ಬೆಂಗಳೂರು:ಬಿಗಿ ಲಾಕ್‌ಡೌನ್‌ ನಡುವೆಯೂ ಅನಗತ್ಯವಾಗಿ ರಸ್ತೆಗೆ ಬರುವವರ ಮೇಲೆ ರಾಜ್ಯಾದ್ಯಂತ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ವಾಹನಗಳನ್ನು ಸೀಜ್ ಮಾಡುವುದು ಸಾಮಾನ್ಯವಾಗಿದೆ.
ಕೆಲವು ಕಡೆಗಳಲ್ಲಿ ದಂಡಂ ದಶಗುಣಂ ಎನ್ನುವಂತೆ ಹೊಡೆದು, ಬಡಿದು, ಲಾಠಿ ಪ್ರಹಾರ ಮಾಡಿರುವ ಘಟನೆಗಳು ನಡೆದಿವೆ. ಕೆಲವು ಕಡೆಗಳಲ್ಲಿ ಬಸ್ಕಿ ಹೊಡೆಸಿಯೂ ಆಗಿದೆ. ಆದರೆ ಕೆಲವು ವಿಕೋಪಕ್ಕೆ ಹೋದ ಕಾರಣ ಪೊಲೀಸ್‌ ಇಲಾಖೆಯ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದ ಬೆನ್ನಲ್ಲೇ ಲಾಠಿ ಪ್ರಯೋಗ ಮಾಡದಂತೆ ಸರ್ಕಾರ ಸೂಚನೆಯನ್ನು ಕೊಟ್ಟಿದೆ.
ಅದೇ ಕಾರಣಕ್ಕೆ ಇದೀಗ ಬೆಂಗಳೂರಿನ ಪೊಲೀಸರು ಹೊಸ ಯೋಜನೆ ರೂಪಿಸಿದ್ದಾರೆ. ಹೊಡೆಯಲ್ಲ, ಬಡಿಯಲ್ಲ, ಲಾಠಿ ಪ್ರಯೋಗವೂ ಇಲ್ಲ. ಬದಲಿಗೆ ನಿಯಮ ಉಲ್ಲಂಘನೆ ಮಾಡಿದವರಿಗೆ ಗುಲಾಬಿ ಹೂವನ್ನು ನೀಡುತ್ತಿರುವ ಪೊಲೀಸರು ವಾಹನಗಳನ್ನು ಸೀಜ್‌ ಮಾಡುತ್ತಿದ್ದಾರೆ!
ಬೆಂಗಳೂರಿನ ಪೀಣ್ಯ ಪೊಲೀಸರಿಂದ ಇಂಥದ್ದೊಂದು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ನೆಲಗದರನಹಳ್ಳಿ ಸರ್ಕಲ್ ಬಳಿ ಕರೋನಾ ರೂಲ್ಸ್ ಬ್ರೇಕ್ ಮಾಡಿದವರಿಗೆ ಗುಲಾಬಿ ಹೂ ನೀಡಿ ಅವರ ಬೈಕ್ ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ.
ಎಂಟು ತಿಂಗಳ ಮಗು ಇದೆ, ಪ್ಲೀಸ್‌ ಬಿಡಿ ಸರ್‌ ಎಂದ್ರೂ ಕೇಳಲಿಲ್ಲ… ಕಾಲು ಹಿಡಿದರೂ ಜಗ್ಗಲಿಲ್ಲ…!

ಆಗಸದಲ್ಲಿ ನಡೀತಿದೆ ಕೌತುಕ: ಸೂರ್ಯನ ಸುತ್ತಲೂ ಕಾಮನಬಿಲ್ಲಿನ ಉಂಗುರ

ನೆಲಕ್ಕುರುಳಿದ ಕೇಬಲ್‌ ಕಾರ್‌: 14 ಮಂದಿ ಸಾವು- ಹಲವರ ಸ್ಥಿತಿ ಚಿಂತಾಜನಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
