ಶಿವಮೊಗ್ಗ:ಸ್ವಾತಂತ್ರ್ಯ ಹೋರಾಟಗಾರ ವೀರ್​ ಸಾವರ್ಕರ್​ ಅವರ ಫೋಟೋ ಕಿತ್ತೆಸೆಯುವ ಮೂಲಕ ಶಿವಮೊಗ್ಗದಲ್ಲಿ ಕೆಲ ದಿನಗಳ ಹಿಂದೆ ಶುರುವಾಗಿದ್ದ ಗಲಾಟೆ ಹಿಂಸಾಚಾರ ಸ್ವರೂಪ ಪಡೆದುಕೊಂಡಿದ್ದು, ಮುಸ್ಲಿಂ ಮತ್ತು ಹಿಂದೂಗಳ ನಡುವೆ ಘರ್ಷಣೆಗೆ ಕಾರಣವಾಗಿತ್ತು. ಈ ಘಟನೆಯಲ್ಲಿ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕುವಿನಿಂದ ಇರಿದಿರುವ ಘಟನೆಯೂ ನಡೆದಿತ್ತು.
ಈ ಕುರಿತು ಇದಾಗಲೇ ಪ್ರತಿಕ್ರಿಯೆ ನೀಡಿದ್ದ ಮಾಜಿ‌ ಸಚಿವ ಕೆ.ಎಸ್.ಈಶ್ವರಪ್ಪನವರು, ವೀರ್​ ಸಾವರ್ಕರ್​ ಫೋಟೋ ಕಿತ್ತೆಸೆದು ಗಲಭೆಗೆ ಕಾರಣೀಕರ್ತರಾಗಿದ್ದು ಸೋಷಿಯಲ್​ ಡೆಮಾಕ್ರಟಿಕ್​ ಪಾರ್ಟಿ ಆಫ್​ ಇಂಡಿಯಾ (ಎಸ್​ಡಿಪಿಐ) ಕಾರ್ಯಕರ್ತ. ಅವನ ಹೆಂಡ್ತಿ ಕಾಂಗ್ರೆಸ್ ಪಾಲಿಕೆ ಸದಸ್ಯೆ. ಇದರಲ್ಲಿಯೇ ಗೊತ್ತಾಗುತ್ತದಲ್ಲ ಎಂದ ಈಶ್ವರಪ್ಪ, ಎಸ್​ಡಿಪಿಐ ಮನಸ್ಥಿತಿ ಬದಲಾಗಿಲ್ಲ. ಹಿಂದೂಗಳನ್ನು ಕೊಲೆ ಮಾಡಲು ಅವರು ಹೇಸುವುದಿಲ್ಲ. ಕೇರಳದಿಂದ ಹಾಗೂ ಹೊರಗಡೆಯಿಂದ ಬಂದವರಿಂದಲೂ ಈ ರೀತಿ ಆಗುತ್ತಿದೆ. ಮುಸಲ್ಮಾನ ಗೂಂಡಾಗಳಿಗೆ ಕಾಂಗ್ರೆಸ್ ಬೆಂಬಲ ಇದೆ. ಇಂಥ ಘಟನೆ ಮರುಕಳಿಸುತ್ತಿರುವುದಕ್ಕೆ ಕಾರಣ, ಕಾನೂನು ಸುವ್ಯವಸ್ಥೆಯ ವೈಫಲ್ಯ ಅಲ್ಲ, ಬದಲಿಗೆ ಕಾಂಗ್ರೆಸ್​ ನೀಡುತ್ತಿರುವ ಕುಮ್ಮುಕ್ಕು ಎಂದಿದ್ದರು. ಈ ಮಾತಿಗೆ ಕಾಂಗ್ರೆಸ್​ ಕಿಡಿಕಾರಿತ್ತು.
ಆದರೆ ಇದೀಗ ಆ ಮಾತು ನಿಜವಾಗಿದೆ. ಶಿವಮೊಗ್ಗದಲ್ಲಿ ಸ್ವಾತಂತ್ರ್ಯದ ದಿನದ ಸಂದರ್ಭದಲ್ಲಿ ಗಲಭೆಗೆ ಕಾರಣವಾಗಿದ್ದು ಅರೆಸ್ಟ್​ ಆಗಿರುವ ಪ್ರಮುಖ ಆರೋಪಿಗಳಾದ ಜಬೀವುಲ್ಲಾ, ನದೀಂ, ತನ್ವೀರ್​ ಮತ್ತು ಅಬ್ದುಲ್​ಗೆ ಎಸ್​ಡಿಪಿಐ ಲಿಂಕ್​ ಇರುವುದು ತನಿಖೆಯಿಂದ ತಿಳಿದುಬಂದಿದೆ. ಇಷ್ಟೇ ಅಲ್ಲದೇ ಜಬೀವುಲ್ಲಾದ ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾ (ಪಿಎಫ್​ಐ) ನಂಟು ಇರುವುದು ಕೂಡ ತಿಳಿದಿದೆ.
ಇವರು ಇದಾಗಲೇ ಸರ್ಕಾರದ ವಿರೋಧಿ ಪ್ರತಿಭಟನೆಗಳಲ್ಲಿ ತೊಡಗಿಸಿಕೊಂಡಿರುವ ವಿಡಿಯೋ ವೈರಲ್​ ಆಗಿದೆ. ಇದರಿಂದ ಶಿವಮೊಗ್ಗದಲ್ಲಿಯೂ ಸಾವರ್ಕರ್​ ಫೋಟೋ ನೆಪ ಮಾಡಿಕೊಂಡು ಕೋಮುಗಲಭೆ ಸೃಷ್ಟಿಸುವ ಹುನ್ನಾರ ಮಾಡಿದ್ದರು ಎಂಬ ಬಗ್ಗೆ ಸಂದೇಹಗಳು ಕಾಡತೊಡಗಿವೆ. ಇದೇ ವೇಳೆ ಎಸ್​ಡಿಪಿಐ ನಿಷೇಧ ಮಾಡಲು ರಾಜಕೀಯ ನಾಯಕರು ಸೇರಿದಂತೆ ಹಲವರು ಸರ್ಕಾರಕ್ಕೆ ಒತ್ತಾಯ ಮಾಡುತ್ತಲೇ ಇದ್ದು, ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.(ದಿಗ್ವಿಜಯ ನ್ಯೂಸ್​)
ಇಲ್ಲಿದೆ ನೋಡಿ ಆರೋಪಿಗಳ ಪ್ರತಿಭಟನೆಯ ವಿಡಿಯೋ:

.
ಶಿವಮೊಗ್ಗದಲ್ಲಿ ಕೋಮು ಗಲಭೆ ಸೃಷ್ಟಿ: ಆರೋಪಿಗಳದ್ದು ಕರಾಳ ಇತಿಹಾಸ- ಈ ಹಿಂದೆಯೂ ಮಾಡಿದ್ದರು ಘೋರ ಕೃತ್ಯ!

ಶಿವಮೊಗ್ಗದ ಗಲಭೆಗೆ ಕಾರಣನಾದವ ಎಸ್​ಡಿಪಿಐ ಕಾರ್ಯಕರ್ತ, ಹೆಂಡ್ತಿ ಪಾಲಿಕೆಯ ಕಾಂಗ್ರೆಸ್​ ಸದಸ್ಯೆ- ಇಷ್ಟೇ ಸಾಕಲ್ಲ: ಈಶ್ವರಪ್ಪ ಗರಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − fifteen =
Remember me
