ಬೆಂಗಳೂರು:ಕಾಂಗ್ರೆಸ್​ನ ಸೋಷಿಯಲ್ ಮೀಡಿಯಾ ಚೀಫ್ ಬಿ.ಆರ್ ನಾಯ್ಡು ಹಾಗೂ ಅರುಣ್ ಎನ್ನುವವರನ್ನು ಬುಧವಾರ ತಡರಾತ್ರಿ ಪೊಲೀಸರು ಬಂಧಿಸಿರುವುದು ಮೇಲ್ಮನೆಯಲ್ಲಿ ಗುರುವಾರ ವಾಗ್ವಾದ, ಗದ್ದಲಕ್ಕೆ ಕಾರಣವಾಯಿತು.
ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಪದೇ ಪದೇ‌ ವಿನಂತಿಸಿದರೂ ಕಾಂಗ್ರೆಸ್​ನವರ ಧರಣಿ, ಎರಡೂ ಕಡೆಯವರ ಪರ-ವಿರೋಧ ಧಿಕ್ಕಾರದ ಮೊಳಗು, ಮಾತಿನ ಚಕಮಕಿ ನಿಲ್ಲಲಿಲ್ಲ. ಇದರಿಂದಾಗಿ ಕಲಾಪವನ್ನು 10 ನಿಮಿಷ ಮುಂದೂಡಿದರು.
ಸದನ ಸೇರುತ್ತಿದ್ದಂತೆಯೇ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ವಿಷಯ ಪ್ರಸ್ತಾಪಿಸಿ, ಕಾಂಗ್ರೆಸ್​ಗೊಂದು ಬಿಜೆಪಿಗೊಂದು ಕಾನೂನೇ, ಚರ್ಚೆಗೆ ಅವಕಾಶ ಕೊಡಿ ಎಂದು ಪಟ್ಟು ಹಿಡಿದರು.
ಸದನದ ಕಾರ್ಯವಿಧಾನದಂತೆ ಮೊದಲಿಗೆ ಪ್ರಶ್ನೋತ್ತರ ನಡೆಯಲಿ ಎಂದು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಆಡಳಿತ ಪಕ್ಷದ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣ ಸ್ವಾಮಿ ಹೇಳುದರೆ, ತೇಜಸ್ವಿನಿಗೌಡ ಅವರು ಕಾನೂನು ಎಲ್ಲರಿಗೂ ಒಂದೇ ಎಂದರು.
ಕಾಂಗ್ರೆಸ್ ನವರು ಪಟ್ಟು ಬಿಡಲಿಲ್ಲ. ನೋಟಿಸ್ ಕೊಡಿ ಎಂಬ ಸಭಾಪತಿ ಸಲಹೆ ಕೇಳಲಿಲ್ಲ. ಪ್ರತಿಪಕ್ಷ ನಾಯಕ ಹರಿಪ್ರಸಾದ್ ಮತ್ತು ಆಡಳಿತ ಪಕ್ಷದ ಸದಸ್ಯರ ಮಧ್ಯೆ ಹೇಡಿಗಳು, ರಣಹೇಡಿಗಳು ಎಂಬ ಪರಸ್ಪರ ತಿವಿತ ನಡೆದರೆ, ಕಾಂಗ್ರೆಸ್ ನ ಸದಸ್ಯರು ಸಭಾಪತಿ ಪೀಠದ ಮುಂದೆ ಧಾವಿಸಿ ಧರಣಿ ಹೂಡಿದರು.
ರಾಜ್ಯದ ಮುಖ್ಯಮಂತ್ರಿಗೆ ಅಪಮಾನಿಸಿರುವುದು ನಾಚಿಕೆಗೇಡು ಎಂದು ಆಡಳಿತ ಪಕ್ಷದ ಸದಸ್ಯರು ಕಿಡಿಕಾರಿದರು. ಮೌನವಾಗಿ ಎಲ್ಲವನ್ನು ವೀಕ್ಷಿಸುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಏನು ವಿಷಯ ಎಂದು ಕೇಳಿ ಮತ್ತೆ ಮೌನವಹಿಸಿದರು.
ರೋಚಕ ಘಟ್ಟ ತಲುಪಿದ ಕಾಂಗ್ರೆಸ್​ ಅಧ್ಯಕ್ಷ ಸ್ಥಾನ: ಎರಡು ದಶಕಗಳ ನಂತರವೂ ಬದಲಾಗೋದು ಡೌಟಾ?
‘ಭಾರತ್​ ಜೋಡೋ ಯಾತ್ರೆ’ ಬ್ಯಾನರ್​ನಲ್ಲಿ​ ವೀರ್​ ಸಾವರ್ಕರ್​ ಫೋಟೋ! ಕೊನೆಗೂ ಸತ್ಯ ಒಪ್ಪಿಕೊಂಡ್ರಾ ಎಂದ ಅಭಿಮಾನಿಗಳು
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:nine − 6 =
Remember me
