ಬೆಂಗಳೂರು:ಕರೊನಾ ಹಿನ್ನೆಲೆಯಲ್ಲಿ ಶಾಲೆಗಳು ಇದುವರೆಗೂ ಆರಂಭವಾಗಿಲ್ಲ. ಇದೇ ಕಾರಣಕ್ಕೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ವತಿಯಿಂದ ಕೆಲವು ತಿಂಗಳಿನಿಂದ ಚಂದನ ವಾಹಿನಿಯಲ್ಲಿ ಹೈಸ್ಕೂಲ್​ ವಿದ್ಯಾರ್ಥಿಗಳಿಗಾಗಿ ಸಂವೇದಾ ಇ-ಕ್ಲಾಸ್ ನಡೆಸಲಾಗುತ್ತಿದೆ.ರಾಜ್ಯದ 8, 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಕಳೆದ ಆಗಸ್ಟ್​ನಿಂದ ಈ ಯೋಜನೆ ಶುರು ಮಾಡಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ 8,9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗಾಗಿ ಇದನ್ನು ಆರಂಭಿಸಲಾಗಿದೆ.
ನಾಳೆಯಿಂದ ಎಂದರೆ ಡಿಸೆಂಬರ್​ 7ರಿಂದ ಕಲಿಕಾ ಕಾರ್ಯಕ್ರಮದ ಸಮಯದಲ್ಲಿ ಬದಲಾವಣೆಯಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ವಿಧಾನಮಂಡಲ ಅಧಿವೇಶನ ನಡೆಯುವ ಹಿನ್ನೆಲೆಯಲ್ಲಿ ತರಗತಿಗಳ ಪ್ರಸಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ನಾಳೆಯಿಂದ ಈ ತರಗತಿಗಳು ದೂರದರ್ಶನ ಚಂದನ ವಾಹಿನಿಯಲ್ಲಿ ಬೆಳಗ್ಗೆ 7 ಗಂಟೆಯಿಂದ 10.30 ಹಾಗೂ ಸಂಜೆ 5 ಗಂಟೆಯಿಂದ 6.30 ರವರೆಗೆ ಪ್ರಸಾರವಾಗಲಿವೆ. ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ವಿಷಯವಾರು ತರಗತಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಕನ್ನಡ, ಉರ್ದು, ಇಂಗ್ಲಿಷ್ , ಗಣಿತ, ವಿಜ್ಞಾನ, ಸಮಾಜ ಸಂಸ್ಕೃತ ಮತ್ತು ಹಿಂದಿ ಪ್ರಥಮ ಭಾಷೆ ತರಗತಿಗಳನ್ನು ಪ್ರಸಾರ ಮಾಡಲಾಗುತ್ತಿದೆ.
10 ವರ್ಷ ಒಟ್ಟಿಗೇ ಇದ್ರು, ಈಗ ಅಧಿಕೃತವಾಯ್ತು: ಮಗನ ಗುಟ್ಟು ಬಿಚ್ಚಿಟ್ಟ ಗಾಯಕ ಉದಿತ್​ ನಾಯಾಯಣ್

80 ವರ್ಷದ ಅತ್ತೆಯನ್ನು ಹೊರದಬ್ಬಿ ಚಳಿಯಲ್ಲಿ ಮಲಗಿಸಿದ ಸೊಸೆ- ವಿಡಿಯೋ ವೈರಲ್

ಯೋಗಿ ನಂತರ ಚೌಹಾಣ್​- ಲವ್​ ಜಿಹಾದಿಗಳಿಗೆ ಇಲ್ಲೂ ಶುರಾಗಲಿದೆ ನಡುಕ: 10 ವರ್ಷ ಜೈಲು!

VIDEO: ಐಸ್​ಕ್ರೀಂ ಹಿಡಿದುಕೊಂಡೇ ದರೋಡೆಕೋರರತ್ತ ಗುಂಡುಹಾರಿಸಿ ಅರೆಸ್ಟ್ ಮಾಡಿದ ಪೊಲೀಸ್​​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × three =
Remember me
