ರಾಯಚೂರು: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತು ರಾಯಚೂರಿನಲ್ಲಿ ನಡೆದಿದೆ. ಅಕ್ರಮವಾಗಿ ಮದ್ಯ ಮಾರಾಟ ಮಾಡುವವರನ್ನು ಬಂಧಿಸಿ ಶಿಕ್ಷಿಸಬೇಕಾಗಿರುವ ಅಧಿಕಾರಿಗಳೇ ಮದ್ಯದ ಕಳ್ಳವ್ಯವಹಾರದಲ್ಲಿ ಸಿಕ್ಕಿಬಿದ್ದಿದ್ದಾರೆ.
ರಾಯಚೂರಿನ ರಾಜ್ಯ ಪಾನೀಯ ನಿಗಮ ನಿಯಮಿತ ಗೋದಾಮಿನಿಂದಲೇ ಕಳ್ಳವ್ಯವಹಾರ ನಡೆದಿರುವುದು ಬೆಳಕಿದೆ ಬಂದಿದೆ. ಅಬಕಾರಿ ಇನ್ಸ್‌ಪೆಕ್ಟರ್‌ ಮೋನಪ್ಪ ಹಾಗೂ ಗೋದಾಮಿನ ವ್ಯವಸ್ಥಾಪಕ ಶಿವಪ್ಪರಿಂದ ಅಕ್ರಮ ದಂಧೆ ನಡೆಸಿರುವ ಆರೋಪ ಹೊತ್ತಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಇವರೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಲಾಕ್ ಡೌನ್ ನಿಯಮ ಮೀರಿ ತಡರಾತ್ರಿವರೆಗೆ ಮದ್ಯ ಹಂಚಿಕೆ ಮಾರಾಟ ಮಾಡುತ್ತಿದ್ದ ವಿಷಯ ತಿಳಿಯುತ್ತಿದ್ದಂತೆಯೇ ರಾತ್ರಿ ವೇಳೆ ಗೋದಾಮಿನ ಮೇಲೆ ಅಬಕಾರಿ ಉಪ ಆಯುಕ್ತೆ ಲಕ್ಷ್ಮೀ ಎಂ.ನಾಯಕ ದಾಳಿ ಮಾಡಿದ್ದಾರೆ. ಅಬಕಾರಿ ಇನ್ಸ್‌ಪೆಕ್ಟರ್‌ ಮೊನಪ್ಪನಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಜತೆಗೆ, ಅಕ್ರಮ ಮದ್ಯ ಸಾಗಿಸುತ್ತಿದ್ದ ಎರಡು ವಾಹನ, 5 ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯ ಜಪ್ತಿ ಮಾಡಲಾಗಿದೆ.ರಾಯಚೂರಿನ ಎಪಿಎಂಸಿ ಆವರಣದಲ್ಲಿರುವ ಕೆ.ಎಸ್.ಬಿ.ಸಿಎಲ್ ಡಿಪೋ ಗೋದಾಮಿನಿಂದ ಈ ಕೃತ್ಯ ನಡೆದಿದೆ. ಅಚ್ಚರಿ ಎಂದರೆ, ಕಳೆದ ವರ್ಷ ಲಾಕ್‌ಡೌನ್‌ನಲ್ಲಿಯೂ ಕರ್ತವ್ಯ ಲೋಪವೆಸಗಿ ಅಮಾನತಾಗಿದ್ದ ಅಬಕಾರಿ ನಿರೀಕ್ಷಕ ಮೋನಪ್ಪ, ಕಳ್ಳ ವ್ಯವಹಾರದಲ್ಲಿ ಸಿಕ್ಕಿಬಿದ್ದರೂ ಅಧಿಕಾರದಲ್ಲಿ ಮುಂದುವರಿಯುತ್ತಿರುವುದಾಗಿ ಆರೋಪಿಸಲಾಗಿದೆ.
ರಾಯಚೂರಿನ ರಾಜ್ಯ ಪಾನೀಯ ನಿಗಮ ನಿಯಮಿತ ಗೋದಾಮಿನಿಂದ ಮದ್ಯದ ಅಕ್ರಮ ಮಾರಾಟ ಮಾಡಿರುವ ಅಬಕಾರಿ ಇನ್ಸ್‌ಪೆಕ್ಟರ್‌ ಮೋನಪ್ಪ ಹಾಗೂ ಗೋದಾಮಿನ ವ್ಯವಸ್ಥಾಪಕ ಶಿವಪ್ಪ ಅವರ ಕುರಿತು ಮಾಹಿತಿ ನೀಡುತ್ತಿರುವ ಅಬಕಾರಿ ಉಪ ಆಯುಕ್ತೆ ಲಕ್ಷ್ಮೀ ಎಂ.ನಾಯಕpic.twitter.com/mDTlvX5buz
— Vijayavani (@VVani4U)June 10, 2021

ನಡುರಾತ್ರಿ ಕಟ್ಟಡ ಕುಸಿತ- ಸವಿನಿದ್ದೆಯಲ್ಲಿದ್ದವರ ದುರ್ಮರಣ: ಮಕ್ಕಳು ಸೇರಿದಂತೆ 11 ಮಂದಿ ಸಾವು

ದೇಹ ಪೂರ್ತಿ ತಿರುಗಿಸಿ ರಾಖಿಸಾವಂತ್‌ ವ್ಯಾಯಾಮ: ವಿಡಿಯೋ ಶೇರ್- ಅಲ್ಲೂ ಟ್ರೋಲ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 6 =
Remember me
