ಹುಬ್ಬಳ್ಳಿ:ನಿನ್ನೆ ಸಂಜೆ ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ ಗುಂಡಿನ ಸುರಿಮಳೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಹುಬ್ಬಳ್ಳಿಯ ರೌಡಿ ಷೀಟರ್‌ ಫ್ರೋಟ್ ಇರ್ಫಾನ್‍ (52) ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಮೂಲತಃ ಉತ್ತರಕನ್ನಡ ಜಿಲ್ಲೆಯ ಇರ್ಫಾನ್ ಹೊಟ್ಟೆಪಾಡಿಗಾಗಿ ಧಾರವಾಡಕ್ಕೆ ಬಂದು ಅಲ್ಲಿಯೇ ನೆಲೆಯೂರಿ ತನ್ನ ಅಪರಾಧ ಜಗತ್ತನ್ನು ವಿಸ್ತಾರ ಮಾಡಿಕೊಮಡಿದು ಡಾನ್ ಆಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಮಗನ ಮದುವೆ ಮುಗಿಸಿ ಅತಿಥಿಗಳನ್ನು ಕಳುಹಿಸಲು ರಸ್ತೆ ಬದಿಯಲ್ಲಿ ಬಂದು ನಿಂತಿದ್ದ ವೇಳೆ ಬೈಕ್‌ನಲ್ಲಿ ಬಂದ ಮೂವರು ಗುಂಡಿನ ಮಳೆಗರೆದಿದ್ದರು. ಇರ್ಫಾನ್ ಇಂದು ತಮ್ಮ ಮಗನ ಮದುವೆ ನಂತರ ಕಲ್ಯಾಣ ಮಂಟಪದ ಹೊರಗೆ ಬೀಗರಿಗೆ ಬೀಳ್ಕೊಡುಗೆ ನೀಡುತ್ತಿದ್ದ. ಈ ವೇಳೆ ಗುಂಡಿನ ದಾಳಿ ನಡೆದಿತ್ತು.
ಇದನ್ನೂ ಓದಿ:ಶಬನಂ ಡೆವಲಪರ್ಸ್ ಮೇಲೆ ಶೂಟೌಟ್​: ಭೂಗತ ಪಾತಕಿ ರವಿ ಪೂಜಾರಿ ಸಹಚರ ಅರೆಸ್ಟ್
ಜನರು ಓಡಾಟ ನಡೆಸುತ್ತಿರುವಾಗಲೇ ಸಿನಿಮೀಯ ರೀತಿಯಲ್ಲಿ ಬೈಕ್‌ನಲ್ಲಿ ಬಂದು ಅನಾಯಾಸವಾಗಿ ಗುಂಡು ಹಾರಿಸಿ ನಾಪತ್ತೆಯಾಗಿದ್ದು. ಈ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
ಧಾರವಾಡದ ಫ್ರೋಟ್ ಇರ್ಫಾನ್ ನಾಲ್ಕು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿದ್ದ. ಈ ಹಿನ್ನೆಲೆಯಲ್ಲಿ ರೌಡಿ ಷೀಟರ್‌ ಪಟ್ಟಿಯಲ್ಲಿ ಈತನ ಹೆಸರು ಇದೆ. ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಇವರನ್ನು ಪೊಲೀಸ್ ಆಯುಕ್ತ ಆರ್.ದಿಲೀಪ್​​​​ ಧಾರವಾಡದಿಂದ ಗಡಿಪಾರು ಮಾಡಿದ್ದರು.
ಈ ಗುಂಡಿನ ದಾಳಿಗೆ ಹಳೇ ವೈಷಮ್ಯವೇ ಕಾರಣ ಎನ್ನಲಾಗುತ್ತಿದೆ. ಮೂರು ಗುಂಡು ಇರ್ಫಾನ್‍ಗೆ ತಗುಲಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಕಲೆ ಹಾಕಿ, ಓಡಿ ಹೋಗಿರುವವರ ಮತ್ತೂ ಬಳಕೆಯಾಗಿರುವ ದ್ವಿಚಕ್ರ ವಾಹನಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ ಪೊಲೀಸರು.
ಆ.9ರಂದು ದೇಶಾದ್ಯಂತ ಮತ್ತೊಮ್ಮೆ ‘ಕ್ವಿಟ್‌ ಇಂಡಿಯಾ’ ಚಳವಳಿ- ಏಕೆ ಗೊತ್ತಾ?

ಸ್ಮಗ್ಲಿಂಗ್‌ ರಾಣಿಗೂ ಕೇರಳ ಸಿಎಂಗೂ ಇದೆ ಲಿಂಕ್‌: ತನಿಖೆಯಿಂದ ಬಯಲಾಯ್ತು ಸತ್ಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 5 =
Remember me
