ವಿಜಯಪುರ:ಬಿಜೆಪಿ ಜಿಲ್ಲಾಧ್ಯಕ್ಷರ ವರ್ತನೆಗೆ ಬೇಸತ್ತು ಸಹ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಮುಖಂಡ ರವೀಂದ್ರ ಲೋಣಿ ತಿಳಿಸಿದರು.
ಬಿಜೆಪಿಯ ಸಹ ವಕ್ತಾರನಾಗಿ ಕಳೆದ ಒಂದು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಆದರೆ, ಜಿಲ್ಲಾಧ್ಯಕ್ಷರ ವರ್ತನೆಯಿಂದಾಗಿ ‘ಕೊಟ್ಟ ಕುದರೆಯನ್ನು ಏರಲಾಗದವನು ವೀರನೂ ಅಲ್ಲ ಶೂರನೂ ಅಲ್ಲ’ ಎಂಬಂತಾಗಿದೆ ನನ್ನ ಸ್ಥಿತಿ. ಹೀಗಾಗಿ ತಕ್ಷಣವೇ ಜಿಲ್ಲಾಧ್ಯಕ್ಷಿಗೆ ರಾಜೀನಾಮೆ ಸಲ್ಲಿಸುವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಅಳಲು ತೋಡಿಕೊಂಡರು.
ಬಿಜೆಪಿಯ ಸಹ ವಕ್ತಾರನಾಗಿ ಅನೇಕ ಜನಪರ ಕೆಲಸ ಕಾರ್ಯ ಮಾಡಿದ್ದೇನೆ. ಆದರೆ, ಯಾವುದಕ್ಕೂ ಸ್ವತಂತ್ರ ತೀರ್ಮಾನ ಕೈಗೊಳ್ಳಲು ಅವಕಾಶ ಸಿಗುತ್ತಿಲ್ಲವೆಂಬ ಬೇಸರವಿದೆ ಎಂದರು.
ಬಿಜೆಪಿ ರಾಜ್ಯ ಮಟ್ಟದ ಮಾಧ್ಯಮ ಕಾರ್ಯಾಗಾರದಲ್ಲಿ ಪಕ್ಷದ ಬಲವರ್ಧನೆಗೆ ಸಾಕಷ್ಟು ಸಮಾಲೋಚನೆ ನಡೆದವು. ವಕ್ತಾರರು ಮಾಧ್ಯಮದ ಮುಖವಾಣಿಯಾಗಿ ಹೇಗೆ ಕಾರ್ಯ ನಿರ್ವಹಿಸಬೇಕು? ಪಕ್ಷದ ತತ್ವ ಸಿದ್ಧಾಂತಗಳ ನ್ನು ಹೇಗೆ ಪ್ರಚುರ ಪಡಿಸಬೇಕೆಂದು? ಕಾರ್ಯಾಗಾರದಲ್ಲಿ ತಿಳಿಸಿಕೊಡಲಾಯಿತು. ರಾಷ್ಟ್ರೀಯ ವಕ್ತಾರರು ಸಹ ಆ ಕಾರ್ಯಾಗಾರ ದಲ್ಲಿ ಪಾಲ್ಗೊಂಡಿದ್ದರು. ಅಲ್ನ್ ವಿಚಾರಗಳನ್ನು ಜಿಲ್ಲೆಯಲ್ಲೂ ಹಂಚಬೇಕೆಂದು ತೀರ್ಮಾನಿಸಿ ಇಲ್ಲಿ ನಾಯಕರೊಂದಿಗೆ ಮಾತನಾಡಿದಾಗ ಆರಂಭದಲ್ಲಿ ಸಮ್ಮತಿಸಿದ್ದರು. ಪಕ್ಷದ ಜಿಲ್ಲಾ ಅಧ್ಯಕ್ಷರಲ್ಲೂ ವಿನಂತಿಸಿದ್ದೆ. ಆದರೆ, ಅವರು ಸಮರ್ಪಕವಾಗಿ ಸ್ಪಂದಿಸಲಿಲ್ಲ. ಆದರೂ ಒಂದೆರೆಡು ಸುದ್ದಿಗೋಷ್ಠಿ ಮಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆ ತಿಳಿಸುವ ಪ್ರಯತ್ನ ಮಾಡಿದೆ. ತದನಂತರದಲ್ಲಿ ಆ ಪ್ರಯತ್ನ ಆಗಲೇ ಇಲ್ಲ. ಅವಕಾಶವೂ ಸಿಗಲಿಲ್ಲ. ಜಿಲ್ಲೆಯ ಶಾಸಕರು ಅನೇಕ ಅಭಿವೃದ್ಧಿ ಪರ ಕಾರ್ಯ ಮಾಡಿದರೂ ಅದನ್ನು ಪ್ರಚುರ ಪಡಿಸುವ ಪ್ರಯತ್ನ ನಡೆದಿಲ್ಲ ಎಂದು ಲೋಣಿ ವಿಶಾದ ವ್ಯಕ್ತಪಡಿಸಿದರು.
ಪಕ್ಷದ ಚಟುವಟಿಕೆಗಳನ್ನು ಜನರಿಗೆ ತಲುಪಿಸಲು ಆಗಿಲ್ಲ ಎಂಬುದು ನೋವಿನ ಸಂಗತಿ. ವಿರೋಧ ಪಕ್ಷದ ನಾಯಕರು ಟೀಕೆ ಟಿಪ್ಪಣಿ ಮಾಡಿದರೂ ಅದಕ್ಕೆ ಸಮರ್ಪಕ ಉತ್ತರ ಕೊಡಲು ಆಗುತ್ತಿಲ್ಲ. ಪಕ್ಷದ ಪ್ರಮುಖರಾಗಿ ದಿಟ್ಟ ಉತ್ತರ ನೀಡುವ ಕೆಲಸ ಆಗಿಲ್ಲ. ಅದನ್ನು ಪಕ್ಷದ ಕಾರ್ಯಕರ್ತರು ಸಾಮಾಜಿಕ ಜಾಲತಾಣದ ಮೂಲಕ ಮಾಡುತ್ತಿದ್ದಾರೆ. ಇದನ್ನು ಪಕ್ಷದ ಮುಖಂಡರ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ. ಹೀಗಾಗಿ ನಾನು ಅತ್ಯಂತ ನೋವಿನಿಂದ ರಾಜೀನಾಮೆ ನೀಡಲು ನಿರ್ಧರಿಸಿದ್ದಾಗಿ ಲೋಣಿ ತಿಳಿಸಿದರು.
ಮೊಬೈಲ್‌ ರಿಪೇರಿ ಮಾಡುತ್ತಿದ್ದ ಮಗನೀಗ ಶಾಸಕ: ಶಾಲೆಯಲ್ಲಿ ಕಸಗುಡಿಸೋದನ್ನು ಮುಂದುವರೆಸಿದ ಅಮ್ಮ

ರಸ್ತೆ ಗುಂಡಿಗೆ ಇನ್ನೆಷ್ಟು ಬಲಿ ಬೇಕು? ಕರೆದರೂ ಬಾರದ ಆಂಬುಲೆನ್ಸ್‌- ಏಕೈಕ ಪುತ್ರ ಬಾರದ ಲೋಕಕ್ಕೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
