ಬೆಂಗಳೂರು:ಸಿಡಿ ಕೇಸ್‌ನಲ್ಲಿ ಸಿಲುಕಿ ಸಚಿವ ಸ್ಥಾನವನ್ನು ಕಳೆದುಕೊಂಡಿರುವ ರಮೇಶ್‌ ಜಾರಕಿಹೊಳಿ ಅವರಿಂದ ಈಗ ಹೊಸ ಬೆಳವಣಿಗೆ ಕಂಡುಬಂದಿದೆ. ಪುನಃ ಸಚಿವ ಸ್ಥಾನ ಸಿಗದೇ ಇರುವ ಕಾರಣದಿಂದ ಅವರು ರಾಜೀನಾಮೆಗೆ ಮುಂದಾಗಿರುವುದಾಗಿ ಮೂಲಗಳು ಹೇಳಿವೆ.
ರಾಜ್ಯದ ಉಸ್ತುವಾರಿ ಅರುಣ್‌ ಸಿಂಗ್‌ ಅವರು ರಾಜ್ಯಕ್ಕೆ ಬಂದು ಹೋದ ಮೇಲೆ ಮುಂಬೈಗೆ ತೆರಳಿದ್ದ ಜಾರಕಿಹೊಳಿ ಅವರು ಅದಾಗಲೇ ಭಾರಿ ಸುದ್ದಿಮಾಡಿದ್ದರು. ಸಿಡಿ ಪ್ರಕರಣ ಮುಗಿದರೆ ಪುನಃ ಸಚಿವ ಸಂಪುಟ ಸೇರುವ ಅವರ ಕನಸೂ ಸದ್ಯ ಈಡೇರುವಂತೆ ಕಾಣುತ್ತಿಲ್ಲ. ಇದರಿಂದ ಅಸಮಾಧಾನಗೊಂಡಿರುವ ಜಾರಕಿಹೊಳಿ, ಇತ್ತೀಚಿನ ಬೆಳವಣಿಗೆಯಿಂದಾಗಿ ತಮ್ಮ ಕನಸಾಗಿರುವ ಜಲಸಂಪನ್ಮೂಲ ಖಾತೆ ಸಿಗುವುದಿಲ್ಲ ಎಂದು ನಿರ್ಧಾರ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಮ್ಮ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ತಮ್ಮದೇ ಪ್ರಮುಖ ಪಾತ್ರವಿದ್ದರೂ ತಮಗೆ ಹೀಗೆ ಆಗುತ್ತಿದೆ ಎನ್ನುವುದು ಅವರ ಅಸಮಾಧಾನ ಎನ್ನಲಾಗುತ್ತಿದೆ. ರಾಜೀನಾಮೆ ಒಂದು ಬೆದರಿಕೆಯಷ್ಟೇ. ಒತ್ತಡ ತಂತ್ರದ ಮೂಲಕ ಗಮನ ಸೆಳೆಯುವುದು ಅವರ ಉದ್ದೇಶವೆಂದೂ ಚರ್ಚೆಯಾಗುತ್ತಿದೆ. ಒಟ್ಟಿನಲ್ಲಿ ಈ ಬೆಳವಣಿಯಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ ಸದ್ಯ ಇನ್ನೊಂದು ತಲೆನೋವು ಶುರುವಾದಂತಿದೆ.
ಅಪಘಾತದಲ್ಲಿ ಸತ್ತವನ ಡಿಎನ್‌ಎ ಆಯ್ತು ಮ್ಯಾಚ್‌- 10 ವರ್ಷಗಳ ಬಳಿಕ ಪ್ರತ್ಯಕ್ಷನಾದವ ಯಾರು?

ಹುಟ್ಟುತ್ತಲೇ ವೈರಲ್‌ ಆಯ್ತು ಹುಬ್ಬಳ್ಳಿಯ ಒಂದೇ ಕಾಲಿನ ಮಗು: ಆದರೆ ಮುಂದಾದದ್ದು ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + fourteen =
Remember me
