ಬೆಂಗಳೂರು:ನಗರದ ಜ್ಯುಡಿಶಿಯಲ್ ಲೇಔಟ್​ನಲ್ಲಿರುವ ನಟಿ ರಾಗಿಣಿ ದ್ವಿವೇದಿ ಅವರು ಮನೆಯನ್ನು ಅವರ ತಂದೆ ಮಾರಾಟಕ್ಕೆ ಇಟ್ಟಿದ್ದಾರೆ.
ಡ್ರಗ್ಸ್ ಕೇಸ್​ನಲ್ಲಿ ಸಿಕ್ಕಿಕೊಂಡಿರುವ ಮಗಳ ಕೋರ್ಟ್​, ವಕೀಲರ ಫೀಸು ಇತ್ಯಾದಿಗಳಿಗೆ ಹಣ ಹೊಂದಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಕನಸಿನ ಮನೆಯನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಖಾಸಗಿ ವೆಬ್​ಸೈಟ್​ ಒಂದರಲ್ಲಿ ರಾಗಿಣಿ ತಂದೆ ರಾಕೇಶ್ ದ್ವಿವೇದಿ ಮನೆ ಸೇಲ್​ಗೆ ಇದೆ ಎಂಬ ಜಾಹೀರಾತು ನೀಡಿದ್ದಾರೆ.
ನ್ಯಾಯಾಂಗ ಬಡಾವಣೆಯ ಅನನ್ಯ ಅಪಾರ್ಟ್​ಮೆಂಟ್​ನಲ್ಲಿ ಇರುವ ತಮ್ಮ ಮೂರು ಬಿಎಚ್​ಕೆ ಮನೆಯನ್ನು 2 ಕೋಟಿ ರೂಪಾಯಿಗೆ ಸೇಲ್​ಗೆ ಇಟ್ಟಿದ್ದಾರೆ.
ವಕೀಲರಿಗೆ ಫೀಸ್​ ಕೊಡಲು ನನ್ನ ಬಳಿ ಹಣವಿಲ್ಲ. ಆದ್ದರಿಂದ ಮನೆ ಮಾರಾಟ ಮಾಡುತ್ತಿರುವುದಾಗಿ ಆಪ್ತರ ಬಳಿ ರಾಕೇಶ್​ ಅವರು ಅಳಲು ತೋಡಿಕೊಂಡಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿ:ನಟಿ ಸಂಜನಾಗೆ ಇನ್ನಷ್ಟು ತಲೆಬಿಸಿ- ಸಿಮ್​ ಇಲ್ಲದ ಮೊಬೈಲ್​ ತಂದಿಟ್ಟಿದೆ ಸಂಕಷ್ಟ
ಇದು ರಾಗಿಣಿಯ ಕನಸಿನ ಮನೆ ಕೂಡ. ಈ ಮನೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಮಗೆ ಇಷ್ಟವಾಗಿರುವ ರೀತಿಯಲ್ಲಿ ಇಂಟೀರಿಯರ್ ಡಿಸೈನ್ ಮಾಡಿಸಿದ್ದರು ರಾಗಿಣಿ. ತಮ್ಮ ಅಕ್ರಮ ಡ್ರಗ್ಸ್​ ದಂಧೆಯ ಹಣದಲ್ಲಿ ಈ ಹಣವನ್ನು ಕಟ್ಟಿಕೊಂಡಿದ್ದು, ಸದ್ದಿಲ್ಲದೇ ಮನೆ ಮಾರಿ ಕೈ ತೊಳೆದುಕೊಳ್ಳುತ್ತಿದ್ದಾರೆ ರಾಗಿಣಿ ಪಾಲಕರು ಎಂಬ ಆರೋಪವೂ ಕೇಳಿಬರುತ್ತಿದೆ.
ಈ ನಡುವೆ, ರಾಗಿಣಿ ತಂದೆ ರಾಕೇಶ್​ ಅವರು, ತುಂಬಾ ನೊಂದುಬೆಂದು ಹೋಗಿದ್ದು, ಸಾರ್ವಜನಿಕವಾಗಿ, ಅಕ್ಕಪಕ್ಕದವರ ಜತೆ ಹೆಚ್ಚು ಮಾತನಾಡುತ್ತಿಲ್ಲ ಎಂದು ತಿಳಿದುಬಂದಿದೆ.(ದಿಗ್ವಿಜಯ ನ್ಯೂಸ್​)
ದಿನೇ ದಿನೇ ಏರುತ್ತಿರುವ ಬೆಲೆ: ಈರುಳ್ಳಿ ರಫ್ತಿಗೆ ನಿಷೇಧ ಹೇರಿದ ಕೇಂದ್ರ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಳುತ್ತಾ ಸೊಳ್ಳೆಗಳೊಂದಿಗೆ ರಾತ್ರಿ ಕಳೆದ ರಾಗಿಣಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − two =
Remember me
