ಚಿಕ್ಕಮಗಳೂರು:ರಸ್ತೆ ಅಪಘಾತದಿಂದಾಗಿ ಬಾರದ ಲೋಕಕ್ಕೆ ಮರಳಿದ ನಟ ಸಂಚಾರಿ ವಿಜಯ್‌ ಅವರ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲುಕಿನ ಪಂಚನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಯಿತು.
ವಿಜಯ್ ಅವರ ಸ್ನೇಹಿತ ರಘು ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಿತು. ಗ್ರಾಮಸ್ಥರಿಂದ ಅಂತಿಮ ದರ್ಶನದ ಬಳಿಕ ವಿಜಯ್ ಅವರಿಗೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಬಿಲ್ವಪತ್ರೆ, ವಿಭೂತಿಗಳನ್ನು ಬಳಸಿ, ಮಣ್ಣಿನಿಂದ ಶರೀರವನ್ನು ಮುಚ್ಚಿ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು.
ಕುಪ್ಪೂರು ಯತೀಶ್ವರ ಶಿವಾಚಾರ್ಯ ಶ್ರ‍ಿಗಳ ನೇತೃತ್ವದಲ್ಲಿ ಅವರ ಸಹೋದರ ಸಿದ್ದೇಶ್ ಅಂತಿಮ ವಿಧಿವಿಧಾನ ನೆರವೇರಿಸಿದರು. ಪೊಲೀಸರಿಂದ ಮೂರು ಸುತ್ತು ಕುಶಲತೋಪು ಹಾರಿಸಿ ವಿಜಯ್‌ ಅವರಿಗೆ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಚಿವ ಮಾಧುಸ್ವಾಮಿ, ಕಡೂರು ಮಾಜಿ ಶಾಸಕ ವೈ ಎಸ್ ವಿ ದತ್ತ ಸೇರಿದಂತೆ ಬಂಧುಬಳಗದವರು, ಗ್ರಾಮಸ್ಥರು ಹಾಜರು ಇದ್ದರು.
ಇಬ್ಬರು ಅಂಧರಿಗೆ ಬೆಳಕು ನೀಡಿದ ವಿಜಯ್‌ ಕಣ್ಣುಗಳು: ಮಹಿಳೆಗೆ ಕಿಡ್ನಿ ಕಸಿ ಸಕ್ಸಸ್‌

ಸಂಚಾರಿ ವಿಜಯ್‌ ಅವರ ಅಂಗಾಂಗ ದಾನ ಹೇಗೆ? ಸಂಪೂರ್ಣ ಮಾಹಿತಿ ನೀಡಿದೆ ಆರೋಗ್ಯ ಇಲಾಖೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 4 =
Remember me
