ಹೈದರಾಬಾದ್:‘ಪುಷ್ಪ’ ಸಿನಿಮಾದಲ್ಲಿನ ಹು ಅಂಟಂ ಮಾಮಾ…ಸಿನಿಮಾಕ್ಕೆ ಹೆಜ್ಜೆಹಾಕಿ ಯಶಸ್ಸನ್ನು ಕಂಡಿರುವ ನಟಿ ಸಮಂತಾ ರುತ್ ಪ್ರಭು ಅಭಿನಯದ ಬಹುನಿರೀಕ್ಷಿತ ಪೌರಾಣಿಕ ಕಥೆಯುಳ್ಳ ‘ಶಾಕುಂತಲಂ’ ಸಿನಿಮಾ ಬಿಡುಗಡೆ ಸಿದ್ಧವಾಗಿದೆ.
ಸಮಂತಾ ಮತ್ತು ದೇವ್ ಮೋಹನ್ ಅವರ ಪ್ಯಾನ್ ಇಂಡಿಯಾ ಸಿನಿಮಾ ನವೆಂಬರ್ 4ಕ್ಕೆ ತೆರೆಕಾಣಲಿದ್ದು, ಪ್ರೇಕ್ಷಕರನ್ನು ಮಹಾಭಾರತದ ಕಥಾಲೋಕಕ್ಕೆ ಕರೆದೊಯ್ಯಲಿದೆ. ಅಲ್ಲು ಅರ್ಜುನ್ ಅವರ ಮಗಳು ಅಲ್ಲು ಅರ್ಹ ಮೊದಲ ಬಾರಿಗೆ ಬಾಲನಟಿಯಾಗಿ ಸಿನಿಮಾದಲ್ಲಿ ಕಮಾಲ್ ಮಾಡಲು ಸಿದ್ಧರಾಗಿದ್ದಾಳೆ.
ದಿಲ್​ರಾಜ್ ನಿರ್ಮಿಸುತ್ತಿರುವ ಈ ಸಿನಿಮಾಕ್ಕೆ ನೀಲಿಮಾ ಗುಣ ಬಂಡವಾಳ ಹೂಡಿದ್ದಾರೆ. ಗುಣಶೇಖರ್ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಿ ಭಾಷೆಗಳಲ್ಲಿ ತೆರೆಕಾಣುತ್ತಿದೆ.
ಈ ಸಿನಿಮಾದ ಫಸ್ಟ್ ಲುಕ್ ಕಂಡು ಜನರು ಬೆರಗಾಗಿದ್ದರು. ಸಮಂತಾ ಬಿಳಿ ಬಣ್ಣದ ಸೀರೆಯುಟ್ಟು ಪ್ರಾಣಿ, ಪಕ್ಷಿಗಳ ಮಧ್ಯೆ ಕುಳಿತು ಎಲ್ಲೋ ನೋಡುವ ರೀತಿಯ ಪೋಸ್ಟರ್ ಗೆ ಉತ್ತಮ ಪ್ರತಿಕ್ರಿಯೆ ದೊರಕಿತ್ತು.
ಈ ಸಿನಿಮಾವು ರಾಮೋಜಿ ಫಿಲ್ಮ್ ಸಿಟಿ, ಅನಂತಗಿರಿ ಬೆಟ್ಟಗಳು, ಗಾಂಧಿಪೇಟ್ ಲೇಕ್ ಈ ಸ್ಥಳಗಳಲ್ಲಿ ಚಿತ್ರಿಕರಣಗೊಂಡಿದೆ. ಇನ್ನು ಇದರಲ್ಲಿ ಕಬೀರ್ ದುಹನ್ ಸಿಂಗ್, ಅದಿತಿ ಬಾಲನ್, ಮಧು, ಪ್ರಕಾಶ್ ರಾಜ್, ಗೌತಮಿ, ಮೋಹನ್ ಬಾಬು ಸೇರಿದಂತೆ ಬಹುದೊಡ್ಡ ತಾರಾಗಣವೇ ಇದೆ.
ಯಾರಿದು ಶಕುಂತಲೆ?ರಿಷಿ ಕಣ್ವ ಮಹರ್ಷಿಗಳಿಗೆ ಕಾಡಿನಲ್ಲಿ ಶಕುಂತ ಪಕ್ಷಿಗಳ ಮಧ್ಯೆ ಪುಟ್ಟ ಮಗುವೊಂದು ಸಿಗುತ್ತದೆ. ಕಾಡಿನಲ್ಲಿ ಸಿಕ್ಕಿದ ಮಗುವನ್ನು ಕಣ್ವ ಋಷಿಗಳು ತಮ್ಮ ಆಶ್ರಮಕ್ಕೆ ತಂದು ಬೆಳೆಸುತ್ತಾರೆ. ಶಕುಂತ ಪಕ್ಷಿಗಳ ಮಧ್ಯೆ ದೊರಕಿದ ಕಾರಣ ಮಗುವಿಗೆ ಶಕುಂತಲೆ ಎಂದು ಹೆಸರಿಡುತ್ತಾರೆ. ಶಕುಂತ ಅಂದರೆ ಸುರಕ್ಷಿತ ಎಂದು ಆದಿ ಪರ್ವದಲ್ಲಿ ಕಣ್ವ ಮಹರ್ಷಿಗಳು ವಿವರಿಸಿದ್ದಾರೆ. ಶಕುಂತಲೆ ದುಶ್ಯಂತ ಮಹಾರಾಜನ ಪತ್ನಿ ಮತ್ತು ಚಕ್ರವರ್ತಿ ಭರತನ ತಾಯಿ ಎಂಬ ಉಲ್ಲೇಖವು ಇದೆ.
Koo App
SAMANTHA – DEV MOHAN: PAN-INDIA FILM ’SHAAKUNTALAM’ RELEASE DATE ANNOUNCEMENT… #Shaakuntalam – starring #Samantha and #DevMohan – gets a release date: 4 Nov 2022… #AlluArjun’s daughter #AlluArha is portraying a key role in the film… Directed by #Gunasekhar. Presented by #DilRaju and produced by #NeelimaGuna, #Shaakuntalam will release in #Telugu, #Hindi, #Tamil, #Malayalam and #Kannada.
–Taran Adarsh (@taran_adarsh)23 Sep 2022
ನನ್ನ ಸ್ನೇಹಿತೆಯಾಗಿರು ಎನ್ನುತ್ತಿದ್ದರು, ಅದೇನೆಂದು ಅರ್ಥವಾದಾಗ ಶಾಕ್​ ಆದೆ: ನಟಿ ತೆರೆದಿಟ್ಟ ಕರಾಳ ಅನುಭವ
ಅನಿಲ್​ ಕಪೂರ್​ ಮೊಮ್ಮಗನಿಗೆ ನಾಮಕರಣ: ಹೆಸರು ರಿವೀಲ್​ ಮಾಡಿ ಅರ್ಥವನ್ನೂ ತಿಳಿಸಿದ ನಟಿ ಸೋನಂ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:17 + four =
Remember me
