ಬೆಂಗಳೂರು:ಮಾಜಿ ಸಚಿವ ರಮೇಶ್​ ಜಾರಕೀಹೊಳಿ ಅವರ ಸಿಡಿ ಪ್ರಕರಣ ಸ್ವಲ್ಪ ತಣ್ಣಗಾಗುತ್ತಿರುವ ಬೆನ್ನಲ್ಲೇ ಇದೀಗ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಸಿಡಿ ಭೀತಿ ಶುರುವಾಗಿದೆ.
ಆದ್ದರಿಂದ ತಮ್ಮ ವಿರುದ್ಧ ಯಾವುದಾದರೂ ಸಿಡಿಗಳು ಇದ್ದರೆ ಅದು ಎಲ್ಲಿಯೂ ಪ್ರಸಾರವಾಗಬಾರದು ಎಂದು ಕೋರಿ ಬೆಂಗಳೂರಿನ ಸಿವಿಲ್​ ಕೋರ್ಟ್​ ಮೊರೆ ಹೋಗಿದ್ದಾರೆ. ಇಂದು ಇದರ ವಿಚಾರಣೆ ನಡೆಸಿರುವ ಕೋರ್ಟ್​, ಸಿಡಿಯನ್ನು ಎಲ್ಲಿಯೂ ಪ್ರಸಾರ ಮಾಡಬಾರದು ಎಂದು ತಡೆಯಾಜ್ಞೆ ನೀಡಿದೆ.
ಸಿಡಿಯ ಕುರಿತಂತೆ ಮಾತನಾಡಿರುವ ರೇಣುಕಾಚಾರ್ಯ ಅವರು, ಈಗೀಗ ತಂತ್ರಜ್ಞಾನ ಹೇಗಿದೆ ಎಂದರೆ, ಯಾರದ್ದೋ ತಲೆ, ಯಾರದ್ದೋ ಮುಖ, ಯಾರದ್ದೋ ಕತ್ತು ಇನ್ನಾರದ್ದೋ ಷರ್ಟು, ಪ್ಯಾಂಟು ಹಾಕಿ ಸಿಡಿ ಮಾಡಿ ಪ್ರಸಾರ ಮಾಡುತ್ತಾರೆ. ಆದರೆ ನಾನು ಹೇಗೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ದುರುದ್ದೇಶದಿಂದ ಯಾರಾದರೂ ಸಿಡಿ ತಯಾರು ಮಾಡಿರುವ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ಅರ್ಜಿ ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸಂಕ್ರಾಂತಿ ಒಳಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಅವಘಡ: ಕೋಡಿಮಠ ಸ್ವಾಮೀಜಿ ಭವಿಷ್ಯ

ನನ್ನ ಪ್ರಿಯಕರನ ಎಲ್ಲಾದರೂ ಕಂಡೀರಾ? ಗರ್ಭದಲ್ಲಿ ಮಗುಹೊತ್ತು ಸಾವಿರ ಕಿ.ಮೀ. ಬಂದಳೀ ಯುವತಿ!

ಸಚಿವಾಕಾಂಕ್ಷಿ ಶಾಸಕನಿಂದ ರೈತನಿಗೆ 25 ಲಕ್ಷ ರೂ. ಮೋಸ? ಭತ್ತ ಖರೀದಿ ವಿಚಾರದಲ್ಲಿ ದೋಖಾ

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:1 × 2 =
Remember me
