ರಾಯಚೂರು:ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಕಾವು ಜೋರಾಗಿದೆ. ಇದಾಗಲೇ ಎಲ್ಲಾ ಪಕ್ಷಗಳವರು ಮತಯಾಚನೆಯಲ್ಲಿ ತೊಡಗಿದ್ದು, ಬೇರೆ ಪಕ್ಷಗಳ ವಿರುದ್ಧ ಸಮರ ಸಾರಿದ್ದಾರೆ.
ಇವೆಲ್ಲವೂ ರಾಜಕೀಯದಲ್ಲಿ ಹೊಸತೇನಲ್ಲ. ಆದರೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ರಾಯಚೂರು ಜಿಲ್ಲೆ ಮಸ್ಕಿಯಲ್ಲಿ ಕೆಪಿಸಿಸಿ ಮಹಿಳಾ ಘಟಕದ‌ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ ಅವರು ನೀಡಿರುವ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಅವರ ಹೇಳಿಕೆ ಚುನಾವಣಾ ನೀತಿ ಸಂಹಿತೆಯ ವಿರುದ್ಧವಾಗಿರುವುದಾಗಿ ಇದೀಗ ಆರೋಪ- ಪ್ರತ್ಯಾರೋಪಗಳು ಶುರುವಾಗಿದೆ.
ಅಷ್ಟಕ್ಕೂ ಪುಷ್ಪಾ ಅವರು ಹೇಳಿರುವುದು ಏನೆಂದರೆ, ಬಿಜೆಪಿಯವರು ಹಣ ಕೊಟ್ಟರೂ ಮಹಿಳೆಯರು ಅದನ್ನು ತೆಗೆದುಕೊಳ್ಳಲು ಮುಂದಾಗಿ. ಯಾವುದೇ ಕಾರಣಕ್ಕೂ ಬೇಡ ಎನ್ನಬೇಡಿ. ಅದು ಅವರಪ್ಪನ ಮನೆಯಿಂದ ತಂದಿರೋದಲ್ಲ. ನಿಮ್ಮ ಹಣ ಲೂಟಿ ಹೊಡೆದು ನಿಮಗೆ ಕೊಡ್ತಿದ್ದಾರೆ. ಬಿಜೆಪಿ ಹಣ ತಗೊಂಡು ಕಾಂಗ್ರೆಸ್​ಗೆ ವೊಟ್ ಹಾಕಿ ಎಂದಿದ್ದಾರೆ!
ಮಹಿಳೆಯರಿಗೆ ಹೆಚ್ಚು ಅವಕಾಶ ಸಿಕ್ಕಿದ್ದು ಕಾಂಗ್ರೆಸ್​ನಲ್ಲಿ ಮಾತ್ರ. ಕಾಂಗ್ರೆಸ್ ಅಭ್ಯರ್ಥಿ ಸರಳ- ಸಜ್ಜನ ವ್ಯಕ್ತಿ, ಬಿಜೆಪಿ ಅಭ್ಯರ್ಥಿ ಕಮೀಷನ್ ಏಜೆಂಟ್ ಎಂದು ಇದೇ ಸಂದರ್ಭದಲ್ಲಿ ಆರೋಪಿಸಿದರು.
ಸಮೋಸಾ ಕೊಡ್ತೇನೆಂದು ಚಿಕ್ಕಪ್ಪ ಕರ್ಕೊಂಡೋದ… ಅಲ್ಲಿ ಅಜ್ಜನೂ ಇದ್ದ… ಭಯಾನಕ ಘಟನೆ ಬಿಚ್ಚಿಟ್ಟ 6 ವರ್ಷದ ಬಾಲಕಿ!

ಕೆರೆಯಲ್ಲಿ ಬಿದ್ದ ಐಫೋನ್​ ವರ್ಷದ ಬಳಿಕ ಸಿಕ್ತು- ಚಾಲ್ತಿಯಲ್ಲಿದ್ದ ಮೊಬೈಲ್​ ನೋಡಿ ದಂಗಾದ ಮಾಲೀಕ!

ಇದು ಕಿಚನ್ ಕಿವಿಮಾತು: ಅಯ್ಯೋ ಹೀಗಾಯ್ತಲ್ಲ ಎನ್ನೋ ಮಾತು ಬಿಡಿ… ಈ ಟಿಪ್ಸ್​ ಅನುಸರಿಸಿ…

ಇದು ಕಿಚನ್ ಕಿವಿಮಾತು: ಅಯ್ಯೋ ಹೀಗಾಯ್ತಲ್ಲ ಎನ್ನೋ ಮಾತು ಬಿಡಿ… ಈ ಟಿಪ್ಸ್​ ಅನುಸರಿಸಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
