ಬೆಂಗಳೂರು:ನೋಡಿ ನಾನು ಹೇಗೆ ಎಂದು ಎಲ್ಲರಿಗೂ ಗೊತ್ತು. ಮೊದಲು ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು. ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇದ್ದರೆ, ನಿಮ್ಮಲ್ಲಿ ಛಲವಿದ್ದರೆ ಯಾರಿಗೂ ಯಾವುದಕ್ಕೂ ಉತ್ತರಿಸಬೇಕಿಲ್ಲ. ಈ ಶಕ್ತಿಯಿಂದಲೇ ನಾನೀಗ ನಿಮ್ಮ ಮುಂದೆ ಬಂದು ಮಾತನಾಡುತ್ತಿದ್ದೇನೆ…
ಹೀಗೆಂದು ಡ್ರಗ್ಸ್​ ಆರೋಪದ ಮೇಲೆ ಹಲವು ತಿಂಗಳು ಜೈಲಿನಲ್ಲಿ ಕಳೆದಿರುವ ನಟಿ ರಾಗಿಣಿ ದ್ವಿವೇದಿ ಹೇಳಿದ್ದಾರೆ. ಜೈಲಿನಿಂದ ಹೊರ ಬಂದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿರುವ ರಾಗಿಣಿ ತಮ್ಮ ಇನ್​ಸ್ಟಾಗ್ರಾಂ ಮೂಲಕ ಹೀಗೆ ವಿಡಿಯೋ ಮಾಡಿ ಮಾತನಾಡಿದ್ದಾರೆ. ಲೈವ್ ವಿಡಿಯೋ ಮೂಲಕ ಮಾತನಾಡುವಾಗ ಕಣ್ಣೀರು ಕೂಡ ಸುರಿಸಿದರು.


A post shared by Ragini dwivedi (@rraginidwivedi)

ಆ ದಿನಗಳು ತುಂಬಾ ಕಷ್ಟದ್ದಾಗಿತ್ತು, ಕುಟುಂಬದ ಬೆಂಬಲದಿಂದಲೇ ನಾನು ಸ್ಟ್ರಾಂಗ್ ಆಗಿದ್ದೇನೆ. ನಾನು ತುಂಬಾ ಮೌನ ವಹಿಸಿದ್ದೇನೆ. ಆದರೆ ದುರ್ಬಲಗೊಂಡಿಲ್ಲ ಎಂದಿದ್ದಾರೆ.
ಶೂಟಿಂಗ್ ಮಾಡುವಾಗ ಸಹ ಕೆಲವು ಬಾರಿ ಸೀನ್‍ಗಳು ತುಂಬಾ ಚೆನ್ನಾಗಿ ಬರುತ್ತವೆ. ಇನ್ನೂ ಕೆಲವು ಬಾರಿ ಕೆಟ್ಟದಾಗಿ ಮಾತನಾಡುತ್ತೇವೆ. ಹೀಗಾಗಿ ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಬೇಕು. ಅದೇ ರೀರಿ ಒಂದು ಸೂಪರ್ ಹಿಟ್ ಫಿಲ್ಮ್ ಬರುತ್ತೆ, ಬಳಿಕ ಥಟ್ ಅಂತ ಮತ್ತೊಂದು ಫಿಲ್ಮ್ ಫ್ಲಾಪ್ ಆಗುತ್ತೆ.. ನಾನು ಇಷ್ಟು ಗಟ್ಟಿಯಾಗಿ ಇರಬೇಕಾದರೆ ನನ್ನ ತಂದೆ, ತಾಯಿಯೇ ಕಾರಣ ಎಂದು ಅವರು ಹೇಳಿದ್ದಾರೆ.
12 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದೇನೆ ಎಲ್ಲ ರೀತಿಯ ಏಳು ಬೀಳುಗಳನ್ನು ಕಂಡಿದ್ದೇನೆ. ಕಷ್ಟದ ಸಂದರ್ಭಗಳನ್ನು ನಿಭಾಯಿಸುವ ಬಗ್ಗೆ ನಮ್ಮ ತಂದೆ, ತಾಯಿ ನಮಗೆ ಚೆನ್ನಾಗಿ ಹೇಳಿಕೊಟ್ಟಿದ್ದಾರೆ ಎಂದು ರಾಗಿಣಿ ಹೇಳಿದರು.
ಇವರ ಈ ವಿಡಿಯೋಗೆ ಹಲವಾರು ರೀತಿಯ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ತಮ್ಮ ವಿರುದ್ಧ ಕಮೆಂಟ್​ ಮಾಡಿದವರಿಗೂ ರಾಗಿಣಿ ಸಾವಧಾನದಿಂದ ಉತ್ತರಿಸಿದ್ದಾರೆ.
ಈ ಲೇಡಿ ಪೊಲೀಸ್​ ಓಡದಿದ್ದರೆ ಆತನ ಪ್ರಾಣವೇ ಹೋಗ್ತಿತ್ತು! ವಿಡಿಯೋ ನೋಡಿ…

ರೈತ ಮುಖಂಡರಿಂದ ಜೀವಕ್ಕೆ ಅಪಾಯವಿದೆ- ಹಿಂಸಾಚಾರದ ಕುರಿತು ನಟ ದೀಪ್​ ಸಿಧು ಹೇಳಿರುವ ಮಾಹಿತಿ ಇಲ್ಲಿದೆ…

ಸಿಎಎ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ: ಸಾಮಾಜಿಕ ಕಾರ್ಯಕರ್ತನಿಗೆ ಜಾಮೀನು ನೀಡದ ಸುಪ್ರೀಂಕೋರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 15 =
Remember me
