ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರ ನೇತೃತ್ವದಲ್ಲಿ ಇಂದು ಸಚಿವ ಸಂಪುಟದ ಸಭೆ ನಡೆದು ಅದರಲ್ಲಿ ಹಲವಾರು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಈ ಬಗೆಗಿನ ವಿವರ ಇಲ್ಲಿದೆ ನೋಡಿ:
– ಕರ್ನಾಟಕ ರಾಜ್ತ ಹಣಕಾಸು ಸಂಸ್ಥೆಯಿಂದ ಸಾಲ ಪಡೆದು ಕಟ್ ಬಾಕಿದಾರರಾದ 1,500 ಜನರಿಗೆ ವಿಶೇಷ ವಿನಾಯಿತಿ ಯೋಜನೆ ಅನ್ವಯಿಸುವುದಕ್ಕೆ ಅಸ್ತು
– ಗೋಹತ್ಯೆ ನಿಷೇಧ ಕಾಯ್ದೆ ಜಾರಿಗಾಗಿ ಎಲ್ಲ ಜಿಲ್ಲೆಗಳಲ್ಲಿ ಗೋಶಾಲೆಗಳ ಸ್ಥಾಪನೆ, ಅಂದಾಜಿಸಿದ ವೆಚ್ಚದ ಪ್ರಕಾರ ಮೊದಲ ಹಂತದಲ್ಲಿ 15 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ
– ಗದಗ ಪಶು ಸಂಗೋಪನೆ ಕಾಲೇಜಿನದ ಮೂರನೇ ಹಂತದ‌ 30 ಕೋಟಿ ರೂ ಅಂದಾಜು ವೆಚ್ಚದ ಕಾಮಗಾರಿಗಳಿಗೆ ಆಡಳಿತಾತ್ಮಕ ಒಪ್ಪಿಗೆ
– ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆಬ್ರವರಿ 9 ರಿಂದ 11ರವರೆಗೆ ಇನ್ವೆಸ್ಟ್ ಕರ್ನಾಟಕ-2022; ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜನೆಗೆ ಅಸ್ತು
– ರಾಜ್ಯದಲ್ಲಿರುವ ಆಮ್ಲಜನಕ ಉತ್ಪಾದನೆ ಹಾಗೂ ಅಸೋಸಿಯೇಟ್ ಎಂಟರ್ ಪ್ರೈಸಸ್ ಗೆ ವಿಶೇಷ ಪ್ರೋತ್ಸಾಹ ನೀಡುವ ಯೋಜನೆಗೆ ಸಮ್ಮತಿ
– ಜಿಲ್ಲಾ, ತಾಲೂಕು ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಡಿಸೆಂಬರ್ ಅಂತ್ಯದ ವರೆಗೆ ಮುಂದೂಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ
– ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆಗೆ ಸಮ್ಮತಿ
– ದಾಸನಪುರ ಉಪ ಮಾರುಕಟ್ಟೆ ಪ್ರಾಂಗಣದ ‘ಇ’ ಬ್ಲಾಕ್ ನಲ್ಲಿರುವ ಮಳಿಗೆ/ಉಗ್ರಾಣಗಳನ್ನು ಗುತ್ತಿಗೆ ಕಮ್ ಮಾರಾಟಕ್ಕೆ ನೀಡಲು ಪ್ರಸ್ತಾವಿತ ಮೌಲ್ಯ ಪರಿಷ್ಕರಣೆ
– ರಾಜ್ಯದ ಉದ್ಯೋಗಾಧಾರಿತ ವ್ಯಾಸಂಗ ( ಜೆಒಸಿ) ಪಿಯುಸಿಗೆ ತತ್ಸಮಾನವೆಂದು ಪರಿಗಣನೆ
– ಸನ್ನಡತೆಯ ಆಧಾರದಲ್ಲಿ 139 ಜೀವಾವಧಿ ಸಜಾ ಕೈದಿಗಳ ಅವಧಿಪೂರ್ವ ಬಿಡುಗಡೆ ಮಾಡಲು ಒಪ್ಪಿಗೆ ಕೋರಿ ರಾಜ್ಯಪಾಲರಿಗೆ ಶಿಫಾರಸು.
– ರಾಯಚೂರು ಜಿಲ್ಲೆ ದೇವದುರ್ಗದ ಸರ್ಕಾರಿ‌ ಇಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಅಂದಾಜಿಸಿದ‌ ವೆಚ್ಚ 58 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಒಪ್ಪಿಗೆ
– 2019ರ ಆಗಸ್ಟ್-ಸೆಪ್ಟಂಬರ್ ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರಿಗೆ ಮನೆಗಳ ಪುನರ್ ನಿರ್ಮಾಣ, ರಿಪೇರಿ ಹಾಗೂ ಮನೆ ಬಾಡಿಗೆ ಪಾವತಿಸಲು ಹೊರಡಿಸಿದ ಐದು ಆದೇಶಗಳಿಗೆಘಟನೋತ್ತರ ಮಂಜೂರು
– ಕರ್ನಾಟಕ ಕಂದಾಯ ಉಪ ಶಾಖೆ ಸೇವೆಗಳು (ನೇಮಕ) ( ತಿದ್ದುಪಡಿ) ನಿಯಮಗಳು-2021ಕ್ಜೆ ಒಪ್ಪಿಗೆ
– ಬೆಳಗಾವಿ ಹಾಗೂ ಮಂಗಳೂರಿನಲ್ಲಿ ಒಟ್ಟು ‌31.66 ಕೋಟಿ ರೂ ವೆಚ್ಚದಲ್ಲಿ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯ ಕಟ್ಟಡಗಳ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ
– ಬಳ್ಳಾರಿ ಜಿಲ್ಲೆ ಸಿರುಗುಪ್ಪ ನಗರಕ್ಕೆ ಕುಡಿಯುವ ನೀರು ಪೂರೈಕೆಗಾಗಿ 45.46 ಕೋಟಿ ರೂ ವೆಚ್ಚದಲ್ಲಿ 2,500 ದಶಲಕ್ಷ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಗಾರ ನಿರ್ಮಾಣ,ತುಂಗಭದ್ರಾ ಕೆಳಮಟ್ಟದ ಬಾಗೇವಾಡಿ ವಿತರಣಾ ಕಾಲುವೆಯಿಂದ ಈ ಜಲಾಗಾರಕ್ಕೆ ನೀರು ಒದಗಿಸಲು ಆಡಳಿತಾತ್ಮಕ ಅನುಮೋದನೆ
– ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮೆದ್ಲೇರಿ, ರಾಹುತನ ಕೆರೆ ಹಾಗೂ ಇತರ 18 ಕೆರೆಗಳನ್ನು ಭರ್ತಿ ಮಾಡುವ‌ 206 ಕೋಟಿ ರೂ ವೆಚ್ಚದ ವಿಸ್ತೃತ ಯೋಜನಾ ವರದಿ ಸ್ಥಿರೀಕರಣ
– ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ದೇವಿಘಾಟ್ ಸಮೀಪದ ತುಂಗಭದ್ರಾ ನದಿಯಿಂದ ಮುಕ್ಕುಂಪಿ ಹಾಗೂ ಇತರ ಐದು ಕೆರೆಗಳನ್ನು ತುಂಬುವ 93 ಕೋಟಿ ರೂ ವೆಚ್ಚದ ವಿಸ್ತೃತ ಯೋಜನಾ ವರದಿ ಸ್ಥಿರೀಕರಣ.
– ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಹಾಗೂ 1,100 ಹೆಕ್ಟೇರ್ ಪ್ರದೇಶಕ್ಕೆ ನೀರುಣ್ಣಿಸಲು ಉದ್ದೇಶಿತ‌ 240‌ ಕೋಟಿ ರೂ ವೆಚ್ಚದಲ್ಲಿ ನೇತ್ರಾವತಿ ನದಿಗೆ ಬ್ರಿಡ್ಜ್‌ ಕಮ್ ಬ್ಯಾರೇಜ್ ನಿರ್ಮಾಣದ ವಿಸ್ತೃತ ಯೋಜನಾ ವರದಿ ದೃಢೀಕರಣ.
ವಿದ್ಯಾರ್ಥಿವೇತನ ವಿತರಣೆಗೆ ವಿನೂತನ ತಂತ್ರಜ್ಞಾನ- ದೇಶದಲ್ಲೇ ಮೊದಲು; ಏನಿದು ಟೆಕ್ನಿಕ್​? ಇಲ್ಲಿದೆ ಡಿಟೇಲ್ಸ್​

ಎರಡನೆಯ ಪತ್ನಿಯ ಮಕ್ಕಳೂ ಅನುಕಂಪದ ಹುದ್ದೆಗೆ ಅರ್ಹರು: ಹೈಕೋರ್ಟ್​ನಿಂದ ಮಹತ್ವದ ತೀರ್ಪು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 4 =
Remember me
