ಬೆಂಗಳೂರು:ಬೈಕ್‌ ಅಪಘಾತದಲ್ಲಿ ಮೃತಪಟ್ಟ ನಟ ಸಂಚಾರಿ ವಿಜಯ್‌ ಅವರ ಅಂಗಾಂಗಗಳನ್ನು ಅಗತ್ಯ ಇರುವವರಿಗೆ ನೀಡುವ ಪ್ರಕ್ರಿಯೆಗೆ ಇದಾಗಲೇ ಚಾಲನೆ ದೊರೆತಿದೆ.
ಸಂಚಾರಿ ವಿಜಯ್ ಅವರ ಅಂಗಾಂಗಗಳನ್ನು ದಾನ ಮಾಡಲು ನಿನ್ನೆಯೇ ಅವರ ಕುಟುಂಬಸ್ಥರು ಒಪ್ಪಿಗೆ ನೀಡಿದ್ದರಿಂದ ಕಸಿ ಆಪರೇಷನ್ ಶುರು ಮಾಡಲಾಗಿದೆ. ಇದಾಗಲೇ ಇವರ ಮೂತ್ರಪಿಂಡಗಳನ್ನು ಮಹಿಳೆಯೊಬ್ಬರಿಗೆ ಚಿಕಿತ್ಸೆ ಮೂಲಕ ಜೋಡಣೆ ಮಾಡಲಾಗಿದೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ ಎಂದು ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ನಗರದ ಲಗ್ಗೆರೆ ಮೂಲದ 34 ವರ್ಷದ ಮಹಿಳೆಗೆ ಕಿಡ್ನಿಯ ಅಗತ್ಯವಿತ್ತು. ವಿಜಯ್‌ ಅವರ ಬ್ಲಡ್ ಗ್ರೂಪ್ , ಡಿ ಎನ್ ಎ , ಕಿಡ್ನಿ ಸೈಜ್ ಎಲ್ಲವೂ ಮಹಿಳೆಗೆ ಮ್ಯಾಚ್ ಆಗಿತ್ತು. ಈ ಹಿನ್ನೆಲೆಯಲ್ಲಿ ವಿಜಯ್ ಅವರ ಒಂದು ಕಿಡ್ನಿ ಮಹಿಳೆಗೆ ಯಶಸ್ವಿಯಾಗಿ ಟ್ರಾನ್ಸ್‌ಪ್ಲಾಂಟೇಷನ್ ಮಾಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಅದೇ ಇನ್ನೊಂದೆಡೆ ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಇಬ್ಬರಿಗೆ ವಿಜಯ್‌ ಅವರ ಕಣ್ಣುಗಳನ್ನು ಜೋಡಿಸುವ ಕಾರ್ಯ ಸಾಗಿದ್ದು, ಒಬ್ಬರಿಗೆ ಕಣ್ಣು ಜೋಡಣೆ ಕಾರ್ಯ ಮುಕ್ತಾಯಗೊಂಡಿದೆ. ದೃಷ್ಟಿ ಕಳೆದುಕೊಂಡಿದ್ದ ಇಬ್ಬರ ಬಾಳಲ್ಲಿ ವಿಜಯ್‌ ಅವರು ಬೆಳಕು ನೀಡಿದ್ದಾರೆ.
ಎರಡು ವರ್ಷಗಳ ಕಾಲ ಅತ್ಯಂತ ಬ್ಯುಸಿಯಾಗಿದ್ದ ವಿಜಯ್​ …

ಸಂಚಾರಿ ವಿಜಯ್‌ ಅವರ ಅಂಗಾಂಗ ದಾನ ಹೇಗೆ? ಸಂಪೂರ್ಣ ಮಾಹಿತಿ ನೀಡಿದೆ ಆರೋಗ್ಯ ಇಲಾಖೆ


ಸಂಚಾರಿ ವಿಜಯ್‌ ಅವರ ಅಂಗಾಂಗ ದಾನ ಹೇಗೆ? ಸಂಪೂರ್ಣ ಮಾಹಿತಿ ನೀಡಿದೆ ಆರೋಗ್ಯ ಇಲಾಖೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 − 1 =
Remember me
