ಬೆಂಗಳೂರು:ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಪಾದಯಾತ್ರೆ ಭಾನುವಾರ ಮೈಸೂರು ತಲುಪಿತ್ತು. ಬಂಡೀಪಾಳ್ಯ ಸಮೀಪ ಆಯೋಜಿಸಿದ್ದ ಸಭೆಯಲ್ಲಿ ರಾಹುಲ್ ಗಾಂಧಿ ಭಾಷಣ ಮಾಡುತ್ತಿದ್ದಾಗಲೇ ಭಾರಿ ಮಳೆ ಬಂದಿದೆ. ಆದರೆ ಅದನ್ನೂ ಲೆಕ್ಕಿಸಿದ ರಾಹುಲ್​ ಗಾಂಧಿ ಭಾಷಣ ಮಾಡಿದ್ದು, ಇದರ ವಿಡಿಯೋ ಭಾರಿ ವೈರಲ್​ ಆಗಿದೆ.
ರಾಹುಲ್​ ಗಾಂಧಿಯವರ ಮಳೆಯ ಭಾಷಣದ ವಿಡಿಯೋವನ್ನು ಕಾಂಗ್ರೆಸ್​ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದು, ಅದಕ್ಕೆ ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗಿದೆ. ರಾಹುಲ್​ ಅಭಿಮಾನಿಗಳು ತಮ್ಮ ನಾಯಕನ ಈ ಕಾರ್ಯವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ.
ಈ ವಿಡಿಯೋಗೆ ಇದೀಗ ಮಾಜಿ ಸಂಸದೆ, ನಟಿ ರಮ್ಯಾ ಕೂಡ ಹಂಚಿಕೊಂಡಿದ್ದು ತಾವೂ ಕಮೆಂಟ್​ ಮಾಡಿದ್ದಾರೆ. ಇಲ್ಲಿ ರಾಹುಲ್ ಗಾಂಧಿ ಮಳೆಯಲ್ಲಿ ಭಾಷಣ ಮಾಡುತ್ತಿರುವುದು ಸುದ್ದಿಯೇ ಅಲ್ಲ, ಬದಲಿಗೆ ಅಂಥ ಭಾರಿ ಮಳೆಯಲ್ಲಿಯೂ ಭಾಷಣ ಕೇಳಲು ಸಾಕಷ್ಟು ಮಂದಿ ನೆರೆದಿರುವುದೇ ವಿಶೇಷ. ಜನ ನೆರೆದಿರುವುದೇ ಎಲ್ಲವನ್ನೂ ನಿಮಗೆ ತಿಳಿಸುತ್ತದೆ. ಅಂದರೆ ರಾಹುಲ್ ಗಾಂಧಿ ಭಾಷಣ ಕೇಳಲು ಜನ ಕಿಕ್ಕಿರಿದು ನಿಂತಿರುವುದು ಗಮನ ಸೆಳೆದಿದೆ ಎಂದು ರಮ್ಯಾ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ಭಾಷಣದಲ್ಲಿ ರಾಹುಲ್​ ಗಾಂಧಿಯವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಮಳೆಯಲ್ಲಿಯೇ ವಾಗ್ದಾಳಿ ನಡೆಸಿದರು. ಯಾವ ಮಳೆಯೂ ನನ್ನ ಭಾಷಣವನ್ನು ತಡೆಯಲು ಸಾಧ್ಯವಿಲ್ಲ ಎಂದೂ ಹೇಳಿದರು.(ಏಜೆನ್ಸೀಸ್​)
Rahul gandhi giving a speech in pouring rain is not the story – that the crowd stayed back despite the rain to listen to him- now THAT is telling.https://t.co/xld0TvHDmT— Ramya/Divya Spandana (@divyaspandana)October 2, 2022
Rahul gandhi giving a speech in pouring rain is not the story – that the crowd stayed back despite the rain to listen to him- now THAT is telling.https://t.co/xld0TvHDmT
ಸಿಎಫ್​ಐ ಕಚೇರಿ ಮೇಲೆ ದಾಳಿ: ಯುವಕರ ಬ್ರೇನ್​ವಾಷ್​ಗೆ ‘ನರಮೇಧ’- ಪೊಲೀಸರಿಗೆ ಸಿಕ್ಕಿತು ಬೆಚ್ಚಿಬೀಳಿಸೋ ಪತ್ರ!
ದುರ್ಗಾದೇವಿಯ ಕಾಲಿನಡಿ ಮಹಿಷಾಸುರನ ಬದಲು ಗಾಂಧಿ? ದೀದಿ ನಾಡಲ್ಲಿ ಬಿಸಿಯೇರಿದ ನವರಾತ್ರಿ- ಹೀಗಿದೆ ಸಮರ್ಥನೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:nine − seven =
Remember me
