿ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − 2 =
Remember me
