ಬೆಂಗಳೂರು:ಕಳೆದ ಆಗಸ್ಟ್​ 11ರ ರಾತ್ರಿ ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ಡಿ.ಜೆ.ಹಳ್ಳಿ, ಕೆ.ಜಿಹಳ್ಳಿ ಗಲಭೆ ಪ್ರಕರಣದ ಆಳಕ್ಕೆ ಹೋದಷ್ಟೂ ಪೊಲೀಸರಿಗೆ ಭಯಾನಕ ಮಾಹಿತಿಗಳೇ ದೊರಕುತ್ತಿವೆ. ಫೇಸ್​ಬುಕ್​ನಲ್ಲಿ ಹಾಕಿರುವ ಕಮೆಂಟ್​ ಒಂದನ್ನೇ ನೆಪಮಾಡಿಕೊಂಡು ಬೆಂಕಿ ಹಚ್ಚಿದ್ದ ಕಿಡಿಗೇಡಿಗಳ ಬಣ್ಣ ಒಂದೊಂದಾಗಿ ಈಗ ಹೊರಬರುತ್ತಿದೆ.
ಹಿಂದೂ ದೇವರಿಗೆ ಅವಹೇಳನ ಮಾಡಿ ಫೇಸ್​ಬುಕ್​ನಲ್ಲಿ ಪೋಸ್ಟ್​ ಒಂದನ್ನು ಯಾರೋ ಹಾಕಿದ್ದರು. ಅದರಿಂದ ರೊಚ್ಚಿಗೆದ್ದಿದ್ದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರ ಸೋದರಳಿಯ ನವೀನ್​, ಆ ಪೋಸ್ಟ್​ಗೆ ಪ್ರವಾದಿ ಮುಹಮ್ಮದ್ ಅವರ ವಿರುದ್ಧದ ಹೇಳಿಕೆ ಪೋಸ್ಟ್​ ಮಾಡಿದ್ದ. ಇದನ್ನೇ ನೆಪ ಮಾಡಿಕೊಂಡು ಗಲಭೆಯನ್ನು ಸೃಷ್ಟಿಸಲಾಗಿತ್ತು.
ಇದಾಗಲೇ ಈ ಪ್ರಕರಣದಲ್ಲಿ ಬೆಂಗಳೂರಿನ ಮಾಜಿ ಮೇಯರ್​ ಕಾಂಗ್ರೆಸ್​ ಮುಖಂಡ ಸಂಪತ್​ರಾಜ್​ ಅವರು ಆರೋಪಿ ಎಂದು ಪೊಲೀಸರು ತನಿಖೆ ಶುರುಮಾಡಿದ್ದಾರೆ. ಇದೀಗ ಗಲಭೆ ನಡೆದ ದಿನ ಇವರ ಮೊಬೈಲ್​ಫೋನ್​ನಿಂದ ಹೊರಹೋಗಿರುವ ಮತ್ತು ಒಳಬಂದಿರುವ ಕರೆಗಳ ದಾಖಲೆಗಳು ಪೊಲೀಸರಿಗೆ ಸಿಕ್ಕಿವೆ.
ಇದನ್ನೂ ಓದಿ:ಮಸೀದಿಯಿಂದ ವಾಪಸಾಗುವ ವೇಳೆ ಉಗ್ರರ ದಾಳಿ: ಎಸ್​ಐ ಹತ್ಯೆ
ಈ ದಾಖಲೆಗಳನ್ನು ನೋಡಿದಾಗ ಸಂಪತ್​ರಾಜ್​ ಅವರ ಮೇಲಿನ ಗುಮಾನಿ ಪೊಲೀಸರಿಗೆ ಇನ್ನಷ್ಟು ಬಲವಾಗಿದೆ. ಸಂಪತ್​ರಾಜ್​ ಹಾಗೂ ಗಲಭೆ ನಡೆಸಿ, ದಾಂಧಲೆ ಸೃಷ್ಟಿಸಿ, ಸುತ್ತಮುತ್ತಲೂ ಬೆಂಕಿ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಆರೋಪ ಹೊತ್ತ ಕೆಲವರ ನಡುವೆ ನಡೆದಿರುವ ಅಂದು ನಡೆದಿರುವ ಮಾತುಕತೆಯ ಕಾಲ್​ ರೆಕಾರ್ಡ್ಸ್​ ಇದೀಗ ನೇರವಾಗಿ ಸಂಪತ್​ರಾಜ್​ರತ್ತ ಬೆರಳುಮಾಡಿ ತೋರಿಸುತ್ತಿವೆ.
ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ನಡೆಸುವ ಮುನ್ನ ಸಂಪತ್‌ ರಾಜ್, ಆರೋಪಿಗಳ ಜತೆ ಸಂಪರ್ಕದಲ್ಲಿದ್ದ ಬಗ್ಗೆ ಸಿಕ್ಕಿರುವ ಸುಳಿವು ಸಿಕ್ಕಿದೆ. ಘಟನೆ ನಡೆದ ಸಂಜೆ 6ರಿಂದ ತಡರಾತ್ರಿ 2ರವರೆಗೂ ಆರೋಪಿಗಳಾದ ಸಜ್ಜದ್ ಖಾನ್, ಮುಜಾಹಿದ್ ಪಾಷಾ, ಯಾಸೀನ್ ಜಾಕೀರ್, ವಾಜಿದ್ ಪಾಷಾ, ಅರುಣ್ ಜತೆ ‘ಕೈ’ ಮುಖಂಡ ಸಂಪತ್‌ರಾಜ್ ಮೊಬೈಲ್​ಫೋನ್​ನಲ್ಲಿ ಮಾಡಿರುವ ಕರೆಗಳ ವಿವರಗಳು ಇದೀಗ ಬಹಿರಂಗಗೊಂಡಿದೆ.
ಅಷ್ಟೇ ಅಲ್ಲದೇ ಈ ಗಲಭೆ ಪೂರ್ವ ನಿಯೋಜಿತ ಎನ್ನುವುದನ್ನು ಸಾಬೀತುಮಾಡುವಂತೆ ಇದೇ ಆರೋಪಿಗಳು ಘಟನಾ ಸ್ಥಳದ ಸುತ್ತಮುತ್ತಲು ಇದ್ದುಕೊಂಡೇ ಸಂಪತ್​ರಾಜ್​ ಜತೆ ನೇರವಾಗಿ ಮಾತುಕತೆ ನಡೆಸುತ್ತಿದ್ದರು ಎಂದು ಮೊಬೈಲ್​ ಟವರ್ ಲೊಕೇಶನ್ ಮೂಲಕ ಸಾಬೀತಾಗಿದೆ.
ಪೊಲೀಸ್​ ಮೂಲಗಳಿಂದ ತಿಳಿದುಬಂದಿರುವ ಕಾಲ್​ ಡಿಟೇಲ್ಸ್​ಗಳು ಹೀಗಿವೆ..* ಗಲಭೆ ನಡೆದ ಆಗಸ್ಟ್​ 11ರ ಸಂಜೆ 6.50ಕ್ಕೆ ಸಂಪತ್​ ರಾಜ್ ಕಾರು ​ಚಾಲಕನ ಜತೆ 66 ಸೆಕೆಂಡ್​ ಮಾತನಾಡಿದ್ದಾರೆ.* ಸಂಜೆ 7 ಗಂಟೆ 8ನಿಮಿಷಕ್ಕೆ ಆ ಕಾರು ಚಾಲಕ ಇನ್ನೋರ್ವ ಆರೋಪಿ ಸಂತೋಷ್​ ಜತೆ 148 ಸೆಕೆಂಡ್​ ಮಾತನಾಡಿದ್ದಾನೆ.* 7.17ಕ್ಕೆ ಗಲಭೆ ಆರೋಪಿ ಮುಜಾಹಿದ್​ ಪಾಷಾಗೆ ಸಂತೋಷ್​ ಕರೆ ಮಾಡಿದ್ದು 53 ಸೆಕೆಂಡ್​ ಮಾತುಕತೆ ನಡೆದಿದೆ.* 7.49ಕ್ಕೆ ಪುನಃ ಸಂತೋಷ್​ಗೆ ಕರೆ ಮಾಡಿದ್ದ ಸಂಪತ್​ ರಾಜ್​. 59 ಸೆಕೆಂಡ್​ ಮಾತನಾಡಿದ್ದಾರೆ.* 7.53ಕ್ಕೆ ಯಾಸಿನ್​ ಜಾಕೀರ್​ಗೆ ಶಫಿ ಉಲ್ಲಾ ಕರೆ ಮಾಡಿ 47 ಸೆಕೆಂಡ್​ ಮಾತುಕತಡೆ ನಡೆಸಲಾಗಿದೆ.* ವಾಜಿದ್ ಪಾಷಾಗೆ ಕರೆ ಮಾಡಿದ್ದ ಶಫಿ ಉಲ್ಲಾ 25 ಸೆಕೆಂಡ್​ ಮಾತನಾಡಿದ್ದಾರೆ.* ಶಫಿ ಉಲ್ಲಾಗೆ ಮೊದಲು ಜಾಕೀರ್​ ಕರೆ ಮಾಡಿದ್ದಾನೆ, ನಂತರ ವಾಜಿದ್​ಗೆ ಶಫಿ ಉಲ್ಲಾ ಕರೆ ಮಾಡಿದ್ದಾನೆ. ಈ ಮೂವರ ನಡುವೆ ಪದೇ ಪದೇ ಫೋನ್​ಕಾಲ್​ಗಳು ಹೋಗಿವೆ.* ರಾತ್ರಿ 8.10ಕ್ಕೆ ಶಫಿ ಉಲ್ಲಾನಿಂದ ವಾಜಿದ್​ಗೆ ಕರೆ ಮಾಡಿ ಒಂದು ನಿಮಿಷ ಮಾತನಾಡಿದ್ದಾರೆ. ಕೂಡಲೇ ಸಂಪತ್​ ರಾಜ್​​ಗೆ ಕಾಲ್​ ಮಾಡಲಾಗಿದೆ. 59 ಸೆಕೆಂಡ್​ ಮಾತುಕತೆ ನಡೆದಿದೆ. ನಂತರ ಶಫಿ ಉಲ್ಲಾ, ವಾಜಿದ್, ಜಾಕೀರ್​​ ಮಧ್ಯೆ ಮತ್ತೆ ಪುನಃ ಪುನಃ ಮಾತುಕತೆ ನಡೆದಿದೆ.* ರಾತ್ರಿ 8.48 ರಿಂದ 9:09 ರ ಮಧ್ಯೆ ಜಾಕೀರ್​ಗೆ ಮೂರು ಬಾರಿ ಕಾಲ್​ ಮಾಡಿರುವ ಸಂಪತ್​ರಾಜ್​ 149 ಸೆಕೆಂಡ್ ಮಾತಾಡಿದ್ದಾರೆ. ಪುನಃ ರಾತ್ರಿ 9.9ಕ್ಕೆ 56 ಸೆಕೆಂಡ್​ ಮಾತನಾಡಿದ್ದಾರೆ.
ಡಿಜೆಹಳ್ಳಿ ಗಲಭೆ: ಕಾಲ್​ ರೆಕಾರ್ಡ್ಸ್​ ಲೀಕ್​ ಆದ್ರೇನು? ಹೆದರಬೇಡಿ ಎಂದು ಕೈ ನಾಯಕರಿಗೆ ಡಿಕೆಶಿ ಅಭಯ

ಬಿಎಸ್​ವೈ ಅಧಿಕಾರ ಮುಗೀತು- ಉ.ಕದವರೇ ಮುಂದಿನ ಸಿಎಂ: ಯತ್ನಾಳ್​ ಸಿಡಿಸಿದರು ಬಾಂಬ್​

ಬ್ರಿಟನ್​ ಪ್ರಧಾನಿಗೆ ಸಂಬಳ ಸಾಕಾಗುತ್ತಿಲ್ಲವಂತೆ! ಇನ್ಫಿ ಅಳಿಯನಿಗೆ ಒಲಿಯಲಿದೆಯೇ ಈ ಪಟ್ಟ?

ರೈಲಲ್ಲಿ ಹೋದ ಕಳ್ಳನನ್ನು ಹಿಡಿಯಲು ವಿಮಾನವೇರಿ ಹೊರಟ ಬೆಂಗಳೂರು ಪೊಲೀಸರು

ನಟಿಯರನ್ನು ಬಿಡುಗಡೆ ಮಾಡದಿದ್ರೆ ಬಾಂಬ್​ ಬ್ಲಾಸ್ಟ್​: ಉಗ್ರ ಸಂಘಟನೆ ಹೆಸರಲ್ಲಿ ಪತ್ರ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × four =
Remember me
