​ಶಿವಮೊಗ್ಗ:ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ್​ ಸಾವರ್ಕರ್​ ಅವರ ಫೋಟೋ ಕಿತ್ತೆಸೆಯುವ ಮೂಲಕ ಶುರುವಾದ ಗಲಾಟೆ ಹಿಂಸಾಚಾರ ಸ್ವರೂಪ ಪಡೆದುಕೊಂಡಿದ್ದು, ಮುಸ್ಲಿಂ ಮತ್ತು ಹಿಂದೂಗಳ ನಡುವೆ ಘರ್ಷಣೆಗೆ ಕಾರಣವಾಗಿದೆ. ಈ ಘಟನೆಯಲ್ಲಿ ಇಬ್ಬರು ಹಿಂದೂ ಯುವಕರಿಗೆ ಚಾಕುವಿನಿಂದ ಇರಿದಿರುವ ಘಟನೆಯೂ ನಡೆದಿದೆ.
ಈ ಕುರಿತು ಕಿಡಿ ಕಾರಿರುವ ಮಾಜಿ‌ ಸಚಿವ ಕೆ.ಎಸ್.ಈಶ್ವರಪ್ಪ ನಿನ್ನೆಯ ಪ್ರಕರಣದಲ್ಲಿ 6 ಜನ ಗುಂಡಾಗಳು ಪ್ರೇಮ್ ಸಿಂಗ್ ಮೇಲೆ ಹಲ್ಲೆ ಮಾಡಿದ್ದಾರೆ. ಯುವಕ ಪ್ರೇಮ್ ಸಿಂಗ್ ಆಸ್ಪತ್ರೆಯಲ್ಲಿದ್ದಾನೆ. ಅವನು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾನೆ. ಈಗಲೇ ಏನು ಹೇಳೋಕೆ ಆಗುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಶಿವಮೊಗ್ಗ ಜನ ಶಾಂತಿಪ್ರಿಯರ ಊರು. ಹೊರಗಡೆಯಿಂದ ಬಂದ ಜನರಿಂದ ಈ ಕೃತ್ಯ ನಡೆದಿದೆ ಎಂದರು.
ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡುತ್ತಿದ್ದರು. ಚಾಕು ಇರಿದಿರುವವರನ್ನು ಕೂಡಲೇ ಬಂಧಿಸುವ ಕೆಲಸ ಸರ್ಕಾರ ಮಾಡಿದೆ. ಇನ್ನೂ ಕೆಲವರು ತಪ್ಪಿಸಿಕೊಂಡಿದ್ದಾರೆ. ನಮ್ಮ ಸರ್ಕಾರ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಪೊಲೀಸ್ ಇಲಾಖೆಯವರು ಸಾಕಷ್ಟು ಶ್ರಮ ಹಾಕಿ ಕೆಲಸ ಮಾಡ್ತಿದ್ದಾರೆ ಎಂದರು.
ಇದೇ ವೇಳೆ ಕಾಂಗ್ರೆಸ್ಸಿಗರು ಹಾಗೂ ದುಷ್ಕೃತ್ಯ ಎಸಗುತ್ತಿರುವ ಕಿಡಿಗೇಡಿಗಳ ವಿರುದ್ಧ ಕಿಡಿ ಕಾರಿದ ಈಶ್ವರಪ್ಪನವರು, ಕೆಲವು ಮುಸಲ್ಮಾನ ಗುಂಡಾಗಳಿಂದ ಹೀಗೆ ಆಗುತ್ತಿದೆ. ಇವರನ್ನು ಕರೆದು ಮುಸ್ಲಿಂ ನಾಯಕರು ಬುದ್ಧಿವಾದ ಹೇಳಬೇಕು. ಅವರು ಹೇಳಲಿಲ್ಲ ಎಂದರೆ ಅಂಥ ಗೂಂಡಾಗಳನ್ನು ಸರ್ಕಾರ ನೋಡಿಕೊಳ್ಳುತ್ತದೆ ಎಂದರು.
ವೀರ್​ ಸಾವರ್ಕರ್​ ಫೋಟೋ ಕಿತ್ತೆಸೆದು ಗಲಭೆಗೆ ಕಾರಣೀಕರ್ತರಾಗಿದ್ದು ಎಸ್​ಡಿಪಿಐ ಕಾರ್ಯಕರ್ತ. ಅವನ ಹೆಂಡ್ತಿ ಕಾಂಗ್ರೆಸ್ ಪಾಲಿಕೆ ಸದಸ್ಯೆ. ಇದರಲ್ಲಿಯೇ ಗೊತ್ತಾಗುತ್ತದಲ್ಲ ಎಂದ ಈಶ್ವರಪ್ಪ, ಎಸ್​ಡಿಪಿಐ ಮನಸ್ಥಿತಿ ಬದಲಾಗಿಲ್ಲ. ಹಿಂದೂಗಳನ್ನು ಕೊಲೆ ಮಾಡಲು ಅವರು ಹೇಸುವುದಿಲ್ಲ. ಕೇರಳದಿಂದ ಹಾಗೂ ಹೊರಗಡೆಯಿಂದ ಬಂದವರಿಂದಲೂ ಈ ರೀತಿ ಆಗುತ್ತಿದೆ. ಮುಸಲ್ಮಾನ ಗೂಂಡಾಗಳಿಗೆ ಕಾಂಗ್ರೆಸ್ ಬೆಂಬಲ ಇದೆ. ಇಂಥ ಘಟನೆ ಮರುಕಳಿಸುತ್ತಿರುವುದಕ್ಕೆ ಕಾರಣ, ಕಾನೂನು ಸುವ್ಯವಸ್ಥೆಯ ವೈಫಲ್ಯ ಅಲ್ಲ, ಬದಲಿಗೆ ಕಾಂಗ್ರೆಸ್​ ನೀಡುತ್ತಿರುವ ಕುಮ್ಮುಕ್ಕು ಎಂದರು.
ಎಸ್​ಡಿಪಿಐ ಬ್ಯಾನ್ ಮಾಡುವ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗಿದೆ, ಇದು ಶೀಘ್ರದಲ್ಲಿ ಕಾರ್ಯರೂಪದಲ್ಲಿ ಬರಲಿದೆ ಎಂದು ಇದೇ ವೇಳೆ ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಕೋಮು ಗಲಭೆ ಸೃಷ್ಟಿ: ಆರೋಪಿಗಳದ್ದು ಕರಾಳ ಇತಿಹಾಸ- ಈ ಹಿಂದೆಯೂ ಮಾಡಿದ್ದರು ಘೋರ ಕೃತ್ಯ!
ಶಿವಮೊಗ್ಗದಲ್ಲಿ ಹಿಂದೂ ಯುವಕರ ಮೇಲೆ ಚಾಕು ಇರಿತ: ನಾಲ್ವರು ಆರೋಪಿಗಳು ಅರೆಸ್ಟ್​- ಉಳಿದವರಿಗಾಗಿ ಶೋಧ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 7 =
Remember me
