ವಿಜಯವಾಣಿ ಸುದ್ದಿಜಾಲ, ಕೊಪ್ಪಳ
ಕೊಪ್ಪಳ ಜಿಲ್ಲಾದ್ಯಂತ ಶನಿವಾರ ರಾತ್ರಿ ಭಾರಿ ಮಳೆ ಸುರಿದಿದ್ದು, ಭಾನುವಾರ ಬೆಳಗ್ಗೆ ತಾಲೂಕಿನ ಶಿವಪುರ ಹಳ್ಳ ದಾಟುವಾಗ ಸೈಕಲ್‌ ಸವಾರನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ಹಳ್ಳ ರಸ್ತೆ ಮೇಲೆ ರಭಸವಾಗಿ ಹರಿಯುತ್ತಿದೆ. ಸೈಕಲ್ ಹೊತ್ತುಕೊಂಡು ದಾಟಲು ಮುಂದಾಗಿದ್ದಾನೆ. ಒಂದೊಂದೆ ಹೆಜ್ಜೆ ಹಾಕುತ್ತಾ ದಾಟುವಾಗ ಎದುರಿನಿಂದ ಮತ್ತಿಬ್ಬರು ಸಹಾಯಕ್ಕೆ ಧಾವಿಸಿದ್ದಾರೆ. ಇನ್ನೇನು ಹಳ್ಳ ದಾಟಿದ ಎನ್ನುವಷ್ಟರಲ್ಲೇ ನೀರಿನ ಸೆಳೆತಕ್ಕೆ ಸವಾರ ಕಾಲು ಜಾರಿ‌ ಬಿದ್ದು ನೀರಿನಲ್ಲಿ‌ ಕೊಚ್ಚಿ ಹೋಗಿದ್ದಾನೆ.
ಇದನ್ನೂ ಓದಿ:ಗಾಳಿಯಲ್ಲಿ ಗುಂಡು ಹಾರಿಸಿ ಅಕ್ರಮ ದನ ಸಾಗಾಟಗಾರರನ್ನು ತಡೆದ ಮೂಡುಬಿದಿರೆ ಪೊಲೀಸರು
ಈಜು ಬರದ ಕಾರಣ ಆತ ಬದುಕುವ ಆಸೆಯನ್ನೇ ಕೈ ಬಿಟ್ಟಿದ್ದರು. ಆದರೂ, ಸಾಹಸ ಮೆರೆದ ಸ್ಥಳದಲ್ಲಿದ್ದವರು ಸ್ವಲ್ಪ‌ದೂರ ಹೋಗಿ ಅಡ್ಡ ಬಂದ ಗಿಡಗಳನ್ನು ಹಿಡಿದುಕೊಳ್ಳುವಂತೆ ಸಲಹೆ ನೀಡಿ ರಕ್ಷಣೆ ಮಾಡಿದ್ದಾರೆ. ಇತ್ತೀಚೆಗೆ ಇದೇ ಹಳ್ಳದಲ್ಲಿ ಬೈಕ್ ಸವಾರನೋರ್ವ ಕೊಚ್ಚಿ ಹೋಗುತ್ತಿದ್ದಾಗ ಹಗ್ಗದ ಸಹಾಯದಿಂದ ಜನರು ರಕ್ಷಿಸಿದ್ದರು.
ಭಾರಿ ಮಖೆಯಿಂದ ಜಿಲ್ಲಾದ್ಯಂತ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಅಲ್ಲಲ್ಲಿ ಜನರು ಅಪಾಯ ಲೆಕ್ಕಿಸದೇ ದಾಟಲು‌ ಮುಂದಾಗಿ ಅಪಾಯ ತಂದೊಡ್ಡಿಕೊಳ್ಳುತ್ತಿರುವುದು ಮುಂದುವರೆಯುತ್ತಿದೆ.
ಮಾರಕ ಇಂಜೆಕ್ಷನ್​ ನೀಡಿ ಮಾಲೀಕನಿಂದ ನಾಯಿಯ ಜೀವಂತ ಸಮಾಧಿ: ನಡೆಯಿತು ಪವಾಡ..!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 1 =
Remember me
