ಬೆಂಗಳೂರು:ಡ್ರಗ್ಸ್​ ಕೇಸ್​ನಲ್ಲಿ ಜೈಲುಪಾಲಾಗಿದ್ದು 50 ದಿನಗಳಿಗಿಂತಲೂ ಹೆಚ್ಚಿನ ಕಾಲ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ನಟಿಯರಾದ ಸಂಜನಾ ಮತ್ತು ರಾಗಿಣಿಯರು ಜೈಲಿನಲ್ಲಿಯೇ ದಸರಾ ಆಚರಿಸಿದ್ದಾರೆ. ಇದೀಗ ದೀಪಾವಳಿಯನ್ನೂ ಜೈಲಿನಲ್ಲಿಯೇ ಆಚರಿಸದೇ ಬೇರೆ ದಾರಿಯೇ ಇಲ್ಲ.
ನಿನ್ನೆಯಷ್ಟೇ ಜೈಲಿನಲ್ಲಿ ಹೊಸ ಬಟ್ಟೆ ಕೊಡಿಸಿ ಎಂದು ಗಲಾಟೆ ಮಾಡಿದ್ದರು ಎಂದು ವರದಿಯಾಗಿದೆ. ದೀಪಾವಳಿ ಎಂದರೆ ಸಿಹಿಯ ಹಬ್ಬ. ಕೊನೆಯ ಪಕ್ಷ ಸ್ವೀಟ್ಸ್​ ತರಿಸಿ ಎಂದು ರಗಳೆ ಮಾಡಿದ್ದ ನಟಿಯರನ್ನು ಶಾಂತಗೊಳಿಸಲು ಪೊಲೀಸರು ಸುಸ್ತಾಗಿ ಹೋದರು ಎನ್ನಲಾಗಿದೆ.ಮಾತ್ರವಲ್ಲದೇ ಈ ನಟಿಯರು ತಮ್ಮ ಪಾಲಕರನ್ನು ಭೇಟಿಯಾಗಲು ಮಾಡಿಕೊಂಡ ಮನವಿಯನ್ನು ಕೂಡ ಕರೊನಾ ಹಿನ್ನೆಲೆಯಲ್ಲಿ ತಿರಸ್ಕರಿಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:ಇಲ್ಲೊಂದು ಜಿಂಕೆಮರಿ ಇದೆ… ಹುಡುಕಿದರೆ ನೀವೇ ಗ್ರೇಟ್‌…
ಈ ಎಲ್ಲಾ ಹಿನ್ನೆಲೆಯಲ್ಲಿ ಸದ್ಯಕ್ಕಂತೂ ಹೊರಕ್ಕೆ ಬರುವ ಯಾವುದೇ ಸೂಚನೆ ಇಲ್ಲದ ಹಿನ್ನೆಲೆಯಲ್ಲಿ ಜೈಲಿನಲ್ಲಿ ದೀಪಾವಳಿ ಆಚರಿಸಲು ಈ ನಶೆ ನಟಿಯರು ನಿರ್ಧರಿಸುವ ಮೂಲಕ ಪಾಲಿಗೆ ಬಂದದ್ದು ಪಂಚಾಮೃತ ಎಂದುಕೊಂಡಿದ್ದಾರೆ.
ಇದೇ ಕಾರಣಕ್ಕೆ ರಾಗಿಣಿ ಜೈಲಿನಲ್ಲಿಯೇ ತನಗೆ ಸಿಕ್ಕಷ್ಟು ಪೇಪರ್​ಗಳನ್ನು ಬಳಸಿಕೊಂಡು ಗ್ರೀಟಿಂಗ್ಸ್​ ತಯಾರಿಸಿದ್ದಾರೆ ಎನ್ನಲಾಗಿದೆ. ಗ್ರೀಟಿಂಗ್ಸ್​ ಅನ್ನು ಜೈಲಿನ ಅಧಿಕಾರಿಗಳಿಗೆ ನೀಡಿರುವ ಅವರು, ನಮ್ಮ ಮನವಿಯಂತೂ ಪುರಸ್ಕರಿಸಲಿಲ್ಲ. ಈ ಕಾರ್ಡ್​ ಆದರೂ ಪಡೆದುಕೊಳ್ಳಿ ಎಂದು ಹೇಳುವ ಮೂಲಕ ದೀಪಾವಳಿ ವಿಷ್​ ಮಾಡಿರುವುದಾಗಿ ಹೇಳಲಾಗಿದೆ.
ಜತೆಗೆ ಇಬ್ಬರೂ ನಟಿಯರು ಮಹಿಳಾ ಸೆಲ್ ಮುಂದೆ ದೀಪ ಹಚ್ಚಿ ಹಬ್ಬ ಆಚರಣೆ ಮಾಡಿದ್ದಾರೆ. ಜೈಲಿನ ಒಳಗೆ ಇರುವ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.
ಐದು ಸಲ ಶಾಸಕನಾದ್ರೂ ಎಂಥ ಬಡತನ, ಎಷ್ಟು ಸರಳತನ ಎಂದವರಿಗೆ ಕಾದಿತ್ತು ಶಾಕ್​!

ತಾಳ್ಮೆ ಪರೀಕ್ಷಿಸಿದರೆ ಸುಮ್ಮನಿರಲ್ಲ: ಪಾಕಿಗಳ ಎದೆ ನಡುಗಿಸುವ ತಿರುಗೇಟು ಹೇಗಿದೆ ನೋಡಿ…

ತಪ್ಪೇ ಮಾಡದೆ 20 ವರ್ಷ ಪಾಕ್‌ ಜೈಲಿನಲ್ಲಿದ್ದ ಮಾನಸಿಕ ಅಸ್ವಸ್ಥ ತವರಿಗೆ ಮರಳಿದಾಗ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen + 18 =
Remember me
