ಬೆಂಗಳೂರು:ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರ ಮನೆಯ ಮೇಲೆ ಬೆಳ್ಳಂಬೆಳಗ್ಗೆ ದಾಳಿ ಮಾಡಿ ಸಿಬಿಐ ಶಾಕ್​ ನೀಡಿದ್ದರೆ, ಇಂದು ಸಿಸಿಬಿ ಪೊಲೀಸರು ನಸುಕಿನಲ್ಲಿಯೇ ಮುತ್ತಪ್ಪ ರೈ ಅವರ ಮಗನ ಮನೆಯ ಮೇಲೆ ದಾಳಿ ನಡೆಸಿದ್ದಾರೆ.
ಈಚೆಗಷ್ಟೇ ಮೃತಪಟ್ಟಿರುವ ಮುತ್ತಪ್ಪ ರೈ ಅವರ ಮಗ ಡ್ರಗ್ಸ್ ಜಾಲದ ನಂಟು ಹೊಂದಿದ್ದಾರೆ ಎನ್ನುವ ಗುಮಾನಿಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ರಿಕ್ಕಿ ಮಂಗಳೂರು ಹಾಗೂ ಮುಂಬೈ ಡ್ರಗ್ ಪೆಡ್ಲರ್​​ಗಳ ಜತೆ ಸಂಪರ್ಕ ಹೊಂದಿದ ಶಂಕೆ ಇದೆ.
ಇದನ್ನೂ ಓದಿ:ಡಿ.ಕೆ. ರವಿಯಿಂದ ಡಿಕೆಶಿಗೆ ದುರಾದೃಷ್ಟ ವರ್ಗಾವಣೆ ಎಂದ ಪ್ರಶಾಂತ್​ ಸಂಬರಗಿಗೆ ಕುಸುಮಾ ತಿರುಗೇಟು..!
ರಿಕ್ಕಿ ವಿರುದ್ಧ ಸಂಪೂರ್ಣ ಮಾಹಿತಿ ಕಲೆ ಹಾಕಿರುವ ಸಿಸಿಬಿ ಪೊಲೀಸರು, ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಅವರಿಗೆ ಸೇರಿರುವ ಎರಡು ಮನೆಗಳು ಸೇರಿದಂತೆ ಕೆಲವು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಬಿಡದಿ ಮತ್ತು ಬೆಂಗಳೂರಿನ ವೈಯಾಲಿಕಾವಲ್ ಮನೆ ಸೇರಿದಂತೆ ವಿವಿಧ ಕಡೆಗಳಲ್ಲಿ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಎಸಿಬಿ ವೇಣುಗೋಪಾಲ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಶೋಧನಾ ಕಾರ್ಯ ಮುಂದುವರೆದಿದೆ.
ಪಾಕ್​-ಚೀನಾ ಏಕಕಾಲದಲ್ಲಿ ದಾಳಿ ಮಾಡಿದರೂ ಎದುರಿಸಲು ನಾವು ಸಿದ್ಧ- ಭಾರತೀಯ ಸೇನೆ

ಚುನಾವಣಾಧಿಕಾರಿಯಾಗಿ ತೃತೀಯ ಲಿಂಗಿ: ಇತಿಹಾಸ ಸೃಷ್ಟಿಸಿದ ಬಿಹಾರ

ಮದ್ಯದ ದೊರೆಯ ವಿರುದ್ಧ ಲಂಡನ್​ನಲ್ಲಿ ನಡೀತಿದೆ ರಹಸ್ಯ ಕಾರ್ಯಾಚರಣೆ: ಸುಪ್ರೀಂಗೆ ಕೇಂದ್ರದ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 18 =
Remember me
