ಬೆಳಗಾವಿ:ನಿನ್ನೆಯಿಂದ ರಾಜ್ಯದ ಕೆಲವು ಕಡೆಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಾವೇರಿ, ಕೊಪ್ಪಳ, ಗದಗ, ಬೆಳಗಾವಿ, ಮೈಸೂರು, ತುಮಕೂರು, ಮಂಡ್ಯ, ಚಿತ್ರದುರ್ಗ, ಧಾರವಾಡ ಸೇರಿದಂತೆ ಅನೇಕ ಸ್ಥಳಗಳಲ್ಲಿ ಹಗುರದಿಂದ ಭಾರಿ ಪ್ರಮಾಣದ ಮಳೆಯಾಗುತ್ತಿದೆ.
ಬೆಳಗಾವಿಯಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟಿದ್ದಾನೆ. 20 ವರ್ಷದ ಗುರುನಾಥ ನಾರ್ವೇಕ ಸಿಡಿಲಿಗೆ ಬಲಿಯಾಗಿದ್ದು, ಈ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನಿಡಗಲ್ ಗ್ರಾಮದ ಇಟ್ಟಂಗಿ ಭಟ್ಟಿಯಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಅಸು ಗ್ರಾಮದಿಂದ ಗುರುನಾಥ ಕೆಲಸಕ್ಕಾಗಿ ಕೆಲ ದಿನಗಳ ಹಿಂದೆ ನಿಡಗಲ್​ಗೆ ಆಗಮಿಸಿದ್ದ. ನಿನ್ನೆ ರಾತ್ರಿ ಮಳೆ ಬರುತ್ತಿದ್ದ ಸಮಯದಲ್ಲಿ ಇಟ್ಟಂಗಿ ಭಟ್ಟಿಗೆ ಪ್ಲಾಸ್ಟಿಕ್ ಹೊದಿಕೆ ಹಾಕುತ್ತಿದ್ದ. ಈ ಸಮಯದಲ್ಲಿ ಬಡಿದ ಸಿಡಿಲಿನಿಂದಾಗಿ ಆತ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಮಧ್ಯಾಹ್ನ 3ರ ವೇಳೆಗೆ ಆರಂಭಗೊಂಡ ಮಳೆ ನಾಲ್ಕೈದು ಗಂಟೆಗಳ ಕಾಲ ಆರ್ಭಟಿಸಿದೆ. ಇತ್ತ ಸಿಡಿಲಿಗೆ ಓರ್ವ ಯುವಕ ಬಲಿಯಾದರೆ ಬೆಳಗಾವಿಯಲ್ಲಿಯೇ ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ಹೊತ್ತಿ ಉರಿದ ಬಗ್ಗೆ ವರದಿಯಾಗಿದೆ.
ಟೂಲ್‌ಕಿಟ್‌ ಷಡ್ಯಂತ್ರ ಬಯಲಾಗುತ್ತಿದ್ದಂತೆಯೇ ಕೋರ್ಟ್‌ಗೆ ದಿಶಾ ದೌಡು: ದಾಖಲೆ ಬಹಿರಂಗ ಬೇಡ ಎಂದು ಕೋರಿಕೆ!

VIDEO: ಪ.ಬಂಗಾಳದಲ್ಲಿ ಬಾಂಬ್‌ ದಾಳಿ: ಗಂಭೀರ ಗಾಯಗೊಂಡ ಸಚಿವ- ಸಿಸಿಟಿವಿಯಲ್ಲಿ ಸೆರೆ

ನಡುರಸ್ತೆಯಲ್ಲಿಯೇ ವಕೀಲ ದಂಪತಿಯ ಬರ್ಬರ ಹತ್ಯೆ: ವಿಡಿಯೋದಲ್ಲಿ ಭಯಾನಕ ದೃಶ್ಯ ದಾಖಲು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × four =
Remember me
