ಬೆಂಗಳೂರು:ಡ್ರಗ್ಸ್​ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟಿ ಸಂಜನಾ ಗಲ್ರಾನಿ ತಾತ್ಕಾಲಿಕವಾಗಿ ನಿಟ್ಟುಸಿರು ಬಿಡುವಂಥ ಆದೇಶವೊಂದು ಹೈಕೋರ್ಟ್​ ನೀಡಿದೆ. ತಮಗೆ ಅನಾರೋಗ್ಯವಿದ್ದು, ಆರೋಗ್ಯ ತಪಾಸಣೆಗೆ ಅನುಮತಿ ನೀಡಬೇಕು ಎಂದು ಕೋರಿರುವ ಅರ್ಜಿಯನ್ನು ಮಾನ್ಯ ಮಾಡಿರುವ ಕೋರ್ಟ್​, ಅವರ ಆರೋಗ್ಯ ತಪಾಸಣೆಗೆ ಅನುಮತಿ ನೀಡಿದೆ.
ವೈದ್ಯಕೀಯ ತಪಾಸಣೆಗೆ ನಡೆಸಿ, ಡಿಸೆಂಬರ್ 10ರೊಳಗೆ ವರದಿ ಸಲ್ಲಿಸುವಂತೆ ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ. ಇದೇ ವೇಳೆ ಆರೋಗ್ಯ ತಪಾಸಣೆಗೆ ಮಾಧ್ಯಮಗಳ ಚಿತ್ರೀಕರಣಕ್ಕೆ ಅವಕಾಶ ಕೊಡಬಾರದು ಎಂದು ಕೋರ್ಟ್​ ಸ್ಪಷ್ಟಪಡಿಸಿದೆ.
ಇದನ್ನೂ ಓದಿ:ಸುಪ್ರೀಂಕೋರ್ಟ್​ನಲ್ಲೂ ರಾಗಿಣಿಗೆ ಸಿಗಲಿಲ್ಲ ಬೇಲ್​: ಹೊಸವರ್ಷ ಆಚರಣೆಯೂ ಜೈಲಲ್ಲೇ!
ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಸಂಜನಾ ಆರೋಗ್ಯ ತಪಾಸಣೆ ನಡೆಸಿ, ಆ ಬಗ್ಗೆ ಸಂಪೂರ್ಣ ವರದಿಯನ್ನು ಡಿಸೆ.ಬರ್​ 10ರ ಒಳಗೆ ನೀಡಬೇಕು ಎಂದು ಕೋರ್ಟ್​ ಹೇಳಿದೆ.
ಇದರಿಂದಾಗಿ ಕಳೆದ ಮೂರು ತಿಂಗಳಿನಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ಸಂಜನಾ ಮೂರು ತಿಂಗಳ ಬಳಿಕ ಜೈಲಿನಿಂದ ಹೊರಪ್ರಪಂಚ ನೋಡುವಂತಾಗಿದೆ. ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರನ್ನು ಕಳೆದ ಸೆಪ್ಟೆಂಬರ್ 8ರಂದು ಸಂಜನಾ ಗಲ್ರಾನಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕ್ಲಾಸ್​ರೂಂನಲ್ಲಿ ವಿವಾಹ ಪ್ರಕರಣಕ್ಕೆ ಟ್ವಿಸ್ಟ್​- ಮದ್ವೆಯಾಯ್ತು ಅಮಾನ್ಯ: ಮಗಳಿಗೆ ಮನೆಯಲ್ಲಿ ನೋ ಎಂಟ್ರಿ

ಯೋಧನ ಪ್ರಾಣ ಕಾಪಾಡಿ ಕೈ ಕಳೆದುಕೊಂಡ ಯುವತಿಯೀಗ ಬಿಜೆಪಿ ಅಭ್ಯರ್ಥಿ- ಇಲ್ಲೊಂದು ಅಪರೂಪದ ಲವ್​ ಸ್ಟೋರಿ

ಮಗ ಜೀವಂತ ಬೇಕೆಂದ್ರೆ 3 ಲಕ್ಷ ಕೊಡಿ- ವಿಡಿಯೋ ನೋಡಿ ಬೆಚ್ಚಿಬಿದ್ದ ಅಪ್ಪ… ಮುಂದೇನಾಯ್ತು ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − seven =
Remember me
