ಬೆಂಗಳೂರು:ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಕಾಂಗ್ರೆಸ್​ನ ಮಾಜಿ ಮೇಯರ್​ ಸಂಪತ್​ ಕುಮಾರ್​ ಅವರನ್ನು ಎರಡು ದಿನಗಳವರೆಗೆ ಸಿಸಿಬಿ ವಶಕ್ಕೆ ನೀಡಿ ಕೋರ್ಟ್​ ಆದೇಶಿಸಿದೆ.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೇರಿದಂತೆ ಹಲವಾರು ಮನೆಗಳಿಗೆ ಬೆಂಕಿ ಇಟ್ಟು, ಲಕ್ಷಾಂತರ ರೂಪಾಯಿ ಆಸ್ತಿ ಪಾಸ್ತಿ ಹಾನಿ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಆರೋಪಿಯಾಗಿರುವ ಸಂಪತ್​ಕುಮಾರ್​, ತಲೆಮರೆಸಿಕೊಂಡಿದ್ದರು. ನಿನ್ನೆ ಅವರನ್ನು ಕೊನೆಗೂ ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅವರನ್ನು 67ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಸದ್ಯದ ಮಟ್ಟಿಗೆ ಎರಡು ದಿನಗಳವರೆಗೆ ಅವರನ್ನು ಪೊಲೀಸರ ವಶಕ್ಕೆ ನೀಡಿ ಕೋರ್ಟ್​ ಆದೇಶಿಸಿದೆ.
ಬೃಹತ್​ ಮಹಾನಗರ ಪಾಲಿಕೆಯ ಮೇಯರ್​ ಆಗಿ ಆಯ್ಕೆಯಾದವರನ್ನು ಆ ನಗರದ ಪ್ರಥಮ ಪ್ರಜೆ ಎನ್ನಲಾಗುತ್ತದೆ. ಭಾರತ ದೇಶಕ್ಕೆ ರಾಷ್ಟ್ರಪತಿಗಳು ಪ್ರಥಮ ಪ್ರಜೆ ಇದ್ದಂತೆ, ಮಹಾನಗರಗಳಿಗೆ ಆಯಾ ಮೇಯರ್​ಗಳೇ ಪ್ರಥಮ ಪ್ರಜೆ. ಇಂಥ ಒಂದು ಗೌರವ ಸ್ಥಾನಕ್ಕೆ ಕಪ್ಪುಚುಕ್ಕೆ ತಂದಿದ್ದಾರೆ ಸಂಪತ್​ಕುಮಾರ್​ ಎಂದು ಇದೀಗ ಭಾರಿ ಚರ್ಚೆಯಾಗುತ್ತಿದೆ.
ಇದನ್ನೂ ಓದಿ:ಮಾಜಿ ಮೇಯರ್ ಸಂಪತ್​ ರಾಜ್​ ಬಂಧನ; ಕೊನೆಗೂ ಸಿಕ್ಕಿಬಿದ್ದ ‘ಹಳ್ಳಿ ಗಲಭೆ’ ಕಿಂಗ್​ಪಿನ್​
ಇದಕ್ಕೆ ಕಾರಣ, ಇದುವರೆಗೆ ಮೇಯರ್​ ಸ್ಥಾನದಲ್ಲಿ ಇದ್ದ ಯಾರು ಕೂಡ ಬಂಧನಕ್ಕೆ ಒಳಗಾಗಿರಲಿಲ್ಲ ಎನ್ನಲಾಗಿದೆ. ಟೌನ್ ಮುನ್ಸಿಪಲ್ ಆಗಿದ್ದ ಬೆಂಗಳೂರು ನಂತರ ನಗರಸಭೆ, ಕಾರ್ಪೋರೇಷನ್​, ಬಿಎಂಪಿ ಹಾಗೂ ನಂತರ ಬಿಬಿಎಂಪಿ ಆಗಿ ಪುನಾರಚನೆಗೊಂಡಿದೆ. ಅಲ್ಲಿಂದ ಇಲ್ಲಿಯವರೆಗೆ ಒಟ್ಟೂ 53 ಮಂದಿ ಮೇಯರ್​ ಆಗಿ ಆಯ್ಕೆಯಾಗಿದ್ದು, ಇಂಥದ್ದೊಂದು ಕ್ರಿಮಿನಲ್​ ಪ್ರಕರಣದಲ್ಲಿ ಆರೋಪಿಯಾದವರು ಸಂಪತ್​ರಾಜ್​ ಅವರೇ ಮೊದಲಿಗರು ಎನ್ನಲಾಗಿದೆ.
ಈ ನಡುವೆಯೇ ಅವರನ್ನು ಬಂಧಿಸಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಾರ್ಜ್​ಷೀಟ್​ ಸಲ್ಲಿಸಿದ ಮಾತ್ರಕ್ಕೆ ಯಾರೂ ಅಪರಾಧಿಯಲ್ಲ, ಸದ್ಯ ಸಂಪತ್​ಕುಮಾರ್​ ಆರೋಪಿಯಷ್ಟೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಕೂಡ ಸಂಪತ್​ರಾಜ್​ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಗಲಭೆ ಆರೋಪಿ ಸಂಪತ್​ರಾಜ್​ ಬಗ್ಗೆ ಡಿಕೆಶಿಗೆ ಮೊದಲೇ ಗೊತ್ತಿತ್ತಾ? ಏನು ಹೇಳಿದ್ದಾರೆ ಕೇಳಿ…

ದಿನಕ್ಕೊಂದು ಮೊಟ್ಟೆ- ಶುರುವಾಗುವುದು ಶುಗರ್​: ಅಧ್ಯಯನದಲ್ಲಿ ಆತಂಕದ ವಿಷಯ ಬಹಿರಂಗ!

ಇಸ್ಲಾಂನಲ್ಲಿ ಇರುವುದೇನು? ಆಗುತ್ತಿರುವುದೇನು? ದಾಖಲೆ ನಿರ್ಮಿಸಿ ಕಾಶ್ಮೀರಕ್ಕೆ ಹೊರಟ ಹಿಂದೂ ಯುವಕ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten + 14 =
Remember me
