ಬೆಂಗಳೂರು:ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಇರುವ ನಟಿ ರಾಗಿಣಿಗೆ ನಿನ್ನೆ ವಿಪರೀತ ಬೆನ್ನುನೋವು ಕಾಣಿಸಿಕೊಂಡಿರುವ ಕಾರಣ ರಾತ್ರಿಪೂರ್ತಿ ಅವರು ನರಳಾಡಿದ್ದಾರೆ ಎನ್ನಲಾಗಿದೆ.
ತಮಗೆ ತುರ್ತಾಗಿ ಬೆನ್ನುನೋವಿನ ಚಿಕಿತ್ಸೆ ನೀಡಿ, ನೋವು ತಡೆಯಲು ಆಗುತ್ತಿಲ್ಲ ಎಂದು ಒಂದೇ ಸಮನೆ ಈ ‘ನಶೆ’ ನಟಿ ಹೇಳಿದ್ದರಿಂದ ತುರ್ತಾಗಿ ಜೈಲಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ.
ಕೆಲ ದಿನಗಳಿಂದ ರಾಗಿಣಿ, ತಮಗೆ ಬೆನ್ನುನೋವು ಇರುವ ಬಗ್ಗೆ ಹೇಳಿದ್ದರು. ಅಲ್ಲಿಂದ ಇಲ್ಲಿಯವರೆಗೂ ತಮಗೆ ಜೈಲಿನಲ್ಲಿ ಇರಲು ಆಗುತ್ತಿಲ್ಲ, ವಿಪರೀತ ಬೆನ್ನುನೋವಾಗಿರುವ ಕಾರಣ, ಯಾವುದಾದರೂ ಖಾಸಗಿ ಆಸ್ಪತ್ರೆಗೆ ಸೇರಿಸಿ ಎಂದು ಮನವಿ ಮಾಡುತ್ತಲೇ ಬಂದಿದ್ದಾರೆ.
ಇದನ್ನೂ ಓದಿ:ಇಂದಿನಿಂದ ಸಿನಿಮಾ ಪ್ರದರ್ಶನ ಶುರು: ರಾಜ್ಯದ ಕೆಲ ಏಕಪರದೆ, ಮಲ್ಟಿಪ್ಲೆಕ್ಸ್ ಮಾತ್ರ ಆರಂಭ
ಇದೀಗ ನಿನ್ನೆ ರಾತ್ರಿಪೂರ್ತಿ ಜೈಲಿನಲ್ಲಿ ಗೋಳಾಟ ನಡೆಸಿ ಅಧಿಕಾರಿಗಳ ನಿದ್ದೆ ಗೆಡಿಸಿರುವ ನಟಿಗೆ ರಾತ್ರಿ ಪೂರ್ತಿ ಚಿಕಿತ್ಸೆ ನೀಡಲಾಗಿದೆಯಂತೆ.
ಇದೇ ವೇಳೆ, ಬೆನ್ನುನೋವಿನ ಕಾರಣ ನೀಡಿ, ರಾಗಿಣಿ ಪರ ವಕೀಲರು ಕೋರ್ಟ್​ ಮೊರೆ ಕೂಡ ಹೋಗಿದ್ದಾರೆ. ಜೈಲಿನಲ್ಲಿರುವ ಆಸ್ಪತ್ರೆಯ ಚಿಕಿತ್ಸೆ ಸಾಲುತ್ತಿಲ್ಲ. ಯಾವುದಾದರೂ ಖಾಸಗಿ ಆಸ್ಪತ್ರೆಗೆ ತಮ್ಮನ್ನು ದಾಖಲಿಸಲು ಅನುಮತಿ ನೀಡಿ ಎಂದು ಅರ್ಜಿಯಲ್ಲಿ ಅವರು ತಿಳಿಸಿದ್ದಾರೆ.
ಡ್ರಗ್ಸ್​ ಪ್ರಕರಣದಲ್ಲಿ ರಾಗಿಣಿಯನ್ನು ಕಳೆದ ಸೆಪ್ಟೆಂಬರ್​ 4ರಂದು ಬಂಧಿಸಲಾಗಿದೆ. 14ರಿಂದ ಅವರು ಜೈಲಿನಲ್ಲಿ ಇದ್ದು, ಇದೀಗ ಒಂದು ತಿಂಗಳು ಜೈಲಿನಲ್ಲಿ ಕಳೆದಿದ್ದಾರೆ.
ಎ.ಸಿ ಆನ್​ ಮಾಡಿ ಕಾರಿನಲ್ಲೇ ನಿದ್ದೆಗೆ ಜಾರಿದ… ಮರುದಿನ ಶವವಾದ…

ಜಾಲತಾಣದಲ್ಲಿ ಆಕ್ಟಿವ್ ಇರೋ ಬಾಲಕಿಯರೇ ಇವನ ಟಾರ್ಗೆಟ್​- ಪಾಲಕರೇ ಎಚ್ಚರ…!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × two =
Remember me
