ಬೆಂಗಳೂರು:ಜೂನ್‌ನಲ್ಲಿ ಮಂಕಾಗಿದ್ದ ಮುಂಗಾರು ಮಳೆ ಜುಲೈ ಮೊದಲ ವಾರದಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿದಿದೆ.
ರಾಜ್ಯಾದ್ಯಂತ ಜು.1ರಿಂದ ಜು.7ರವರೆಗೆ ವಾಡಿಕೆಯಂತೆ 58 ಮಿಮೀ ಮಳೆ ಆಗಬೇಕಿತ್ತು. ಆದರೆ, 112 ಮಿಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.94 ಹೆಚ್ಚು ಮಳೆಯಾಗಿದೆ. ಕಳೆದ ತಿಂಗಳು ಮಳೆ ಕೊರತೆ ಕಾಡುತ್ತಿದ್ದ ಕರಾವಳಿಯಲ್ಲಿ 255 ಮಿಮೀ ಮಳೆ ಬದಲಾಗಿ 523 ಮಿಮೀ ಮಳೆಯಾಗಿದ್ದು, ಶೇ.100 ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಅದೇರೀತಿ, ಮಲೆನಾಡು ಜಿಲ್ಲೆಗಳಲ್ಲಿ ವಾಡಿಕೆಯಂತೆ 137 ಮಿಮೀ ಮಳೆಯಾಗಬೇಕಿತ್ತು. ಆದರೆ, 260 ಮಿಮೀ ಮಳೆಯಾಗುವ ಮೂಲಕ ಶೇ.89 ಹೆಚ್ಚು ಮಳೆ ಬಿದ್ದಿದೆ. ದಕ್ಷಿಣ ಒಳನಾಡಿನಲ್ಲಿ ವಾಡಿಕೆಯಂತೆ 14 ಮಿಮೀ ಮಳೆ ಬದಲಾಗಿ 28 ಮಿಮೀ ಮಳೆಯಾಗಿದ್ದು, ಶೇ.101 ಹಾಗೂ ಉತ್ತರ ಒಳನಾಡಿನಲ್ಲಿ 21 ಮಿಮೀ ಮಳೆ ಬದಲಾಗಿ 37 ಮಿಮೀ ಮಳೆ ಸುರಿದಿದ್ದು, ಶೇ.76 ಹೆಚ್ಚುವರಿ ಮಳೆಯಾಗಿದೆ.
ಕರಾವಳಿಯಲ್ಲಿಂದು ರೆಡ್ ಅಲರ್ಟ್:ಮೂರ್ನಾಲ್ಕು ದಿನಗಳಿಂದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಜು.8ರಂದು ಅತಿ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಈ ಅವಧಿಯಲ್ಲಿ 204 ಮಿಮೀ ಮಳೆ ಬೀಳುವ ಸಂಭವ ಇದೆ. ಅಲ್ಲದೆ, ಈ ಭಾಗಗಳಲ್ಲಿ ಜು 9,10ರಂದು ಆರೆಂಜ್ ಅಲರ್ಟ್ ನೀಡಲಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನದಲ್ಲಿ ಮುಂದಿನ 24 ಗಂಟೆ ಆರೆಂಜ್ ಅಲರ್ಟ್ ಇದ್ದರೆ, ಜು.9ರಿಂದ ಮುಂದಿನ 3 ದಿನ ಯೆಲ್ಲೋ ಅಲರ್ಟ್ ಇರಲಿದೆ. ಬೆಳಗಾವಿ, ಕಲಬುರಗಿ ಮತ್ತು ಬೀದರ್‌ನಲ್ಲಿ ಮುಂದಿನ 72 ಗಂಟೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಒಂದೇ ದಿನ 25 ಸೆಂ.ಮೀ.ಮಳೆ: ಗುರುವಾರ ಉತ್ತರ ಕನ್ನಡದ ಕ್ಯಾಸಲ್ ರಾಕ್‌ನಲ್ಲಿ ಬರೋಬ್ಬರಿ 25 ಸೆಂಮೀ. ದಾಖಲೆ ಮಳೆ ಬಿದ್ದಿದೆ. ದಕ್ಷಿಣ ಕನ್ನಡ ಮೂಲ್ಕಿ ಮತ್ತು ಬೆಳ್ತಂಗಡಿ ತಲಾ 20 ಸೆಂಮೀ., ಉಡುಪಿಯ ಕೋಟಾ, ಸಿದ್ಧಾಪುರ, ಅಂಕೋಲಾದ ತಲಾ 15 ಸೆಂಮೀ ಮಳೆ ಸುರಿದಿದೆ. ಚಿಕ್ಕಮಗಳೂರಿನಲ್ಲಿ ಸರಾಸರಿ 15 ಸೆಂಮೀ ಮಳೆ ಬಿದ್ದರೆ ಬೆಳಗಾವಿಯಲ್ಲಿ 10 ಸೆಂಮೀ ಮಳೆ ಸುರಿದಿದೆ. ಅಲ್ಲದೆ, ಇತರೆ ಪ್ರದೇಶಗಳಲ್ಲಿ ಭರ್ಜರಿ ಮಳೆಯಾಗಿದೆ.
ಪ್ರಿಯಕರನ ಒಲಿಸಿಕೊಳ್ಳಲು ಆತನ ಪತ್ನಿ, ತಾಯಿಯನ್ನು ಜೀವಂತ ಸುಟ್ಟು ಹಾಕಿದ ಎರಡು ಮಕ್ಕಳ ತಾಯಿ!

ರೆಡಿ ಆಗ್ತಿದೆ ‘ಮಹಾ’ ಸಂಪುಟ: ಯಾರಿಗೆ ಒಲಿಯಲಿದೆ ಸಚಿವ ಸ್ಥಾನ? ಸದ್ಯದ ಲೆಕ್ಕಾಚಾರ 25-13!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 19 =
Remember me
